ಸಿಂದಗಿ – ನಗರದ 14ನೇ ವಾರ್ಡಿನ ಬೊಮ್ಮಲಿಂಗೇಶ್ವರ ದೇವಸ್ಥಾನದ ಬಳಿ 2023-24 ನೇ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಯೋಜನೆಯಡಿಯಲ್ಲಿ ರೂ. 25 ರೂ ಲಕ್ಷ ಮೊತ್ತದಲ್ಲಿ ಪುರಾತನ ಭಾವಿಯನ್ನು ಸ್ವಚ್ಛಗೊಳಿಸಿ ನೂತನವಾಗಿ ನಿರ್ಮಾಣವಾದ ನೀರಿನ ಬಾವಿಯನ್ನು ಶಾಸಕರಾದ ಅಶೋಕ ಮನಗೂಳಿ ಉದ್ಘಾಟಿಸಿದರು
ಇದೆ ಸಂದರ್ಭದಲ್ಲಿ ಪರಮ ಪೂಜ್ಯರುಗಳು ಡಾ. ಪ್ರಭು ಸಾರಂಗದೇವ ಶಿವಾಚಾರ್ಯ, ಪುರಸಭೆ ಅಧ್ಯಕ್ಷರಾದ ಡಾ. ಶಾಂತವಿರ ಮನಗೂಳಿ, ಉಪಾಧ್ಯಕ್ಷರಾದ ಸಂದೀಪ ಚೌರ, ಸದಸ್ಯ ಗೊಲ್ಲಾಳ ಬಂಕಲಗಿ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುರೇಶ ಪೂಜಾರಿ, ಜಿಲ್ಲಾ ಕೆಡಿಪಿ ಸದಸ್ಯ ಶಿವಣ್ಣ ಕೊಟರಗಸ್ತಿ, ನಾಮ ನಿರ್ದೇಶನ ಸದಸ್ಯ ಮಲ್ಲು ಸದುಗೋಳ, ಗ್ಯಾರಂಟಿ ಯೋಜನಾ ಸದಸ್ಯೆ ಸುನಂದಾ ಯಂಪುರೆ, ಹಿಂದುಳಿದ ವರ್ಗಗಳ ಕಲ್ಯಾಣಧಿಕಾರಿ ರವೀಂದ್ರ ಬಂಥನಾಳ, ಕೆ ಆರ್ ಐ ಡಿ ಎಲ್ ಅಧಿಕಾರಿ ರಾಜಶೇಖರ್,ಪಕ್ಷದ ಮುಖಂಡರಾದ ಅಳ್ಳೊಳ್ಳಿ ಬುಡ್ಡಾ, ಪ್ರಕಾಶ ಪೂಜಾರಿ, ಸೇರಿದಂತೆ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.