Homeಸುದ್ದಿಗಳುಮೂಡಲಗಿಯಲ್ಲಿ ಇಂದಿರಾ ಕ್ಯಾಂಟಿನ್ ಉದ್ಘಾಟಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿಯಲ್ಲಿ ಇಂದಿರಾ ಕ್ಯಾಂಟಿನ್ ಉದ್ಘಾಟಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ- ಅಸಂಘಟಿತ ಕಾರ್ಮಿಕರು, ಬಡ ಜನರಿಗೆ ಇಂದಿರಾ ಕ್ಯಾಂಟಿನ್ ವರದಾನವಾಗಿದ್ದು, ಕಡಿಮೆ ದರದಲ್ಲಿ ಉಪಾಹಾರ ಮತ್ತು ಊಟದ ಸೌಲಭ್ಯಗಳನ್ನು ಹೊಂದಿರುವ ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಸಾರ್ವಜನಿಕರಿಗೆ ಕರೆ ನೀಡಿದರು.

ಗುರುವಾರದಂದು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ತೆರೆಯಲಾದ ಇಂದಿರಾ ಕ್ಯಾಂಟಿನ್ ಉದ್ಘಾಟಿಸಿ ಮಾತನಾಡಿದ ಅವರು, ಬಡ ಬಗ್ಗರಿಗೆ ಇದು ಉಪಯುಕ್ತವಾಗಿದೆ ಎಂದು ತಿಳಿಸಿದರು.

ಕಡಿಮೆ ದರದಲ್ಲಿ ಬೆಳಗಿನ ಉಪಾಹಾರ ಮತ್ತು ಭೋಜನವು ಇದರಲ್ಲಿ ಸಿಗುತ್ತದೆ. ವಿವಿಧ ಬಗೆಯ ಉಪಾಹಾರ ಮತ್ತು ಊಟ ಸಾರ್ವಜನಿಕರಿಗೆ ಲಭ್ಯವಿರಲಿದೆ. ಕಡು ಬಡವರು, ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಮಹಿಳೆಯರಿಗೆ ಇಂದಿರಾ ಕ್ಯಾಂಟಿನ್ ಪ್ರಯೋಜನ ಪಡೆದುಕೊಳ್ಳಬೇಕು. ಕೇವಲ ೫ ರೂ. ನೀಡಿದರೆ ಉಪಾಹಾರ ಮತ್ತು ೧೦ ರೂ. ನೀಡಿದರೆ ಊಟವು ಕಡಿಮೆ ದರದಲ್ಲಿ ಸಾರ್ವಜನಿಕರ ಸೇವೆಗೆ ಅಣಿಯಾಗಲಿದ್ದು, ಗುಣಮಟ್ಟದ ಆಹಾರವು ದೊರೆಯಲಿದೆ. ಮೂಡಲಗಿ ತಾಲ್ಲೂಕು ಕೇಂದ್ರವಾಗಿರುವದರಿಂದ ಸಾರ್ವಜನಿಕರಿಗೆ ಉಪಯುಕ್ತವಾಗಲಿದೆ ಎಂದು ಹೇಳಿದರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಪುರಸಭೆಯಿಂದ ಸತ್ಕರಿಸಲಾಯಿತು. ನಂತರ ಶಾಸಕರು ಇಂದಿರಾ ಕ್ಯಾಂಟಿನ್ ದಲ್ಲಿ ತಯಾರಿಸಿದ ತಿಂಡಿ ತಿನಿಸುಗಳನ್ನು ಪರೀಕ್ಷಿಸಿದರು. ಸಾರ್ವಜನಿಕರಿಗೆ ಚೌ- ಚೌ ಬಾತ್ ಬಡಿಸುವ ಮೂಲಕ ಕ್ಯಾಂಟಿನ್ ಆರಂಭಕ್ಕೆ ಚಾಲನೆ ನೀಡಿದರು.

ಪುರಸಭೆ ಅಧ್ಯೆಕ್ಷೆ ಖುರ್ಷಾದಾ ನದಾಫ, ಉಪಾಧ್ಯಕ್ಷೆ ಭೀಮವ್ವ ಪೂಜೇರಿ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ಪುರಸಭೆ ಮಾಜಿ ಅಧ್ಯಕ್ಷರಾದ ರವಿ ಸಣ್ಣಕ್ಕಿ, ರಾಮಣ್ಣಾ ಹಂದಿಗುಂದ, ಹಣಮಂತ ಗುಡ್ಲಮನಿ, ಮುಖಂಡರಾದ ಜಯಾನಂದ. ಪಾಟೀಲ, ಮರೆಪ್ಪ ಮರೆಪ್ಪಗೋಳ, ಡಾ. ಎಸ್.ಎಸ್. ಪಾಟೀಲ,
ಶಿವು ಚಂಡಕಿ,ಆದಮ, ತಾಂಬೋಳಿ. ಸುಭಾಸ ಸಣ್ಣಕ್ಕಿ, ಬಸು. ಝಂಡೇಕುರಬರ, ಹುಸೇನಸಾಬ, ಶೇಖ, ಕಾಶಪ್ಪ ಝಂಡೇಕುರಬರ, ಅಬ್ದುಲಗಫಾರ ಡಾಂಗೆ,
ಪ್ರಕಾಶ ಮುಗಳಖೋಡ, ಆನಂದ.ಟಪಾಲ, ರವಿ ಮೂಡಲಗಿ,ವಿರುಪಾಕ್ಷ ಮುಗಳಖೋಡ, ಲಕ್ಕಪ್ಪ ಶಾಬನ್ನವರ, ಮುಖ್ಯಾಧಿಕಾರಿ ತುಕಾರಾಂ ಮಾದರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group