ಮೂಡಲಗಿ:-ಪಟ್ಟಣದ ಚೈತನ್ಯ ಸೊಸಾಯಿಟಿಯಲ್ಲಿ ಸೇವಾ ನಿವೃತ್ತ ಮುರಗೋಡರವರಿಗೆ ಶನಿವಾರ ಅಭಿನಂದನಾ ಕಾರ್ಯಕ್ರಮ ನಡೆಯುವುದು ಎಂದು ಕಾರ್ಯಕ್ರಮ ಆಯೋಜಕರು ತಿಳಿಸಿದ್ದಾರೆ.
ಸಮೀರವಾಡಿ ಸಕ್ಕರೆ ಕಾರ್ಖಾನೆಯ ವೆಬ್ರೀಜ್ ವಿಭಾಗದಲ್ಲಿ ಸುಮಾರು 33 ವರ್ಷ ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಮಲ್ಲಪ್ಪಾ ಮುರಗೋಡ ಅವರಿಗೆ ಇಲ್ಲಿನ ಗೆಳೆಯರ ಬಳಗದ ವತಿಯಿಂದ ಪಟ್ಟಣದ ಚೈತನ್ಯ ಅರ್ಬನ್ ಸೊಸೈಟಿ ಸಭಾ ಭವನದಲ್ಲಿ ಶನಿವಾರ ಜುಲೈ 12 ರಂದು ಸಂಜೆ 5 ಗಂಟೆಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಸಭೆಯ ಅಧ್ಯಕ್ಷತೆಯನ್ನು ಶಿಕ್ಷಕ ಯಲಗೌಡ ಪಾಟೀಲ ವಹಿಸುವರು. ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್ ಮುಖಂಡ ಅರ್ಜುನ ನಾಯಿಕವಾಡಿ, ಸೆಂತಿಲ್ ಇಂಜಿನಿಯರಿಂಗ್ ಕಂಪನಿ ಪ್ರಧಾನ ವ್ಯವಸ್ಥಾಪಕ ಶ್ರೀರಂಗ ಇತಾಪೆ, ನಿವೃತ್ತ ಶಿಕ್ಷಕರಾದ ಸಿ ಎಂ ಹಂಜಿ ಗುರುಗಳು, ನಿವೃತ್ತ ಯೋಧ ಶ್ರೀಮಂತ ಬಿರಡಿ, ಡಾ.ಯಾಕೂಬ್ ಸಣ್ಣಕ್ಕಿ, ನಿವೃತ್ತ ಕೃಷಿ ಅಧಿಕಾರಿ ಪ್ರಕಾಶ ನಿಡಗುಂದಿ, ಪಂಚಮಸಾಲಿ ಸಮಾಜ ಅಧ್ಯಕ್ಷ ಬಸವರಾಜ ರಂಗಾಪೂರ, ಹೆಸ್ಕಾಂ ಅಧಿಕಾರಿ ರಮೇಶ ಬಂಗೆನ್ನವರ, ನ್ಯಾಯವಾದಿ ಕೆ .ಪಿ ಮಗದುಮ್, ಉದ್ಯಮಿ ಮೌನೇಶ ಪತ್ತಾರ, ಪ್ರೊ.ಪ್ರದೀಪ ಲಂಕೆಪ್ಪನವರ, ಮುಖಂಡ ಅಶೋಕ ಮೂಡಲಗಿ, ಶಿಕ್ಷಕ ಜೆ. ಕೆ. ಪತ್ತಾರ, ಈರಪ್ಪ ಪತ್ತಾರ, ಚಿದಾನಂದ ಸೋನವಾಲ್ಕರ ಆಗಮಿಸುವರು.
ಚೈತನ್ಯ ಬ್ಯಾಂಕ್ ಮ್ಯಾನೇಜರ್ ಗಂಗಾಧರ ಬಿಜಗುಪ್ಪಿ ಉಪನ್ಯಾಸ ನೀಡುವರು.
ಮಹಾದೇವ ಜೋಲಾಪೂರ, ಮೀರಾಸಾಬ ಕಳ್ಳಿಮನಿ, ಅಲ್ತಾಫ್ ಹವಾಲ್ದಾರ, ಶಿವಬಸು ನೇಮಗೌಡರ, ಶಶಿಕಾಂತ ಬಾಗೋಜಿ, ಮುತ್ತಪ್ಪ ಹುಲ್ಯಾಳ, ಗೆಳೆಯರ ಬಳಗದ ಸದಸ್ಯರು ಭಾಗಿಯಾಗುವವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.