Homeಸುದ್ದಿಗಳುಪರಿಸರ ರಕ್ಷಣೆಯಿಂದ ಉತ್ತಮ ಆರೋಗ್ಯ ಪಡೆಯಲು ಸಾಧ್ಯ; ಶಾಸಕ ಮನಗೂಳಿ

ಪರಿಸರ ರಕ್ಷಣೆಯಿಂದ ಉತ್ತಮ ಆರೋಗ್ಯ ಪಡೆಯಲು ಸಾಧ್ಯ; ಶಾಸಕ ಮನಗೂಳಿ

spot_img

ಸಿಂದಗಿ; ಇಲ್ಲಿನ ನಿವಾಸಿಗಳ ವಾಯು ವಿಹಾರಕ್ಕೆ ಅನುಕೂಲವಾಗಲೆಂದು ಶಾಸಕರ ಅನುದಾನದಡಿ ರೂ. ೨೫ ಲಕ್ಷ ವೆಚ್ಚದಲ್ಲಿ ಉದ್ಯಾನವನ ನಿರ್ಮಿಸಲಾಗಿದೆ ಅರಣ್ಯ ಇಲಾಖೆ ಹಸಿರೀಕರಣ ಮಾಡಲು ಸಸಿಗಳನ್ನು ನೆಡುತ್ತಿದೆ ಇಷ್ಟು ಅವರ ಜವಾಬ್ದಾರಿ ಮುಗಿಯುತು ಅಂತಲ್ಲ ಇದರ ಸಂರಕ್ಷಣೆ ಇಲ್ಲಿನ ನಿವಾಸಿಗಳು ಜವಾಬ್ದಾರಿ ಹೆಚ್ಚಿದೆ ಪರಿಸರ ರಕ್ಷಣೆಯಿಂದ ಉತ್ತಮ ಆರೋಗ್ಯ ಪಡೆಯಲು ಸಾಧ್ಯ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಪಟ್ಟಣದ ಮನಗೂಳಿ ಲೇಔಟನಲ್ಲಿರುವ ಉದ್ಯಾನವನದಲ್ಲಿ ಸಿಂದಗಿ ಸಾಮಾಜಿಕ ಹಾಗು ಪ್ರಾದೇಶಿಕ ಅರಣ್ಯ ಇಲಾಖೆ ವತಿಯಿಂದ ಆಯೋಜಿಸಲಾದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ವಲಯ ಅರಣ್ಯಾಧಿಕಾರಿ ಇರ್ಷಾದ ನೆವಾರ ಮಾತನಾಡಿ, ಪ್ರತಿಯೊಬ್ಬರು ಒಂದೊಂದು ಗಿಡು ನೆಟ್ಟು ಬೆಳೆಸಿದರೆ ಮಾತ್ರ ನಾವು ಉತ್ತಮವಾದ ಪರಿಸರ ನಿರ್ಮಿಸಲು ಸಾಧ್ಯ ಇಲ್ಲದಿದ್ದರೆ ವಿವಿಧ ರೀತಿಯ ರೋಗಗಳು ಬರಲು ನಾವೆ ಕಾರಣಿಕರ್ತರಾಗುತ್ತೇವೆ. ಎಲ್ಲರು ಒಂದೊಂದು ಗಿಡ ನೆಟ್ಟರೆ ಮಾತ್ರ ನಾವು ನೀವು ಸೇರಿ ಪರಿಸರ ಉಳಿಸಲು ಸಾಧ್ಯ ಎಂದರು.

ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಸಂದೀಪ ಚೌರ್. ಜಿಲ್ಲಾ ಕೆಡಿಪಿ ಸದಸ್ಯ ನೂರ್ ಅತ್ತಾರ, ವಾರ್ಡ್ ಮೆಂಬರ್ ಅಬಿದ್ ಮುಲ್ಲಾ, ಶಾಲಾ ಮಕ್ಕಳು ಹಾಗೂ ವಾರ್ಡ್ ದಲ್ಲೀನ್ ಸಾರ್ವಜನಿಕರು ಹಾಜರಿದ್ದರು.

ತಾಲೂಕ ಪಂಚಾಯತ್ ಇಒ ಶ್ರೀ ರಾಮು ಅಗ್ನಿ, ಪುರಸಭೆ ಮುಖ್ಯಾಧಿಕಾರಿ ರಾಜಶೇಖರ್ ಹಾಗು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು…ಸಾಮಾಜಿಕ ವಲಯ ಅರಣ್ಯಾಧಿಕಾರಿ ಇರ್ಷಾದ್ ನೇವಾರ ಹಾಗು ಪ್ರಾದೇಶಿಕ ವ.ಅ.ಅಧಿಕಾರಿ ರಾಜೀವ್ ಬಿರಾದಾರ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಜನರು ಹಾಜರಿದ್ದರು

RELATED ARTICLES

Most Popular

error: Content is protected !!
Join WhatsApp Group