ಯೋಗ ದಿನದ ಅಂಗವಾಗಿ ಯೋಗ ಜಾಥಾ

Must Read

ಮೂಡಲಗಿ – ದಿ. ೨೧ ರಂದು ನಡೆಯಲಿರುವ ಮೂಡಲಗಿ ತಾಲೂಕಾ ಯೋಗ ದಿನಾಚರಣೆಯ ಪೂರ್ವಭಾವಿ ಯೋಗ ಜಾಥಾ ಕಾರ್ಯಕ್ರಮ ಸ್ಥಳೀಯ ಎಸ್ಎಸ್ಆರ್ ಕಾಲೇಜಿನಿಂದ ಪ್ರಾರಂಭವಾಯಿತು.

ಶಿವಾಪೂರದ ಶ್ರೀ ಅಡವಿಸಿದ್ದೇಶ್ವರ ಮಠದ ಸಿದ್ಧರಾಮ ಶ್ರೀಗಳು ಹಸಿರು ಧ್ವಜ ತೋರಿಸಿ ಜಾಥಾಕ್ಕೆ ಚಾಲನೆ ನೀಡಿದರು.

ಯೋಗ ಜಾಥಾವು ಕಾಲೇಜಿನಿಂದ ನಗರದ ಕಲ್ಮೇಶ್ವರ ವೃತ್ತದವರೆಗೂ ನಡೆಯಿತು. ಜಾಥಾದಲ್ಲಿ ಬಿಜೆಪಿ ಮುಖಂಡ ಪ್ರಕಾಶ ಮಾದರ, ಮಲ್ಲಪ್ಪ ಮದಗುಣಕಿ, ನಿಂಗಪ್ಪ ಫಿರೋಜಿ, ಕುಮಾರ ಗಿರಡ್ಡಿ, ಎಲ್ ಎಸ್ ಪೂಜೇರಿ, ಈರಪ್ಪ ಢವಳೇಶ್ವರ, ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಸೋನವಾಲಕರ, ವಿಜಯ ಸೋನವಾಲಕರ, ತಹಶೀಲ್ದಾರ ಶಿವಾನಂದ ಬಬಲಿ, ಬಿಇಒ ಅಜಿತ ಮನ್ನಿಕೇರಿ, ಸಿಡಿಪಿಓ ಯಲ್ಲಪ್ಪ ಗದಾಡಿ, ಆರಕ್ಷಕ ಸಿಬ್ಬಂದಿಗಳು ಹಾಗೂ ಆಯುಷ್ ಇಲಾಖೆಯ ಕಾರ್ಯಕರ್ತರು ಹಾಗೂ ಯೋಗ ಪ್ರಿಯರು ಪಾಲ್ಗೊಂಡಿದ್ದರು

ರಾಜ್ಯಸಭಾ ಸಂಸದ ಈರಣ್ಣ ಕಡಾಡಿಯವರ ನೇತೃತ್ವ ಹಾಗೂ ಮಾರ್ಗಸೂಚಿಗಳನುಸಾರ, ಮೂಡಲಗಿ ಶಿಕ್ಷಣ ಸಂಸ್ಥೆ ಹಾಗೂ ಆಯುಷ್ ಇಲಾಖೆಯ ಸಹಯೋಗದಲ್ಲಿ  ೧೧ ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಮೂಡಲಗಿಯ ಎಸ್ಎಸ್ಆರ್ ಕಾಲೇಜು ಮೈದಾನದಲ್ಲಿ ತಾಲೂಕಾ ಮಟ್ಟದ ಯೋಗಾಸನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ವಿವಿಧ ಹೊಣೆಗಾರಿಕೆಗಳನ್ನು ವಹಿಸಿಕೊಂಡು ಅಚ್ಚುಕಟ್ಟಾಗಿ ಯೋಗ ಕಾರ್ಯಕ್ರಮ ನೆರವೇರಿಸಬೇಕೆಂದು ಕಡಾಡಿಯವರ ನಿರ್ದೇಶನದ ಹಿನ್ನೆಲೆಯಲ್ಲಿ ಎಲ್ಲ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.

Latest News

ಜೀವದಾತ ರಕ್ತದಾನವೇ ಮಹಾದಾನ: ಫಾ.ಡಾ.ಅಗಸ್ಟೀನ್ ಜಾರ್ಜ್

ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರ“ಪ್ರಪಂಚದಲ್ಲಿ ಜೀವಜೀವಗಳನ್ನು ಉಳಿಸುವ ರಕ್ತದ ಪಾತ್ರವು ಮಹತ್ತರವಾದುದು. ಜೀವದಾತ ರಕ್ತದಾನವು ಮಹಾದಾನವಾಗಿದೆ” ಎಂದು ಎಂದು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ...

More Articles Like This

error: Content is protected !!
Join WhatsApp Group