ಮೂಡಲಗಿ : ಮೂಡಲಗಿ ತಾಲೂಕಿನ ನೂತನ ತಾಲೂಕು ದಂಡಾಧಿಕಾರಿ ಹಾಗೂ ತಹಶೀಲ್ದಾರರಾಗಿ ಶ್ರೀಶೈಲ ಗುಡಮೆ ಅವರು ಸೋಮವಾರದಂದು ಅಧಿಕಾರ ಸ್ವೀಕರಿಸಲಿದ್ದಾರೆ.
ಇವರು 2017/18 ನೇ ಸಾಲಿನ ಕೆ. ಎ. ಎಸ್. ಅಧಿಕಾರಿಯಾಗಿರುತ್ತಾರೆ. ಇವರು ಈ ಮೊದಲು ಅಥಣಿ ತಾಲೂಕಿನಲ್ಲಿ ಗ್ರೇಡ್ 2 ತಹಶೀಲ್ದಾರರಾಗಿ ಕರ್ತವ್ಯವನ್ನು ಜನಪರವಾಗಿ, ನಿಷ್ಠಾವಂತ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆಂದು ಸಾರ್ವಜನಿಕರಿಂದ ತಿಳಿದು ಬಂದಿದೆ.
ಮೂಡಲಗಿಯಲ್ಲಿ ಇಲ್ಲಿಯವರೆಗೆ ಪ್ರಭಾರ ತಹಶೀಲ್ದಾರರಾಗಿ ಸೇವೆ ಸಲ್ಲಿಸುತ್ತಿದ್ದ ಶಿವಾನಂದ ಬಬಲಿ ತಹಶೀಲ್ದಾರರು ಗ್ರೇಡ್ 2 ಇವರು ಅಚ್ಚುಕಟ್ಟಾಗಿ ತಾಲೂಕಾ ಆಡಳಿತ ಕಾರ್ಯಬಾರವನ್ನು ಉತ್ತಮವಾಗಿ ನಡೆಸಿರುತ್ತಾರೆ ಅವರ ಅವಧಿಯಲ್ಲಿ ಭೂಮಿ, ಎ ಜೆ ಎಸ್ ಕೆ, ನ್ಯಾಯಾಲಯ ಪ್ರಕರಣ ಮತ್ತು ದೈನಂದಿನ ಇತರೆ ಕೆಲಸ ಕಾರ್ಯಗಳು ಉತ್ತಮ ರೀತಿಯಲ್ಲಿ ಪ್ರಗತಿ ಸಾಧಿಸಿರುವುದನ್ನು ಸ್ಮರಿಸಬಹುದು .
ಶಿವಾನಂದ ಬಬಲಿ ಆವರಿಂದ ಶ್ರೀಶೈಲ ಗುಡಮೆ ಅವರು ಸೋಮವಾರದಂದು ಅಧಿಕಾರ ಸ್ವೀಕರಿಸಲಿದ್ದಾರೆ.
ವರದಿ: ಮುರಿಗೆಪ್ಪ ಮಾಲಗಾರ