ಮೂಡಲಗಿ: ಕರೋನಾ ಕಾರಣದಿಂದಾಗಿ ಪ್ರತಿ 5 ವರ್ಷಕ್ಕೊಮ್ಮೆ ಜರಗುವ ಗ್ರಾಮದೇವತೆ ದ್ಯಾಮವ್ವ ದೇವಿ ಜಾತ್ರೆಯು ಈ ಬಾರಿ 10 ವರ್ಷಗಳ ಬಳಿಕ ಜಾತ್ರೆ ನಡೆಯುತ್ತಿದ್ದು, ಸುದೈವದಿಂದ ಈ ವರ್ಷ ಜಾತ್ರೆಗೆ ಒಳ್ಳೆಯ ಮಳೆಯಾಗಿದ್ದು, ಉತ್ತಮ ಬೆಳೆ ಬರುವ ಲಕ್ಷಣಗಳಿದ್ದು, ರೈತರ ಫಸಲಿಗೆ ಉತ್ತಮ ಬೆಲೆ ಕೊಟ್ಟು ದೇವರು ನಮ್ಮನೆಲ್ಲ ಆರ್ಥಿಕವಾಗಿ ಸದೃಢ ಇಡಲಿ ಎಂದು ಗ್ರಾಮದೇವತೆಯಲ್ಲಿ ಪ್ರಾರ್ಥಿಸುವುದಾಗಿ ರಾಜ್ಯಸಭೆ ಸಂಸದ ಈರಣ್ಣ ಕಡಾಡಿ ಹೇಳಿದರು.
ರವಿವಾರ ಆ-17 ರಂದು ಕಲ್ಲೋಳಿ ಪಟ್ಟಣದ ಗ್ರಾಮದೇವತೆ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಮುಗಳ್ಯಾರ ಒಣಿಯಲ್ಲಿ ಪ್ರತಿಷ್ಠಾಪಿಸಲಾದ ದೇವಿಯ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ, ದರ್ಶನ ಪಡೆದು ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ದ್ಯಾಮವ್ವ ದೇವಿ ಟ್ರಸ್ಟ್ ಕಮಿಟಿಯಿಂದ ಸಂಸದರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಕಾಳಪ್ಪಾ ಬಡಿಗೇರ, ಶ್ರೀಶೈಲ ತುಪ್ಪದ, ಮಲ್ಲಪ್ಪ ಖಾನಗೌಡ್ರ, ಮಹಾಂತೇಶ ಪಾಟೀಲ, ಹಣಮಂತ ಖಾನಗೌಡ್ರ, ಪ್ರಕಾಶ ಪತ್ತಾರ, ಬಸವರಾಜ ಬಡಿಗೇರ, ಶಂಕರ ಖಾನಗೌಡ್ರ, ಶಿವಾನಂದ ಕಡಾಡಿ, ಮಹಾಂತೇಶ ಜಗದಾಳೆ, ಪರಪ್ಪ ಗಿರೆಣ್ಣವರ, ಬಾಳಪ್ಪ ಜಗದಾಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.