ರಂಗಭೂಮಿ ಕಲಾವಿದ ಶ್ರೀಕಾಂತ ಬಿಲಕೇರಿಗೆ ಗೌರವ ಸನ್ಮಾನ

Must Read

ಬಾಗಲಕೋಟೆ – ಹಳ್ಳಿ ಹಳ್ಳಿಯಲ್ಲಿ ಸಂಚರಿಸಿ ನಮ್ಮ ಜನಪದ ಸಂಸ್ಕೃತಿ ಯನ್ನು ಬಿಂಬಿಸುವ ಮೂಲ ಜನಪದ ಕಲೆಗಳು ಉಳಿಯಬೇಕೆಂದು  ‘ಎಲ್ಲ ಕಲಾವಿದರು’ ಎಂಬ ಯುಟ್ಯೂಬ್ ಚಾನೆಲ್ ನಲ್ಲಿ ಜನಪದರನ್ನು ಗುರುತಿಸುತ್ತಿರುವ ರಂಗಭೂಮಿ ಕಲಾವಿದ ಬೇವೂರಿನ ಶ್ರೀಕಾಂತ ಬಿಲಕೇರಿ ಅವರ ಕಾಯ೯ ಶ್ಲಾಘನೀಯ ಎಂದು ಪ.ಪೂ.ಶರಣಬಸವ ಶಾಸ್ತ್ರಿಗಳು ಅಭಿಪ್ರಾಯ ಪಟ್ಟರು.

ಅವರು ತಾಲೂಕಿನ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ಇಂದು ರವಿವಾರದ 106ನೇ ಸತ್ಸಂಗದಲ್ಲಿ ರಂಗಭೂಮಿ ಕಲಾವಿದ ಶ್ರೀಕಾಂತ ಬಿಲಕೇರಿ ಅವರನ್ನು ಗೌರವಿಸಿ ಮಾತನಾಡುತ್ತಾ ಅಂತಃಕರಣವನ್ನು ಶುದ್ದಿಗೊಳಿಸುವ ಶಕ್ತಿ ಜನಪದಕ್ಕಿದೆ. ಜಗತ್ತು ಇರುವವರೆಗೂ ಜನಪದ ಇರುತ್ತದೆ. ಸತ್ವಯುತವಾದ ಜನಪದ ಉಳಿಯಬೇಕು. ಜನಪದ ತತ್ವ ಮುಂದಿನ ಪೀಳಿಗೆಗೆ ಉಳಿಯಲು ಸಮಾಜ ಮತ್ತು ಸಕಾ೯ರ ಸಕಾರಾತ್ಮಕವಾಗಿ ಕೈಜೋಡಿಸಬೇಕೆಂದರು.

“ಲೋಕನಾಯಕಿ” ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಎಲ್ ಶಾಮಲಾ, ಆಶ್ರಮದ ಕುಮಾರ ಗುರುಪ್ರಸಾದ ಸ್ವಾಮೀಜಿ ಉಪಸ್ಥಿತರಿದ್ದರು . ಶ್ರೀ ಸಿದ್ಧಾರೂಢರ ಅಭಿಷೇಕ,ಸಹಸ್ರ ಬಿಲ್ವಾರ್ಚನೆ, ಸಿದ್ಧಾರೂಢರ ಆರನೇ ಅಧ್ಯಾಯದ ಪಾರಾಯಣ ಮಂಗಲ ಪ್ರಸಾದ ಜರುಗಿತು

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group