ಬೆಳಗಾವಿ – ಕರ್ನಾಟಕ ರಾಜ್ಯ ರೈತ ಸಂಘ(ರಿ) ಹಾಗೂ ಕೂಲಿ ಕಾರ್ಮಿಕರ ಹಿತಾಸಕ್ತಿ ಸಂಘ ಮತ್ತು ವಿವಿಧ ಸಂಘಟನೆಗಳ ಒಕ್ಕೂಟದೊಂದಿಗೆ ರಾಜಾ ಲಖಮಗೌಡ ಜಲಾಶಯದಿಂದ ಹುಬ್ಬಳ್ಳಿ – ಧಾರವಾಡ ನಗರಗಳಿಗೆ ಕೈಗಾರಿಕಾ ಉದ್ಯಮಕ್ಕೆ ನೀರು ಒಯ್ಯುವ ಪ್ರಕ್ರಿಯೆಯನ್ನು ಬಂದ ಮಾಡಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಕೂಲಿ ಕಾರ್ಮಿಕರ ಹಿತರಕ್ಷಣಾ ಸಂಘದ ಜಿಲ್ಲಾ ಅಧ್ಯಕ್ಷ ಬಸವಪ್ರಭು ಸುರೇಶ ವಂಟಗೂಡಿ ಆಗ್ರಹಿಸಿದ್ದಾರೆ.
ಪತ್ರಿಕಾ ಪ್ರಕಟಣೆಯೊಂದನ್ನು ನೀಡಿರುವ ಅವರು, ಈ ಜಲಾಶಯದಿಂದ ಇಲ್ಲಿನ ಸಾರ್ವಜನಿಕರಿಗೇ ಕುಡಿಯಲು, ದನಕರುಗಳಿಗೆ ಮತ್ತು ಕೃಷಿ ಭೂಮಿಗಳಿಗೆ ನೀರು ಸಮರ್ಪವಾಗಿ ದೊರಕುತ್ತಿಲ್ಲ ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಇಲ್ಲಿನ ಜನತೆಯ ಬಗ್ಗೆ ವಿಚಾರ ಬಿಟ್ಟು ಬೇರೆ ಜಿಲ್ಲೆಗೆ ನೀರು ಪೂರೈಸುವದು ಎಷ್ಟರಮಟ್ಟಿಗೆ ಸೂಕ್ತ ಎಂದು ಪ್ರಶ್ನೆ ಮಾಡಿದ್ದಾರೆ.
ನಮ್ಮ ಬೆಳಗಾವಿ ಜಿಲ್ಲೆ ರೈತರು , ಸಾರ್ವಜನಿಕರು ಈಗಲೇ ಎಚ್ಚೆತ್ತುಕೊಳ್ಳದೆ ಹೋದಲ್ಲಿ ನಮಗೆ ಆಪತ್ತು ತಪ್ಪಿದ್ದಲ್ಲ ಮತ್ತು ಈ ಯೋಜನೆ ಪೂರ್ಣಗೊಂಡಲ್ಲಿ ಜಲಾಶಯದಲ್ಲಿ ನೀರು ಹೆಚ್ಚು ಕಡಿಮೆ 3 ತಿಂಗಳು ಮಾತ್ರ ಇರಬಹುದು ನಂತರ ಜಲಾಶಯ ಬತ್ತಿ ಹೋಗುವದು ನಿಶ್ಚಿತ ಅವಾಗ ನೀರಿಗಾಗಿ ಹಾಹಾಕಾರ ಉದ್ಭವವಾಗುವದು ಈ ಪರಿಸ್ಥಿತಿ ಅನುಭವಿಸುವುದಕ್ಕಿಂತ ನಾವೆಲ್ಲರೂ ಈವಾಗ್ಲೇ ಹೋರಾಟ ಮಾಡದಿದ್ದರೆ ಬರುವ ದಿನಮಾನಗಳಲ್ಲಿ ಸಾಕಷ್ಟು ತೊಂದರೆಗೊಳಗಾಗುವ ಸಾಧ್ಯತೆ ಇರುತ್ತದೆ ಅದಕ್ಕಾಗಿ ನಮ್ಮ ನೀರು ನಮ್ಮ ಹಕ್ಕು ಹೋರಾಟಕ್ಕೆ ಪರಿಯೊಬ್ಬರು ಸ್ವ ಇಚ್ಛೆಯಿಂದ ಪಾಲ್ಗೊಳ್ಳಬೇಕೆಂದು ವಂಟಮೂರಿ ವಿನಂತಿಸಿಕೊಂಡಿದ್ದಾರೆ.

