Homeಸುದ್ದಿಗಳುಭ್ರಷ್ಟ ಅಧಿಕಾರಿ ಮನೆ ಹಾಗು ಕಚೇರಿ ಮೇಲೆ ಲೊಕಾಯುಕ್ತ ದಾಳಿ ; ನಗದು, ಚಿನ್ನಾಭರಣ ವಶ

ಭ್ರಷ್ಟ ಅಧಿಕಾರಿ ಮನೆ ಹಾಗು ಕಚೇರಿ ಮೇಲೆ ಲೊಕಾಯುಕ್ತ ದಾಳಿ ; ನಗದು, ಚಿನ್ನಾಭರಣ ವಶ

spot_img

ಬೀದರ : ಕಲ್ಬುರ್ಗಿಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಸುನೀಲ್ ಕುಮಾರ್ ಮೇಲೆ ಇಂದು ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದು ಲೋಕಾಯುಕ್ತ ದಾಳಿವೇಳೆ ಅಪಾರ ಪ್ರಮಾಣದ ಬಂಗಾರದ ಒಡವೆ, ನಗರದು ಹಣ ಪತ್ತೆಯಾಗಿದೆ.

ಅಕ್ರಮವಾಗಿ ಕೊಟ್ಯಂತರ ರೂಪಾಯಿ ಆಸ್ತಿ ಮಾಡಿದ್ದಾರೆಂದು ಸಾರ್ವಜನಿಕರು ಕೊಟ್ಟ ದೂರಿನ ಆಧಾರದ ಮೇಲೆ ಕಲ್ಬುರ್ಗಿ ಹಾಗೂ ಬೀದರ್ ಲೋಕಾಯಕ್ತ ಪೊಲೀಸರು ಕಲ್ಬುರ್ಗಿಯ ಕಚೇರಿ ಹಾಗೂ ಅಲ್ಲಿರುವ ಬಾಡಿಗೆ ಮತ್ತು ಬೀದರ್ ನ ಜೈಲ್ ಕಾಲೋನಿಯಲ್ಲಿರುವ ಮನೆ ಹಾಗೂ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಹಳ್ಳಿಖೇಡ್ ಗ್ರಾಮದಲ್ಲಿರುವ ಮನೆ ಒಟ್ಟು ನಾಲ್ಕು ಕಡೆಗಳಲ್ಲಿ ಏಕಕಾಲಕ್ಕೆ 20ಕ್ಕೂ ಹೆಚ್ಚು ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಅಪಾರ ಪ್ರಮಾಣದ ಆಕ್ರಮ ಆಸ್ತಿಯನ್ನ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಲೋಕಾಯುಕ್ತ ಪೊಲೀಸರು ಪರಿಶೀಲನೆ ವೇಳೆಯಲ್ಲಿ ಕೋಟ್ಯಂತರ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದ್ದು 3 ಸೈಟ್, 1 ಮನೆ ಹಾಗೂ 1 ಕೆಜಿ 266 ಗ್ರಾಂನಷ್ಟು ಬಂಗಾರದ ಒಡವೆ ಪತ್ತೆಯಾಗಿದೆ, ಇನ್ನೂ ಎರಡೂವರೆ ಕೆಜಿಯಷ್ಟು ಬೆಳ್ಳಿಯ ಒಡವೆ ಜೊತೆಗೆ ಮನೆ ಹಾಗೂ ಬ್ಯಾಂಕ್ ಲಾಕರ್ ನಲ್ಲಿ ಸುಮಾರು 15 ಲಕ್ಷ ರೂಪಾಯಿ ನಗದು ಹಣ ಪತ್ತೆಯಾಗಿದೆ. ಇದರ ಜೊತೆಗೆ 89 ಲಕ್ಷದಷ್ಟು ವಿವಿಧ ಬ್ಯಾಂಕ್ ನ FD ಇಟ್ಟಿರುವುದು ಕೂಡಾ ದಾಖಲೆಯಿಂದಾ ಗೊತ್ತಾಗಿದೆ. ನಾಲ್ಕು ಕಡೆಯಲ್ಲಿಯೂ ದಾಳಿ ಮುಂದುವರೆದಿದ್ದು ಇನ್ನಷ್ಟು ಅಕ್ರಮ ಆಸ್ತಿ ಪತ್ತೆಯಾಗುವ ನಿರಿಕ್ಷೇಯಿದೆ ಎಂದು ಲೋಕಾಯುಕ್ತ ಎಸ್ಪಿ ಸಿದ್ಧರಾಜು ಹೇಳಿದ್ದಾರೆ

ವರದಿ : ನಂದಕುಮಾರ ಕರಂಜೆ, ಬೀದರ

RELATED ARTICLES

Most Popular

error: Content is protected !!
Join WhatsApp Group