Homeಸುದ್ದಿಗಳುಉಪನ್ಯಾಸಕರಿಗೆ ಅಭಿನಂದನೆ ಹಾಗೂ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ

ಉಪನ್ಯಾಸಕರಿಗೆ ಅಭಿನಂದನೆ ಹಾಗೂ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ

ಬಾಗಲಕೋಟೆ :ಕರ್ನಾಟಕ ರಾಜ್ಯ ಪದವಿಪೂರ್ವ ಮಹಾವಿದ್ಯಾಲಯಗಳ ನೌಕರರ ಸಂಘ(ರಿ) ಧಾರವಾಡ ಜಿಲ್ಲಾ ಘಟಕ ಬಾಗಲಕೋಟ ವತಿಯಿಂದ ನಿವೃತ್ತರಾದ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಿಗೆ ಅಭಿನಂದನಾ ಸಮಾರಂಭ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭವನ್ನು ದಿನಾಂಕ 5 ರಂದು ಮಂಗಳವಾರ ಮದ್ಯಾಹ್ನ 3 ಗಂಟೆಗೆ ತೇಜಸ್ ಇಂಟರ್ನ್ಯಾಷನಲ್ ಸ್ಕೂಲ್ ನವನಗರ ಬಾಗಲಕೋಟೆನಲ್ಲಿ ಹಮ್ಮಿಕೊಳ್ಳಲಾಗಿದೆ

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಧಾನಪರಿಷತ್ ಸದಸ್ಯ H.R ನಿರಾಣಿ ವಹಿಸಲಿದ್ದಾರೆ ಕಾರ್ಯಕ್ರಮದ ಉದ್ಘಾಟನೆಯನ್ನು ವಿಧಾನಪರಿಷತ್ ಸದಸ್ಯಹಾಗೂ ಗೌರವಾಧ್ಯಕ್ಷ ಕರ್ನಾಟಕ ರಾಜ್ಯ ಪದವಿಪೂರ್ವ ನೌಕರರ ಸಂಘ (ರಿ) ಧಾರವಾಡದ ಎಸ್ ವಿ ಸಂಕನೂರು ನೆರವೇರಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಬಾಗಲಕೋಟೆ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪಿಎಸ್ ಕಾಂಬಳೆ ಹಾಗೂ ಧಾರವಾಡ ಕರ್ನಾಟಕ ರಾಜ್ಯ ಪದವಿಪೂರ್ವ ನೌಕರ ಸಂಘದ, ಕಾರ್ಯಾಧ್ಯಕ್ಷ ಬಿ ವೈ ಗೌಡರ ವಹಿಸಲಿದ್ದಾರೆ ಪ್ರಾಚಾರ್ಯ ಪಿ ಬಿ ಜಾವುರ ಹಾಗೂ A H ಬರಗಿ ಉಪನ್ಯಾಸಕ, ಎ ಎಚ್ ಬರಗಿ ಹಾಗೂ ಅಧ್ಯಕ್ಷರು ಬಾಗಲಕೋಟ ಜಿಲ್ಲಾ ಪದವಿಪೂರ್ವ ನೌಕರರ ಸಂಘ, S, S ಗೌಡರ ಹಾಗೂ ಸುನಿಲ್ ಮುತ್ತಲಗೇರಿ ಇತರರು ಭಾಗವಹಿಸಲಿದ್ದಾರೆ.

ಬಾಗಲಕೋಟ್ ಜಿಲ್ಲಾ ಪದವಿ ಪೂರ್ವ ನೌಕರ ಸಂಘದ ಅಧ್ಯಕ್ಷರಾದ A H ಬರಗಿ ಮಾತನಾಡಿ ಕಾರ್ಯಕ್ರಮದ ಕುರಿತಾದ ಮಾಹಿತಿಯನ್ನು ಹಂಚಿಕೊಂಡರು. ಈ ಕಾರ್ಯಕ್ರಮದಲ್ಲಿ ಶೈಕ್ಷಣಿಕ ವರ್ಷದಲ್ಲಿ ನಿವೃತ್ತರಾದ ಬಾಗಲಕೋಟೆ ಜಿಲ್ಲೆಯ ಎಲ್ಲ ಉಪನ್ಯಾಸಕರಿಗೆ ಅಭಿನಂದನ ಸಮಾರಂಭ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ವಿತರಿಸಲಾಗುವುದೆಂದು ತಿಳಿಸಿದರು ಬಾಗಲಕೋಟ್ ಜಿಲ್ಲೆಯ ಎಲ್ಲ ಪ್ರಾಚಾರ್ಯರು ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿಯವರು ಕಾಲೇಜಿನ ಅವಧಿಯ ನಂತರ ಬಂದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೋರಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group