ಬೆಂಗಳೂರು – ಏಷ್ಯಾನೆಟ್ ಸುವರ್ಣ ಸುದ್ದಿ ವಾಹಿನಿ ವತಿಯಿಂದ ವೈದ್ಯರ ದಿನಾಚರಣೆ ಅಂಗವಾಗಿ ಬೆಂಗಳೂರಿನ ಲಲಿತ್ ಸಭಾಂಗಣದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಹೆಲ್ತ್ ಕೇರ್ ಎಕ್ಸೆಲೆನ್ ಸ್ ಪ್ರಶಸ್ತಿ ಸ್ವೀಕರಿಸಿದ ಮಂಗಳೂರಿನ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಹೃದ್ರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿರುವ ಡಾ. ಪ್ರಭಾಕರರಿಗೆ ಪ್ರಶಸ್ತಿ ಪ್ರದಾನ ಅಭಿನಂದನಾ ಸಮಾರಂಭ ಭಾನುವಾರ ನಡೆಯಿತು.
ದಿನಾಂಕ 03 ರಂದು ಭಾನುವಾರ ಕನ್ನಡ ಭವನ ಕಾಸರಗೋಡು ದಕ್ಷಿಣ ಕನ್ನಡ ಜಿಲ್ಲಾ ಘಟಕ ಇದರ ವತಿಯಿಂದ ಕನ್ನಡ ಭವನ ಕಾಸರಗೋಡು ಕೇಂದ್ರ ಸಮಿತಿ ಸಂಸ್ಥಾಪಕರಾದ ಡಾ.ವಾಮನ್ ರಾವ್ ಬೇಕಲ್ ಹಾಗೂ ಶ್ರೀಮತಿ ಸಂಧ್ಯಾ ರಾಣಿ ಟೀಚರ್ ಇವರ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಘಟಕ ಇದರ ವತಿಯಿಂದ ಮಂಗಳೂರಿನ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಹೃದ್ರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥರು ಮತ್ತು ಇಂಟರ್ವೆನ್ಶನಲ್ ಕಾರ್ಡಿಯೋಲಜಿಸ್ಟ್, ಹೆಲ್ತ್ ಕೇರ್ ಎಕ್ಸಲೆನ್ಸ್ ಪ್ರಶಸ್ತಿ ಪುರಸ್ಕೃತರಾಗಿರುವ ಡಾಕ್ಟರ್ ಎಚ್ ಪ್ರಭಾಕರ್ ರಿಗೆ ಅಭಿನಂದನಾ ಕಾರ್ಯಕ್ರಮವನ್ನು ಅವರ ಸ್ವಗೃಹವಾದ ಚಿರಾಗ್ ವಾಸ್ ಲೇನ್ ಪಳ್ನೀರು ಇಲ್ಲಿ ಹಮ್ಮಿಕೊಳ್ಳಲಾಯಿತು.
ಕು. ಸ್ತುತಿ ಇವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಆರಂಭಗೊಂಡಿತು. ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಶ್ರೀಮತಿ ರೇಖಾ ಸುದೇಶ್ ರಾವ್ ಆಗಮಿಸಿರುವಂತಹ ಅತಿಥಿ ಅಭ್ಯಾಗತರನ್ನು ಸ್ವಾಗತಿಸಿದರು.
ಡಾ. ವಾಮನ್ ರಾವ್ ಬೇಕಲ್ ಸಂಸ್ಥಾಪಕ ಅಧ್ಯಕ್ಷರು ಪ್ರಾಸ್ತಾವಿಕ ನುಡಿಗಳನಾಡಿದರು. ಡಾ. ರವೀಂದ್ರ ಜೆಪ್ಪು ಗೌರವಾಧ್ಯಕ್ಷರು ಡಾಕ್ಟರ್ ಪ್ರಭಾಕರ್ ರಿಗೆ ಹೂಗುಚ್ಚ ನೀಡಿದರು. ಡಾ. ಪ್ರಭಾಕರ್ ಹಾಗೂ ಅವರ ಧರ್ಮ ಪತ್ನಿ ಶ್ರೀಮತಿ ನಿರ್ಮಲಾ ಪ್ರಭಾಕರ್ ಇವರನ್ನು ಕನ್ನಡ ಭವನ ಕಾಸರಗೋಡು ಕೇಂದ್ರ ಸಮಿತಿ ಸಂಚಾಲಕರಾದ, ಸಂಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ – ಸಂಧ್ಯಾ ರಾಣಿ ಟೀಚರ್ ಶಾಲುಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿ ಅಭಿನಂದಿಸಿ ಅಭಿನಂದನಾ ಪ್ರಶಸ್ತಿ ನೀಡಿದರು. ಬಳಿಕ ಡಾಕ್ಟರ್ ಪ್ರಭಾಕರರು ಮನದಾಳದ ಮಾತುಗಳನ್ನು ಸಭೆಗೆ ತಿಳಿಸಿದರು.
ಸಾಧಕರಿಗೆ ಪ್ರಶಸ್ತಿ, ಪುರಸ್ಕಾರಗಳು ಹೆಚ್ಚಿನ ಸ್ಫೂರ್ತಿ ನೀಡುತ್ತದೆ, ಆ ನಿಟ್ಟಿನಲ್ಲಿ ಹಿತೈಷಿಗಳನ್ನು ಸೇರಿಸಿ ಮನೆಗೆ ಬಂದು ಆದರಿಸಿದಾಗ ಮನ ತುಂಬಿ ಬಂತು ಇದಕ್ಕಾಗಿ ಕನ್ನಡ ಭವನ ಜಿಲ್ಲಾ ಘಟಕವನ್ನು ಅಭಿನಂದಿಸುತ್ತಿದ್ದೇನೆ, ಈ ಸಂಸ್ಕೃತಿ ಸಂಘಟನೆಗಳಿಗೆ ಮಾದರಿಯಾಗಲಿ ಎಂದು ಅಭಿನಂದನಾ ಪ್ರಶಸ್ತಿ ಸ್ವೀಕರಿಸಿ ಡಾ. ಎಚ್ ಪ್ರಭಾಕರ್ ತಿಳಿಸಿದರು. ಸಾಧಕರಿಗೆ ಪ್ರಶಸ್ತಿ ಪುರಸ್ಕಾರಗಳು ಹೆಚ್ಚಿನ ದುಡಿಮೆಗೆ ಸ್ಫೂರ್ತಿ ಎಂದರು.
ಡಾ. ರಾಜೇಶ್, ಡಾ. ಸತೀಶ್ , ಡಾ. ಶ್ರೀನಿವಾಸ ಕಲ್ಯಾಣಪುರ, ಶ್ರೀ ಯೋಗೀಶ್ ಕುಮಾರ್ ಜೆಪ್ಪು, ನಾಗರಾಜ್ ಮದ್ದೋಡಿ, ಲಕ್ಷ್ಮಿಕಾಂತ ,ಭಾವ ಅಜಿತ್ ರಾವ್, ಸಹೋದರಿ ಸುಜಾತ , ಮಗಳು ಡಾ. ಅಂಚಿತ, ಶ್ರೀಮತಿ ಸಂಧ್ಯಾ ರಾಣಿ ಟೀಚರ್, ಕಾರ್ಯಕ್ರಮದಲ್ಲಿ ಅಭಿನಂದನಾ ಭಾಷಣಗೈದರು. ಡಾ. ಶ್ರೀಮತಿ ರೇಖಾ ಸುದೇಶ್ ರಾವ್ ರ ಕೃತಿಯನ್ನು ಅತಿಥಿ ಅಭ್ಯಾಗತರಿಗೆ ನೀಡಿ ಲೋಕಾರ್ಪಣೆಗೊಂಡಿತು. ಕಾರ್ಯಕ್ರಮದ ಕೊನೆಯಲ್ಲಿ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷರಾದ ಉಮೇಶ ರಾವ್ ಕುಂಬಳೆ ಧನ್ಯವಾದಗೈದರು. ಉಪಹಾರ ಪಾನೀಯದೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ರೇಖಾ ಸುದೇಶ್ ರಾವ್ ನಿರ್ವಹಿಸಿದರು.