Homeಸುದ್ದಿಗಳುಸ್ವಾತಂತ್ರ್ಯೋತ್ಸವದ ಅಂಗವಾಗಿ ಸರ್ವಧರ್ಮ ಸಮನ್ವಯ ಪ್ರಾರ್ಥನೆ

ಸ್ವಾತಂತ್ರ್ಯೋತ್ಸವದ ಅಂಗವಾಗಿ ಸರ್ವಧರ್ಮ ಸಮನ್ವಯ ಪ್ರಾರ್ಥನೆ

ಪಟೇಲ್ ಗುಳ್ಳಪ್ಪ ಶಿಕ್ಷಣ ಸಂಸ್ಥೆಯಿಂದ ಆಯೋಜನೆ.

ಬೆಂಗಳೂರು ಮುನೇಶ್ವರ ಬ್ಲಾಕ್ ಅವಲಹಳ್ಳಿ ಜ್ಞಾನ ಕಾಶಿಯ ಪಟೇಲ್ ಗುಳ್ಳಪ್ಪ ಶಿಕ್ಷಣ ಸಂಸ್ಥೆಯಲ್ಲಿ 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಮಾಜಿ ಉಪ ಮಹಾಪೌರ ಎಂ. ಲಕ್ಷ್ಮೀನಾರಾಯಣರವರು ಧ್ವಜಾರೋಹಣ ನೆರವೇರಿಸಿದರು.

ಪಟೇಲ್ ಗುಳ್ಳಪ್ಪ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರು ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷರಾದ ಡಾ. ಬಿ ಎಂ ಪಟೇಲ್ ಪಾಂಡುರವರು ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಸೂರ್ಯ ಕಿರಣ ಫೌಂಡೇಶನ್ ವತಿಯಿಂದ ವಿಶಿಷ್ಟವಾದ ಸರ್ವಧರ್ಮ ಸಮನ್ವಯ ಪ್ರಾರ್ಥನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಸೂರ್ಯ ಕಿರಣ ಫೌಂಡೇಶನ್ ನ ಸಂಸ್ಥಾಪಕ ಕಾರ್ಯದರ್ಶಿ ಡಾ.ರಮೇಶ್ ರಾಜನಹಳ್ಳಿ ರವರ ನೇತೃತ್ವದಲ್ಲಿ ಹಿಂದೂ ಧರ್ಮದ ಪ್ರಾರ್ಥನೆ ಮತ್ತು ಆಶಯವನ್ನು ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ತಿಳಿಸುತ್ತ ಸರ್ವ ಜನಾಂಗದ ಶಾಂತಿಯ ತೋಟವಾದ ಭಾರತದಲ್ಲಿ ಭಾವೈಕ್ಯದ ಸಹೋದರ ಭಾವನೆಯ ವಿಶಾಲ ಚಿಂತನೆ ಸನಾತನ ಧರ್ಮದ ಸತ್ವ -ತತ್ವ ಎಂದು ಹೇಳಿದರು. ಇಸ್ಲಾಂ ಧರ್ಮದ ಪ್ರಾರ್ಥನೆಯನ್ನು ಅಕ್ತರ್ ಅಲಿ, ಕ್ರೈಸ್ತ ಧರ್ಮದ ಪ್ರಾರ್ಥನೆಯನ್ನು ವಿಲಿಯಂ ಪ್ರಜ್ವಲ್, ಸಿಖ್ ಧರ್ಮದ ಪ್ರಾರ್ಥನೆಯನ್ನು ರಂದೀಪ್ ಹಾಗು ಜೈನ ಧರ್ಮದ ಪ್ರಾರ್ಥನೆಯನ್ನು ರೊ. ವಿಜಯರಾಜ ಎಸ್ ರವರು ನಡೆಸಿಕೊಟ್ಟರು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸಹಾಯಕ ಕಾರ್ಯ ಪಾಲಕ ಅಭಿಯಂತರ ಬಿ.ಆರ್.ಚಂದ್ರಶೇಖರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group