ಮೂಡಲಗಿ:-ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಬಿ.ಎ ೪ನೆಯ ಸೆಮಿಸ್ಟರ್ ಓದುತ್ತಿರುವ ವಿದ್ಯಾರ್ಥಿ ಲಕ್ಷ್ಮೀ ಎಮ್.ರಡರಟ್ಟಿ ಮಲೇಷಿಯಾದಲ್ಲಿ ಜುಲೈ, ೨೯ರಿಂದ ಅಗಷ್ಟ ೦೨ರವರೆಗೆ ನಡೆಯುವ ೧೦ ನೆಯ “ಏಷ್ಯನ್ ಪ್ಯಾರಾ ಟ್ವೇಕ್ವಾಂಡೋ ಚಾಂಪಿಯನ್ ಶಿಪ್” ಸ್ಪರ್ಧೆಯಲ್ಲಿ ಭಾಗವಹಿಸಲು ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಕುಮಾರಿ ಲಕ್ಮ್ಮೀ ಅವರು ಈ ಹಿಂದೆ ರಾಜ್ಯಮಟ್ಟದ ಟೇಕ್ವಾಂಡೋ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಒಂದು ಬಾರಿ ಚಿನ್ನದ ಪದಕ,ರಾಷ್ಟ್ರ ಮಟ್ಟದ ಎರಡು ಬಾರಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.
ವಿಯೆಟ್ನಾಂ ಮತ್ತು ಲೆಬನಾನ್ ರಾಷ್ಟ್ರದಲ್ಲಿ ಜರುಗಿದ ಅಂತಾರಾಷ್ಟ್ರೀಯ ಮಟ್ಟದ ಓಪನ್ ಟೇಕ್ವಾಂಡೋ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಸೋನವಾಲಕರ, ಉಪಾಧ್ಯಕ್ಷ ಆರ್.ಪಿ.ಸೋನವಾಲಕರ ಹಾಗೂ ಪ್ರಾಚಾರ್ಯ ಎಸ್.ಎಲ್.ಚಿತ್ರಗಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.