ಕೋಟ್ಯಂತರ ಜೀವಿಗಳು ಬದುಕುತ್ತಿರುವುದು ಪರಿಸರದಿಂದ-ಬಿ.ಬಿ. ಸಸಾಲಟ್ಟಿ

Must Read

ಮೂಡಲಗಿ:-ತಾಲೂಕಿನ ಗುರ್ಲಾಪೂರ ಗ್ರಾಮದ ಪಿಎಂ ಶ್ರೀ ಶಾಸಕರ ಮಾದರಿ ಕನ್ನಡ ಶಾಲೆಯಲ್ಲಿ “ವಿಶ್ವ ಪರಿಸರ ದಿನಾಚರಣೆ” ಆಚರಿಸಲಾಯಿತು.

ಪರಿಸರ ದಿನಾಚರಣೆಯ ದಿನ ಮಾತ್ರ ನಮಗೆಲ್ಲ ಪರಿಸರ ನೆನಪಾಗಬಾರದು. ಕೋಟ್ಯಂತರ ಜೀವಿಗಳು ಪರಿಸರದಿಂದ ಬದುಕುತ್ತಿರುವುದು. ಮನುಷ್ಯ ಪರಿಸರ ದಿನಾಚರಣೆ ದಿನ ಮೂರ್ನಾಲ್ಕು ಸಸಿ ನೆಟ್ಟು, ನೂರಾರು ಮರಗಳನ್ನು ನಾಶ ಮಾಡುತ್ತಾನೆ, ಇದರಿಂದ ಪರಿಸರ ನಾಶಕ್ಕೆ ನಾವೆ ಮುನ್ನುಡಿ ಬರೆಯುತ್ತಿದ್ದೇವೆ ಎಂದು ಶಿಕ್ಷಕರಾದ ಬಿ.ಬಿ.ಸಸಾಲಟ್ಟಿ ಅವರು ತಮ್ಮ ಮಾತಿನ ಮೂಲಕ ಅಭಿಪ್ರಾಯ ಹಂಚಿಕೊಂಡರು.

ಪರಿಸರದಿಂದ ನಾವೆಲ್ಲರೂ ಬದುಕುತ್ತಿರುವುದು. ಅದಕ್ಕಾಗಿ ನಾವೆಲ್ಲರೂ ಮರಗಳನ್ನು ಮಗುವಂತೆ ಜೋಪಾನ ಮಾಡೋಣ ಎಂದು ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಎಲ್. ಪಿ. ನೇಮಗೌಡರ ಹೇಳಿದರು.

ಪುರಸಭೆ ಸದಸ್ಯರಾದ ಆನಂದ ಟಪಾಲ್ದಾರ್, ಶಿಕ್ಷಣ ಪ್ರೇಮಿಗಳು ನಾಗಪ್ಪ ಹಳ್ಳೂರ, ಶಿಕ್ಷಕರುಗಳಾದ ಎ.ಡಿ.ಪದಗಾನೂರ, ದೀಪಿಕಾ ನಡೋಣಿ,ಕವಿತಾ ಕಟಗಿ, ಜ್ಯೋತಿ ಕಲ್ಯಾಣಿ, ಶೋಭಾ ಪಾಲಭಾವಿ, ವಿದ್ಯಾಶ್ರೀ ನೇಮಗೌಡರ ಮತ್ತು ಮಕ್ಕಳು ಭಾಗಿಯಾಗಿದ್ದರು.
ಹಲವಾರು ಸಸಿಗಳನ್ನು ನೆಡುವುದರ ಮೂಲಕ ಈ ಕಾರ್ಯಕ್ರಮವನ್ನು ಅದ್ದೂರಿಯಿಂದ ಆಚರಿಸಲಾಯಿತು.
ಎಲ್.ಆರ್.ಸಾಲಿಮಠ ಸ್ವಾಗತಿಸಿದರು, ಬಿ.ವಾಯ್.ಮೋಮಿನ ನಿರೂಪಿಸಿದರು ಮತ್ತು ಎಸ್.ಬಿ.ದರೂರ ವಂದಿಸಿದರು.

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group