ಬೆಂಗಳೂರು – ಕರ್ನಾಟಕ ಸರ್ಕಾರವು ದ್ವಿ ಭಾಷಾ ನೀತಿಯನ್ನು ಜಾರಿಗೊಳಿಸಲು ಯೋಚಿಸುತ್ತಿದ್ದು ಇದನ್ನು ಕೈ ಬಿಟ್ಟು ತ್ರೀ ಭಾಷಾ ಸೂತ್ರವನ್ನು ಯಥಾವತ್ತಾಗಿ ಮುಂದುವರೆಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಹಿಂದಿ ಪ್ರೌಢಶಾಲಾ ಶಿಕ್ಷಕರ ಸಂಘದ ವತಿಯಿಂದ ವಿಧಾನಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಇವರಿಗೆ ಮನವಿಯನ್ನು ಸಲ್ಲಿಸಲಾಯಿತು..
ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಸುಮಾರು 500 ಶಿಕ್ಷಕರು ಹಾಜರಿದ್ದರು.
ಬೆಳಗಾವಿ ಭಾಗದ ಎಲ್ಲ ಹಿಂದಿ ಶಿಕ್ಷಕರು ಮನವಿಯನ್ನು ಮಾಡುತ್ತಿರುವಂತಹ ಸಂದರ್ಭ ಈ ಗಂಭೀರ ವಿಷಯದ ಬಗ್ಗೆ ಸಭಾಪತಿಗಳು ತಕ್ಷಣವೇ ಮುಖ್ಯಮಂತ್ರಿಗಳ ಜೊತೆ ಸಂಭಾಷಣೆ ಮಾಡಿ ಈ ಕೂಡಲೇ ದ್ವಿ ಭಾಷಾ ನೀತಿಯನ್ನು ಕೈ ಬಿಡಲು ನಿರ್ದೇಶಿಸಿದರು.
ಅಲ್ಲದೆ ಇನ್ನೂ ಹಲವಾರು ಅಧಿಕಾರಿಗಳಿಗೂ ಕೂಡ ತಮ್ಮ ಸಂದೇಶವನ್ನು ನೀಡುವುದರ ಮುಖೇನ ರಾಜ್ಯದಲ್ಲಿ ತ್ರಿ ಭಾಷಾ ಸೂತ್ರ ಅತಿ ಅವಶ್ಯಕದ ಬಗ್ಗೆ ಮನವರಿಕೆ ಮಾಡಿಕೊಟ್ಟರು. ತ್ರಿ ಭಾಷಾ ಸೂತ್ರ ಯಥಾ ಸ್ಥಿತಿ ಮುಂದುವರೆಸಲು ನಿರ್ದೇಶನ ನೀಡಿದರು ಬಸವರಾಜ ಹೊರಟ್ಟಿಯವರಿಗೆ ಸಮಸ್ತ ಕರ್ನಾಟಕ ರಾಜ್ಯದ ಹಿಂದಿ ಶಿಕ್ಷಕರ ವತಿಯಿಂದ ಅನಂತ ವಂದನೆಗಳನ್ನು ತಿಳಿಸಿದ್ದಾರೆ.

