ಹಾಡಿದರೆ ಹುಲ್ಯಾಳದ ಮಹಾದೇವಪ್ಪನಂತೆಯೇ ಹಾಡಬೇಕು -ಶರಣಬಸವ ಶಾಸ್ತ್ರಿಗಳು 

Must Read

ಜಮಖಂಡಿ –  ನಮ್ಮ ನಾಡಿನ ಶ್ರೇಷ್ಠ ತತ್ವ-ಜ್ಞಾನಿಗಳಾದ ಶ್ರೀ ಮನ್ ನಿಜಗುಣ ಶಿವಯೋಗಿಗಳ, ಸಪ೯ಭೂಷಣ ಶಿವಯೋಗಿಗಳ, ಮಹಾಲಿಂಗರಂಗರ, ದಾಸ ಶ್ರೇಷ್ಠರಾದ ಕನಕ-ಪುರಂದರರ ಪದ್ಯಗಳನ್ನು ಕೇಳುಗರಿಗೆ ಮುಟ್ಟುವಂತೆ ಹಾಡಿದ ಗಮಕಿ ಗಾನ ಸುಧಾಕರ ಮಹಾದೇವಪ್ಪ ಹುಲ್ಯಾಳ ಅವರು ಶಿವ ಭಜನಾ ಕ್ಷೇತ್ರದ ಒಬ್ಬ “ಪಂಡಿತ” ಎಂದು ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪ.ಪೂ.ಶರಣಬಸವ ಶಾಸ್ತ್ರಿಗಳು ಬಣ್ಣಿಸಿದರು .

ಅವರು ಜಮಖಂಡಿ ತಾಲೂಕಿನ ಗೋಠೆ-ಗದ್ಯಾಳ ಗ್ರಾಮದ ಹತ್ತಿರ ಶರಣ ಶ್ರೀ ಶಿವಲಿಂಗ ಚಪ್ಪರ ಅವರ ತೋಟದಲ್ಲಿ ನೂತನವಾಗಿ ನಿರ್ಮಿಸಿದ “ಮಹಾದೇವಪ್ಪ ಹುಲ್ಯಾಳ ಅವರ ಕಲಾಭವನದಲ್ಲಿ ನಡೆದ ಪ್ರಥಮ ಪುಣ್ಯ -ಸ್ಮರಣೋತ್ಸವ-ಹಾಗೂ ಸಂಗೀತೋತ್ಸವ ಕಾಯ೯ಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಬಸವ ಶಾಸ್ತ್ರಿಗಳು ಮಹಾದೇವಪ್ಪನವರು ಶಿವ ಭಜನಾ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಅಪಾರ ಮತ್ತು ಎಂದೂ ಮರೆಯಲಾಗದ್ದು ಎಂದು ಪ್ರಶಂಶಿಸಿದರು.

ಭಜನಾ ಕ್ಷೇತ್ರದ ಧುರೀಣರಾದ ಮಧುರಖಂಡಿಯ ಸ್ವಾಮಿ ಶಿದ್ದಗಿರಿಶ್ರೀಗಳು,  ಗುಜನಟ್ಟಿಯ ರಾಮಚಂದ್ರಪ್ಪ ಮುಕ್ಕನವರ, ಹುಲ್ಯಾಳದ ತಬಲಾಪಟು ಅಯ್ಯಪ್ಪ ಮಾಸ್ಟರ್ ಗುರವ, ನಿಂಗನೂರಿನ ಸತ್ಯಪ್ಪ ಮಾಸ್ತರ, ತೇರದಾಳದ ರಾಯಪ್ಪ ಕುಚನೂರ, ಹಣಮಂತಪ್ಪ ಆಲಬಾಳ, ಹಾರ್ಮೋನಿಯಂ ವಾದಕ ಮಲ್ಲಪ್ಪ ಬುದ್ನಿ ಅವರು ಸದಾ ಸ್ಮರಣೀಯರು ಎಂದರು.

ವೇದಿಕೆ ಮೇಲಿದ್ದ ಪೂಜ್ಯರು ಮಾತನಾಡಿದರು.ಇದೇ ಸಂದಭ೯ದಲ್ಲಿ ಹೆಸರಾಂತ ಗಾಯಕ.ಪಂ ರವೀಂದ್ರ ಸೊರಗಾಂವಿ ಅವರಿಗೆ “”ಗಾನಸುಧಾಕರ ಶ್ರೀ” ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾಡರಕೊಪ್ಪದ ಪೂಜ್ಯರಾದ ದಯಾನಂದ ಸರಸ್ವತಿ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಭೂ ಕೈಲಾಸ ಆಶ್ರಮದ ಮಹಾದೇವ ಮಹಾರಾಜರು, ಹುಬ್ಬಳ್ಳಿ ಶ್ರೀ ಸಿದ್ಧಾರೂಢ ಮಠದ ಧಮ೯ದಶಿ೯ಗಳಾದ ಶಾಮಾನಂದ ಪೂಜಾರಿ, ಬಿದರೊಳ್ಳಿಯ ಅಜೀತ ಮಹಾಸ್ವಾಮಿಗಳು, ಮಾಜಿ ಶಾಸಕ ಮಹೇಶ ಕುಮಟಳ್ಳಿ, ಜಿ.ಪಂ.ಮಾಜಿ ಸದಸ್ಯ ಅಜು೯ನ ದಳವಾಯಿ ಸೇರಿದಂತೆ ಅನೇಕ ಧುರೀಣರು ಉಪಸ್ಥಿತರಿದ್ದರು.

ಗೋಠೆ ಗ್ರಾಮದ ಮಲ್ಲಿಕಾರ್ಜುನ ಶಾಸ್ತ್ರಿಗಳು ಕಾರ್ಯಕ್ರಮ ನಿರ್ವಹಿಸಿದರು. ಕಲಾವಿದರಾದ ಶಿವಲಿಂಗಪ್ಪ ಮಂಕಣಿ, ಸಿದ್ದು ಉಪ್ಪಲದಿನ್ನಿ ,ಮುದುಕಣ್ಣ ಯತ್ನಾಳ, ಚಂದ್ರಶೇಖರ ತೋಳಮಟ್ಟಿ ಸೇವಾಕಾಯ೯ದಲ್ಲಿ ತೊಡಗಿದ್ದರು.ಭೂದಾನಿ, ಗುರುಸೇವಾಧುರೀಣ ಶಿವಲಿಂಗಪ್ಪ ಚಪ್ಪರ ಅವರನ್ನು ಅನೇಕ ಅಭಿಮಾನಿಗಳು ಗೌರವಿಸಿದರು.

ವಿವಿಧ ಕಲಾತಂಡಗಳಿಂದ ಸಂಗೀತ ಮತ್ತು ಭಜನಾ ಸೇವೆ ಜರುಗಿತು

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group