Homeಸುದ್ದಿಗಳುವಿದ್ಯೆಗೆ ಎಲ್ಲೆಡೆ ಗೌರವವಿದೆ - ಪಿ ಬಿ ಪಾಟೀಲ

ವಿದ್ಯೆಗೆ ಎಲ್ಲೆಡೆ ಗೌರವವಿದೆ – ಪಿ ಬಿ ಪಾಟೀಲ

ಹಣ ಸಂಪತ್ತು,ಅಧಿಕಾರಕ್ಕಿಂತ ವಿದ್ಯೆಗೆ ಎಲ್ಲೆಡೆ ಗೌರವವಿದೆ.ವಿದ್ಯಾವಂತರಾಗಿ ಬದಕನ್ನು ಉಜ್ವಲಗೊಳಿಸಿಕೊಳ್ಳಬೇಕೆಂದು ಮುಖ್ಯಮಂತ್ರಿ ಪದಕ ಪುರಸ್ಕೃತ ASI ಪಿ ಬಿ ಪಾಟೀಲ ಕರೆ ನೀಡಿದರು.

ಕಾದರವಳ್ಳಿಯ ಎಸ್ ವಿ ಕುಲಕರ್ಣಿ ಸರಕಾರಿ ಪ್ರೌಢಶಾಲೆಯಲ್ಲಿ ಜರುಗಿದ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು, ವಿದ್ಯಾರ್ಥಿಗಳಾಗಿದ್ದಾಗಲೇ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಗುರುವಿನ ಮಾರ್ಗದರ್ಶನದಲ್ಲಿ ನಡೆದರೆ ಭವಿಷ್ಯದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಹತ್ತನೇ ತರಗತಿ ಮಕ್ಕಳೊಂದಿಗೆ ಸಂವಾದ ನಡೆಸುತ್ತ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯರಾದ ಶಶಿಕಲಾ ಗುಡ್ಲಮನಿ ವಹಿಸಿಕೊಂಡು ಮಾತನಾಡುತ್ತ ಪೋಲಿಸ್ ಇಲಾಖೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುವ ಮೂಲಕ ಮುಖ್ಯಮಂತ್ರಿ ಪದಕ ಪಡೆದ ಪಿ ಬಿ ಪಾಟೀಲರ ಸಾಧನೆ ಅಮೋಘವಾದುದು. ಮಕ್ಕಳು ಸಾಧಕರ ಜೀವನ ಸಾಧನೆಯ ಮಾರ್ಗದಲ್ಲಿ ನಡೆಯಬೇಕಾದುದು ಇಂದು ಅತೀ ಅಗತ್ಯವಾಗಿದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಪೋಲಿಸ್ ಇಲಾಖೆಯ ಪರಶುರಾಮ ಭಜಂತ್ರಿ, ಹಿರಿಯ ಸಹ ಶಿಕ್ಷಕರಾದ ಎ ಎಸ್ ಪೂಜಾರ,ಮಹೇಶಕುಮಾರ,ಸಿ ಬಿ ತುರಮರಿ,ಎಮ್ ಕೆ ನಾವಲಗಿ,ಅರ್ ಎನ್ ಜೋಡಿ,ಎಮ್ ಐ ಕೊಂಡಿ,ಎಮ್ ಎಮ್ ಮಡ್ಲಿ ಹತ್ತನೇ ತರಗತಿ ಮಕ್ಕಳು ಉಪಸ್ಥಿತರಿದ್ದರು. ಡಾ.ಗಜಾನಂದ ಸೊಗಲನ್ನವರ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group