Homeಲೇಖನಹಾಸನ ನಾಟ್ಯಕಲಾ ನಿವಾಸ ನೃತ್ಯ ಸಂಸ್ಥೆಯ ನೖತ್ಯ ಸಂಭ್ರಮ!

ಹಾಸನ ನಾಟ್ಯಕಲಾ ನಿವಾಸ ನೃತ್ಯ ಸಂಸ್ಥೆಯ ನೖತ್ಯ ಸಂಭ್ರಮ!

ಹಾಸನದ ರತ್ನಕಲಾ ಪದ್ಮ ಕುಟೀರ ಟ್ರಸ್ಟ್ (ರಿ) ನ ಭಾಗವಾಗಿ, ಸತತ ೧೮ ವರ್ಷಗಳಿಂದ ಹಾಸನದ ನಾಟ್ಯಕಲಾ ನಿವಾಸ್ ಸಂಸ್ಥೆಯು ಹಲವಾರು ದೇಶಗಳಲ್ಲಿ ಪ್ರಖ್ಯಾತಿ ಹೊಂದಿರುವ ಸಂಸ್ಥೆ. ಹಾಸನದ ಹೆಸರನ್ನ ವಿಶ್ವ ಭೂಪಟದಲ್ಲಿ ದಾಖಲಿಸಿದೆ. ಭಾರತೀಯ ನೃತ್ಯ ಪರಂಪರೆಯ ವಿಭಿನ್ನ ಶೈಲಿಗಳ ಜೊತೆಯಲ್ಲಿ ವಿದೇಶೀಯ ನೃತ್ಯ ಪರಂಪರೆಯನ್ನ ಹಾಸನ ಜನತೆಗೆ ಪರಿಚಯಿಸಿದ ಹೆಗ್ಗಳಿಕ್ಕೆ ಈ ಸಂಸ್ಥೆಯದು.

ಇತ್ತೀಚೆಗೆ ಹಾಸನದ ಹಾಸನಾಂಬಾ ಕಲಾಕ್ಷೇತ್ರದಲ್ಲಿ ೧೮ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ‘ಹರಿಹರ ಸುತ’ – ಅಯ್ಯಪ ಸ್ವಾಮಿಯ ಚರಿತ್ರೆ ಆಧಾರಿತ ನೃತ್ಯ ನಾಟಕವನ್ನು ಸುಮಾರು ೧೦೦ ಸಂಸ್ಥೆಯ ಮಕ್ಕಳೊಂದಿಗೆ ಪ್ರಸ್ತುತಪಡಿಸಿತು. ಮೈಸೂರಿನ ಖ್ಯಾತ ವಾದ್ಯ ಕಲಾವಿದರುಗಳಾದ ವಿಕ್ರಂ ಭರದ್ವಾಜ, ಸಮೃದ್ ಶ್ರೀನಿವಾಸ್ , ಸುಜೇಯೇಂದ್ರ, ವಿನಯ್ ರಂಗದೊಳ್ ಹಾಗು ಕೇರಳದ ಹರಿದಾಸ್ ಸೇರಿದಂತೆ, ಸುಬ್ರ್ಯಮಣ್ಯರಾವ್ ಹಾಗು ಹರಿಣಾಕ್ಷಿ , ವಿದ್ವಾನ್ ಉನ್ನತ್ ಜೈನ ಹಾಸನ್ ಇವರ ಧ್ವನಿ ಯೊಂದಿಗೆ ರೂಪುಗೊಂಡ ಪ್ರಸ್ತುತಿ ಹಾಸನದ ಜನಮನ ತಲುಪಿದಲ್ಲದೆ ಭಾಗವಹಿಸಿದ ಹಿರಿಯ ಕಿರಿಯ ಕಲಾವಿದರಿಗೆ ವಿದ್ಯಾರ್ಥಿಗಳಿಗೆ ಶ್ರೀ ಅಯ್ಯಪಸ್ವಾಮಿಯ ಕಥಾ ಪರಿಚಯದೊಂದಿಗೆ ವಿಭಿನ್ನವಾಗಿ ಮೂಡಿಬಂತು.. ರಂಗದ ಮೇಲಿನ ಪ್ರಸ್ತುತಿಗೆ ತಾಂತ್ರಿಕವಾಗಿ ಹಾಸನದ ಪ್ರದೀಪ್ ಬೆಳಕಿನ ವಿನ್ಯಾಸ ಮಾಡಿ ಪ್ರಸ್ತುತಿಯ ಸೊಬಗನ್ನು ಹೆಚ್ಚಿಸಿದರು.

ಅಂತಾರಾಷ್ಟ್ರೀಯ ಕಲಾವಿದರಾದ ಉನ್ನತ್ ಜೈನ್ ರವರ ಪರಿಕಲ್ಪನೆಯ ಈ ಪ್ರಸ್ತುತಿಗೆ ಸ್ವತಃ ಅವರೇ, ಸಾಹಿತ್ಯ,, ಹಾಡುಗಳನ್ನು ಬರೆದು, ಸಂಪೂರ್ಣ ನೃತ್ಯ ಪ್ರಸ್ತುತಿಯ ಸಂಯೋಜನೆ ಮಾಡಿದ್ದರು. ಇವರ ಶಿಷ್ಯರಾದ ಕುಮಾರಿ ಮಾನಸ ಆರ್ ನಾಡಿಗ್, ಕುಮಾರಿ ಮನನ, ಕುಮಾರಿ ವೈಷ್ಣವಿ ಜಯರಾಮ್, ಕುಮಾರಿ ಮೇಘನಾ ಎಚ್.ಆರ್, ಕುಮಾರಿ ಸುಯ್ಯಜ್ಞ , ಕುಮಾರಿ ಆಪ್ತ ಸಂಯೋಜನೆಯಲ್ಲಿ ಸಹಕರಿಸಿ ಅದ್ದೂರಿಯಾಗಿ ವಿಜೃಂಭಣೆಯಿಂದ ಕಾರ್ಯಕ್ರಮ ಮೂಡಿಬಂತು.

ಈ ನೖತ್ಯ ನಂತರ ಕಾರ್ಯಕ್ರಮದ ಮಧ್ಯೆ
ಹಾಸನದ ಪ್ರತಿಷ್ಠಿತ ವೈದ್ಯರಾದ ಶ್ರೀಮತಿ ಸೌಮ್ಯಮಣಿ ಹಾಗು ಹಾಸನ ಜಿಲ್ಲೆಯ ಬಹುಮುಖಿ ಕಲಾವಿದೆ ರಮ್ಯಾ ಸೂರಜ್ ಈರ್ವರಿಗೂ ‘ ಸಮಾಜ ಸೇವಾ ತಿಲಕ’ ಬಿರುದು ನೀಡಿ ಗೌರವಿಸಲಾಯಿತು.

೧೮ನೇ ವರ್ಷದ ವಿಶೇಷ ಕಾರ್ಯಕ್ರಮಕ್ಕೆ ಮೆರಗು ನೀಡಲು ಮಂಗಳೂರಿನ ಶ್ರೀಮತಿ ರಾಧಿಕಾ ಶೆಟ್ಟಿಯವರ ನೇತೃತ್ವದ ‘ನಾಟ್ಯ ದಾಸೋಹಂ’ ೭ನೇ ಪ್ರಸ್ತುತಿಯನ್ನು, ಕರ್ನಾಟಕದ ಪ್ರಸಿದ್ಧ ಹಾಗು ಪ್ರತಿಷ್ಠಿತ ಕಲಾವಿದರಾದ ಮಂಗಳೂರಿನ ಶ್ರೀಮತಿ ರಾಧಿಕಾ ಶೆಟ್ಟಿ, ಪುತ್ತೂರಿನ ಶ್ರೀಮತಿ ಮಂಜುಳಾ ಸುಬ್ರಮಣ್ಯ, ಮಂಗಳೂರಿನ ಪ್ರಸಿದ್ಧ ಕರ್ನಾಟಕ ಕಲಾಶ್ರೀ ಬಿರುದಿನ ಶ್ರೀಮತಿ ಶಾರದಾಮಣಿ ಶೇಖರ್ ಹಾಗು ಶ್ರೀಮತಿ ರಾಜಶ್ರೀ ಶೆಣೈ, ಹಾಸನದ ಉನ್ನತ್ ಜೈನ, ಉಡುಪಿಯ ಶ್ರೀಮತಿ ಮಂಜರಿ ಚಂದ್ರ ಪುಷ್ಪರಾಜ್, ತುಮಕೂರಿನ ಡಾ. ಸಾಗರ್ ಟಿಎಸ್ ಹಾಗು ಮಂಗಳೂರಿನ ಶ್ರೀಮತಿ ವಿದ್ಯಾಶ್ರೀ ರಾಧಾಕೃಷ್ಣ ಅವರು ಕರ್ನಾಟಕ, ದಾಸ ಪರಂಪರೆಯ ಕನ್ನಡ ಸಾಹಿತ್ಯದ ಮೇರು ಸಾಹಿತ್ಯಗಾರರಾದ ಶ್ರೀಪಾದರಾಯರು, ವ್ಯಾಸತೀರ್ಥರು, ವಾದಿರಾಜರು, ಪುರಂದರದಾಸರು, ಕನಕದಾಸರು, ವಿಜಯದಾಸರು ಹಾಗು ಜಗನ್ನಾಥ ದಾಸರ ಅಪರೂಪದ ಸಾಹಿತ್ಯಕೆ ಸಂಚಾರೀಭಾವದೊಂದಿಗೆ ನೃತ್ಯ ಸಂಯೋಜಿಸಿ ಪ್ರಸ್ತುತಿಪಡಿಸಿದರು. ಹಿಮ್ಮೇಳದಲ್ಲಿ ಬೆಂಗಳೂರಿನ ಖ್ಯಾತ ವಿದ್ವಾನ್ ಶ್ರೀ ನಂದಕುಮಾರಿ ಉನ್ನಿಕೃಷ್ಣನ್ ಹಾಡುಗಾರಿಕೆಯಲ್ಲಿ, ಮೃದಂಗ ವಿದ್ವಾನ್ ಶ್ರೀ ಕಾರ್ತಿಕ್ ವೈಧಾತ್ರಿ , ಕೊಳಲು ವಿದ್ವಾನ್ ಶ್ರೀ ನಿತೀಶ್ ಅಮ್ಮಣ್ಣಾಯ ಹಾಗು ನಟುವಾಂಗದಲ್ಲಿ ಶ್ರೀಮತಿ ವಿದುಷಿ ಸುಮಂಗಲ ರತ್ನಕರ್ ಸಹಕರಿಸಿದರು. ದಾಸರ ಸಂಪೂರ್ಣ ಪರಿಚಯ, ಕಾಲಘಟ್ಟ, ಆಯ್ದ ರಚನೆಯ ವಿಶೇಷತೆಯನ್ನು ವಿದುಷಿ ಡಾ. ರಮ್ಯಾ ಸೂರಜ್ ಪ್ರೇಕ್ಷಕರಿಗೆ ಪರಿಚಯಿಸಿಕೊಟ್ಟರು. ನಾಟ್ಯ ದಾಸೋಹಂನ ೮ ನೇ ಪ್ರಸ್ತುತಿಯನ್ನು ಮೈಸೂರಿನ ರಮಾಗೋವಿಂದ್ ರಂಗಮಂದಿರದಲ್ಲಿ , ಆಗಸ್ಟ್ ೧೭ ರಂದು ಸಂಜೆ 6.30ಕ್ಕೆ
ಪ್ರದರ್ಶಿಸಲಾಗುವುದು ಎಂದು ಶ್ರೀ ಉನ್ನತ್ ಜೈನ್ ತಿಳಿಸಿದ್ದಾರೆ.

ಗೊರೂರು ಅನಂತರಾಜು, ಹಾಸನ.
9449462879
ವಿಳಾಸ : ಹುಣಸಿನಕೆರೆ ಬಡಾವಣೆ,
29ನೇ ವಾಡ್೯, 3ನೇ ಕ್ರಾಸ್,
ಶ್ರೀ ಶನೈಶ್ಚರ ದೇವ ಸ್ಥಾನ ರಸ್ತೆ,
ಹಾಸನ.

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group