ಮುಗಳಖೋಡದಲ್ಲಿ ದಿ.18 ರಂದು ಶ್ರೀ ಕ್ಷೇತ್ರ ಧಮ೯ಸ್ಥಳ ಒಕ್ಕೂಟದ ಸಭೆ

Must Read

ಮುಧೋಳ – ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಸಭೆಯು ತಾಲೂಕಿನ ಸುಕ್ಷೇತ್ರ ಮುಗಳಖೋಡದ ಶ್ರೀ ಪರಮಾನಂದ ದೇವಸ್ಥಾನದ ಸಭಾಭವನದಲ್ಲಿ ಸೋಮವಾರ ದಿ .18 ರಂದು ಮಧ್ಯಾಹ್ನ 12 ಗಂಟೆಗೆ ಜರುಗಲಿದೆ ಎಂದು ಲೋಕನಾಯಕಿ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷೆ .ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರತಿನಿಧಿ ಎಲ್.ಶಾಮಲಾ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ‌

ಪತ್ರಿಕೆಯೊಂದಿಗೆ ಅವರು ಮಾತನಾಡುತ್ತಾ ಮಧ್ಯಾಹ್ನ 12 ಗಂಟೆಗೆ ಸ್ವಾಮಿ ಮಂಜುನಾಥ ಮಹಾಸ್ವಾಮಿಯ ಪೂಜಾ ಕಾರ್ಯಕ್ರಮ ಜರಗುವುದು. ನಂತರ ಒಕ್ಕೂಟದ ಸಭೆಯನ್ನು ತಾಲೂಕಾ ಯೋಜನಾಧಿಕಾರಿಗಳಾದ ರಾಜು ಆಚಾರ್ಯರು ಉದ್ಘಾಟಿಸಿ ಒಕ್ಕೂಟದ ಸವ೯ಸದಸ್ಯರನ್ನುದ್ದೇಶಿಸಿ ಮಾತನಾಡುವರು.ಈ ಸಂದರ್ಭದಲ್ಲಿ ಕೃಷಿ ಅಧಿಕಾರಿಗಳಾದ ಪ್ರವೀಣ ಹಾಗೂ ವಲಯ ಮೇಲ್ವಿಚಾರಕರಾದ ಚಂದ್ರಕಲಾ ಅವರು ಉಪಸ್ಥಿತರಿರುವರು ಎಂದು ಹೇಳಿ, ಸಂಘದ ಸವ೯ಸದಸ್ಯರು ಭಾಗವಹಿಸಲು ಶ್ಯಾಮಲಾ ಅವರು ಕೋರಿದ್ದಾರೆ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group