ಧಾರವಾಡ- ಸಮಾಜದ ಅಂಕು ಡೊಂಕುಗಳನ್ನು ತಿದ್ದಿ ಯಾವುದಕ್ಕೂ ಆಸೆ ಪಡದೆ ನಿಜ ಸುದ್ದಿಗಳನ್ನು ಪತ್ರಿಕೆಯಲ್ಲಿ ಬಿತ್ತರಿಸಿ ಅನೇಕ ವರ್ಷಗಳಿಂದ ಪತ್ರಿಕಾ ರಂಗದಲ್ಲಿ ಕಾರ್ಯ ನಿರ್ವಹಿಸುತ್ತಾ, ಜೊತೆಗೆ ಸಮಾಜ ಸೇವೆ ಮಾಡುತ್ತಾ ಅನೇಕ ಹೋರಾಟಗಳನ್ನು ನಡೆಸುತ್ತಾ ಸಮಾಜ ಪರ ಸಾಮಾಜಿಕ ಸಾಮರಸ್ಯವನ್ನೂ ಮೂಡಿಸುವಲ್ಲಿ ಹಲವು ಲೇಖನಗಳನ್ನು ಪ್ರಮುಖ ದಿನ ಪತ್ರಿಕೆಯಲ್ಲಿ ಬರೆದು ಸಾಮಾಜಿಕ ಬದಲಾವಣೆಗೆ ಕಾರಣರಾಗಿರುವ ಪತ್ರಕರ್ತ ಮುರಿಗೆಪ್ಪ ಮಾಲಗಾರ ಅವರಿಗೆ ರಾಜ್ಯ ಮಾಧ್ಯಮ ಸೇವಾ ಪ್ರಶಸ್ತಿ ದೊರಕಿದೆ.
ಪತ್ರಕರ್ತ ಹಾಗೂ ಸಮಾಜ ಸೇವೆ ಮಾಡಿ ರಾಜ್ಯಾದ್ಯಂತ ಹೆಸರು ಮಾಡಿ ಸಾಕಷ್ಟು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ ಸಮಾಜದಲ್ಲಿ ಬಡವ ಹಿಂದುಳಿದ ವರ್ಗಗಳ ಕಲ್ಯಾಣ ಅಭಿವೃದ್ಧಿಗೆ ಆದ್ಯತೆ ನೀಡಿ ಕಾರ್ಯ ಮಾಡುತ್ತಿರುವ ಮೂಡಲಗಿ ತಾಲ್ಲೂಕಿನ ಹಳ್ಳೂರ ಗ್ರಾಮದ ಮುರಿಗೆಪ್ಪ ಬಸಪ್ಪ ಮಾಲಗಾರ ಆವರ ಸೇವೆಯನ್ನು ಪರಿಗಣಿಸಿ ರವಿವಾರದಂದು ಧಾರವಾಡ ರಂಗಾಯಣ ಸಭಾ ಭವನದಲ್ಲಿ ನಡೆದ ವಿಶ್ವ ದರ್ಶನ ಕನ್ನಡ ದಿನ ಪತ್ರಿಕೆಯ 5 ನೇ ವಾರ್ಷಿಕೋತ್ಸವ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರಿಗೆ ರಾಜ್ಯ ಮಟ್ಟದ ಮಾಧ್ಯಮ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಹುಬ್ಬಳ್ಳಿ ವಿಶ್ವ ದರ್ಶನ ಕನ್ನಡ ದಿನ ಪತ್ರಿಕೆಯ ಸಂಪಾದಕರಾದ ಎಸ್ ಎಸ್ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
ದಿವ್ಯ ಸಾನ್ನಿಧ್ಯ ಬೆಂಗಳೂರಿನ ಆರೂಢ ಭಾರತಿ ಮಹಾಸ್ವಾಮಿಗಳು ವಹಿಸಿದ್ದರು. ಡಾ ಬಸವರಾಜ ಮಹಾಸ್ವಾಮಿಗಳು, ಶಂಕರಾನಂದ ಮಹಾಸ್ವಾಮಿಗಳು, ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗೌರವಾನ್ವಿತ ವಿಶ್ರಾಂತ ನ್ಯಾಯಾಧೀಶರು ಉಚ್ಚ ನ್ಯಾಯಾಲಯ ಬೆಂಗಳೂರು, ಅರಳೀ ನಾಗರಾಜ, ಕಾರ್ಯನಿರತ ಪತ್ರಕರ್ತ ಸಂಘದ ರಾಜ್ಯಾಧ್ಯಕ್ಷರಾದ ಮಲ್ಲಿಕಾರ್ಜುನ ಬಂಗ್ಲೆ, ಮಂಜುನಾಥ ಮಾಡ್ಯಾಳ ಹಿ ನ್ಯಾ ಸು ಕೋ ನವದೆಹಲಿ.ಎಸ್ ಎಸ್ ಮಿತ್ತಲಕೋಟ, ಖ್ಯಾತ ಉದ್ಯಮಿ ಮಹಾದೇವ ಸಾಹುಕಾರ, ಆರ್ ಸಿ ಗಾಳೆ ನಿವೃತ್ತ ಡಿ ವಾಯ್ ಎಸ್ ಪಿ . ವಿನೋದ ಕುಮಾರ ಚಲನ ಚಿತ್ರ ನಿರ್ದೇಶಕರು ಬೆಂಗಳೂರು. ನ್ಯಾಯವಾದಿಗಳಾದ ರವಿ ವಿ ಸೇರಿದಂತೆ ಅನೇಕರಿದ್ದರು.