Homeಸುದ್ದಿಗಳುಸಾರಿಗೆ ನೌಕರರ ಮುಷ್ಕರ ಕಲ್ಯಾಣ ಕರ್ನಾಟಕ ಪ್ರಯಾಣಿಕರ ಪರದಾಟ..

ಸಾರಿಗೆ ನೌಕರರ ಮುಷ್ಕರ ಕಲ್ಯಾಣ ಕರ್ನಾಟಕ ಪ್ರಯಾಣಿಕರ ಪರದಾಟ..

ಬೀದರ – ರಾಜ್ಯದಲ್ಲಿ KSRTC ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಗಡಿ ಜಿಲ್ಲೆ ಬೀದರ್‌ಗೂ ತಟ್ಟಿದ ಸಾರಿಗೆ ನೌಕರರ ಮುಷ್ಕರದ ಬಿಸಿ. ಬೀದರ್‌ನಲ್ಲಿ ರೋಡಿಗಿಳಿಯದ ಕಲ್ಯಾಣ ಕರ್ನಾಟಕ ಸಾರಿಗೆ ಬಸ್‌ಗಳು.

ಬೀದರ್‌ನಿಂದ ಹಳ್ಳಿ, ನಗರಗಳಿಗೆ, ತೆರಳಲು ಬಸ್ ಸಿಗದೇ ಪ್ರಯಾಣಿಕರ ಪರದಾಟ ಕಂಡುಬಂತು
ತೆಲಂಗಾಣ ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆ ತೆರಳಲು ಪ್ರಯಾಣಿಕರು ಆಗಮಿಸಿದ್ದರು. ಮಹಿಳೆಯರು ಮಕ್ಕಳೊಂದಿಗೆ ಆಗಮಿಸಿದ್ದರು.ಬಸ್ ಇಲ್ಲದ ಕಾರಣ ಮರಳಿ ಮನೆಗೆ ತೆರಳಿದ ಪ್ರಯಾಣಿಕರು.
ಹಿಂದು ಧರ್ಮೀಯರ ಪವಿತ್ರ ಶ್ರಾವಣ ಮಾಸ ಪ್ರಯುಕ್ತ ಆಧ್ಯಾತ್ಮಿಕ ಕೇಂದ್ರಗಳಿಗೆ ಭೇಟಿ ಕೊಡುವವರ ಸಂಖ್ಯೆ ಈ ಸಮಯದಲ್ಲಿ ಜಾಸ್ತಿ ಇರುತ್ತದೆ. ಸರ್ಕಾರದ ಶಕ್ತಿ ಯೋಜನೆಯನ್ನು ನಂಬಿ ವಿವಿಧ ದೇವಸ್ಥಾನ ಕ್ಕೆ ತೆರಳಲು ಬಂದ ಮಹಿಳೆಯರು ನಿರಾಶೆಯಿಂದ ಮರಳಬೇಕಾಯಿತು.

ಸಾರಿಗೆ ಬಸ್ ಇಲ್ಲದ ಹಿನ್ನೆಲೆ ಕೆಲ ಪ್ರಯಾಣಿಕರು ಖಾಸಗಿ ವಾಹನಗಳಿಗೆ ಮೊರೆ ಹೋದರು. ಸಾರಿಗೆ ಸಿಬ್ಬಂದಿಯ ಮನವೊಲಿಸಲು ಮುಂದಾದರಾದರೂ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಕರ್ತವ್ಯಕ್ಕೆ ಹಾಜರಾಗದ ಜಿಲ್ಲೆಯ 6 ಡಿಪೋಗಳ ಸುಮಾರು 2 ಸಾವಿರ ನೌಕರರಿಂದ ಮುಷ್ಕರ ನಡೆಯಿತು
ರಾತ್ರಿ ವಿವಿದ ಹಳ್ಳಿಗಳಿಗೆ ತೆರಳಿದ್ದ ಬಸ್‌ಗಳನ್ನು ಡಿಪೋಗೆ ತರುತ್ತಿರುವ ಸಾರಿಗೆ ನೌಕರರು ಇಲ್ಲಿಗೆ ತಂದು ನಿಲ್ಲಿಸುತ್ತಿದ್ದಾರೆ‌ ಪ್ರತಿ ನಿತ್ಯದಂತೆ ಇಂದು ಕೂಡಾ ಪೋಲಿಸರು ನಾಯಿಯೊಂದಿಗೆ ಬಂದು ನಗರ ಬಸ್ ನಿಲ್ದಾಣ ತಪಾಸಣೆ ನಡೆಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೋಲಿಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ವರದಿ : ನಂದಕುಮಾರ ಕರಂಜೆ, ಬೀದರ

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group