Homeಸುದ್ದಿಗಳುಸೌರಮಾನ ಶ್ರೀ ಲಕ್ಷ್ಮಿ ನರಸಿಂಹ ಜಯಂತಿ ಹಾಗೂ ಸ್ವಾತಿ ಪೂಜೆ

ಸೌರಮಾನ ಶ್ರೀ ಲಕ್ಷ್ಮಿ ನರಸಿಂಹ ಜಯಂತಿ ಹಾಗೂ ಸ್ವಾತಿ ಪೂಜೆ

ಮೈಸೂರು -ನಗರದ ಕಾಳಿದಾಸ ರಸ್ತೆಯಲ್ಲಿರುವ ಯದುಗಿರಿ ಯತಿರಾಜ ಶಾಖಾ ಮಠ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ಸೌರಮಾನ ಶ್ರೀ ಲಕ್ಷ್ಮಿ ನರಸಿಂಹ ಜಯಂತಿ ಹಾಗೂ ವಿಶೇಷ ಸ್ವಾತಿ ಪೂಜೆ ಆಯೋಜಿಸಲಾಗಿತ್ತು.

ಈ ಪೂಜಾ ಕೈಂಕರ್ಯದಲ್ಲಿ ಶಾಸಕ ಟಿ.ಎಸ್. ಶ್ರೀವತ್ಸ ಅವರು ಭಾಗವಹಿಸಿ ದೇವರ ಆಶೀರ್ವಾದ ಪಡೆದರು. ಬೆಳಿಗ್ಗೆಯಿಂದಲೇ ಸ್ವಾಮಿಗೆ ವಿಶೇಷ ಅಭಿಷೇಕ, ಅಲಂಕಾರ, ಮಹಾಮಂಗಳಾರತಿ, ಶಾತ್ತುಮೊರೈ, ತೀರ್ಥ ಪ್ರಸಾದವನ್ನು ಬಂದ ಭಕ್ತಾದಿಗಳಿಗೆ ವಿತರಿಸಲಾಯಿತು. ಸಂಜೆ ತೀರುವೀದಿ ಉತ್ಸವದಲ್ಲಿ ಅನೇಕ ಭಕ್ತಾದಿಗಳು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ದೇವಸ್ಥಾನದ ಸಿಇಓ ಕೆ.ಆರ್.ಯೋಗಾನರಸಿಂಹನ್ (ಮುರುಳಿ ಅಯ್ಯಂಗಾರ್), ಪುರೋಹಿತ ವೀರರಾಘವನ್, ತಾತಾಚಾರ್, ರಾಘವ, ವಿಶ್ವನಾಥ್, ಬಾಲಾಜಿ, ಶಂಕರ ಹಾಗೂ ಮುಂತಾದವರು ಉಪಸ್ಥಿತರಿದ್ದರು.

RELATED ARTICLES

Most Popular

error: Content is protected !!
Join WhatsApp Group