Homeಸುದ್ದಿಗಳುಕರ್ತವ್ಯದಲ್ಲಿ ಯಾವುದೇ ತೊಂದರೆಯಾಗದಂತೆ ಕೆಲಸ ಮಾಡುತ್ತೇನೆ - ತಹಶೀಲ್ದಾರ ಹಿರೇಮಠ

ಕರ್ತವ್ಯದಲ್ಲಿ ಯಾವುದೇ ತೊಂದರೆಯಾಗದಂತೆ ಕೆಲಸ ಮಾಡುತ್ತೇನೆ – ತಹಶೀಲ್ದಾರ ಹಿರೇಮಠ

ಹುನಗುಂದ; ಸರ್ಕಾರದ ನಿಯಮದಂತೆ ಹುನಗುಂದ ತಾಲೂಕಿಗೆ ತಹಶೀಲ್ದಾರರಾಗಿ ಸೇವೆ ಮಾಡಲು ಬಂದಿದ್ದೇನೆ. ನನ್ನ ಕಾಲಾವಧಿಯಲ್ಲಿ ಸಾರ್ವಜನಿಕ ರಂಗದಲ್ಲಿ ಯಾವುದೆ ತೊಂದರೆಯಾಗದoತೆ ಕಚೇರಿ ಕೆಲಸದಲ್ಲಿ ವಿನಾಕಾರಣ ತಡೆಯಾಗದಂತೆ ನನ್ನ ಸಿಬ್ಬಂದಿಯೊoದಿಗೆ ಕೆಲಸ ಕಾರ‍್ಯ ನಿರ್ವಹಣೆ ಮಾಡುತ್ತೇನೆಂದು ನೂತನ ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ಹೇಳಿದರು.

ಇಲ್ಲಿನ ಗಚ್ಚಿನನಮಠದಲ್ಲಿ ಶುಕ್ರವಾರ ಹಮ್ಮಿಕೊಂಡ ನಗರಕ್ಕೆ ವರ್ಗವಾಗಿ ಬಂದ ನೂತನ ತಹಶೀಲ್ದಾರ ಮತ್ತು ಪಿಎಸ್‌ಐ ಗಳಿಗೆ ಗೌರವ ಸನ್ಮಾನ ಸಮಾರಂಭದಲ್ಲಿ ಸನ್ಮಾನಗೊಂಡು ಅವರು ಮಾತನಾಡುತ್ತ ತಾಲೂಕಿನಲ್ಲಿ ಕಾರ‍್ಯ ನಿರ್ವಹಿಸುವ ಕಾಲಾವದಿಯವರೆಗೆ ಯಾವುದೆ ತೊಂದರೆಯಾಗದ೦ತೆ ಸದಾಕಾಲ ಕಾರ‍್ಯ ನಿರ್ವಸುವದಾಗಿ ತಿಳಿಸುತ್ತ ಚಿತ್ತರಗಿ ಸಂಸ್ಥಾನಮಮಠ ಹುನಗುಂದದ ಶ್ರೀ ವಿಜಯ ಮಹಾಂತೇಶ ಮತ್ತು ಅಮರೇಶ್ವರ ದೇವರುಗಳ ಆಶೀರ್ವಾದ ಎಲ್ಲರಿಗೂ ಇರಲಿ ಎಂದು ೭೯ನೇ ಸ್ವಾತಂತ್ರ್ಯೋ ತ್ಸವಕ್ಕೆ ತಹಶೀಲ್ದಾರ ಶುಭ ಹಾರೈಸಿದರು.

ಪಿಎಸ್‌ಐ ಸಿದ್ಧಾರೂಢ ಅರಳಿಕಟ್ಟಿ ಮಾತನಾಡಿ ಸಾರ್ವಜನಿಕ ಕ್ಷೇತ್ರದಲ್ಲಿ ನಡೆಯುವಂತ ಧಾರ್ಮಿಕ ಚಟುವಟಿಕೆಗಳಿಗೆ ಪೊಲಿಸ್ ಇಲಾಖೆ ಸಂಪೂರ್ಣ ಸಹಕರಿಸುತ್ತದೆ. ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ವರ್ಷದುದ್ದಕ್ಕೂ ನಡೆಯುವಂತ ಆಚರಣೆ, ರಾಷ್ಟ್ರೀಯ ಮತ್ತು ಸಂಪ್ರದಾಯದಂತೆ ನಡೆಸುವ ಹಬ್ಬ ಹರಿದಿನಗಳಲ್ಲಿ ಯಾವುದೆ ಅಹಿತಕರ ಘಟನೆಗಳು ನಡೆಯದಂತೆ, ಎಲ್ಲ ಹಬ್ಬಗಳನ್ನು ಸರ್ವ ಧರ್ಮಿಯರು ಸೇರಿ ಪ್ರೀತಿ ವಿಶ್ವಾಸದಿಂದ ಸೌಹಾರ್ಧಯುತವಾಗಿ ನಡೆಸುವಲ್ಲಿ, ನಗರ ಗ್ರಾಮದ ಹಿರಿಯರು ಹೆಚ್ಚಿನ ಜವಾಬ್ದಾರಿ ವಹಿಸಬೇಕು. ಹಾಗೇನೆ ಪೂಜ್ಯರು ಮತ್ತು ಮಠಾಧೀಶರು ಹಾಗೂ ಜಂಗಮರು ನಡೆಸುವ ಧರ್ಮ ಕಾರ‍್ಯಗಳಲ್ಲಿ ಯುವಕರು ಪಾಲ್ಗೊಂಡು ಸಂಸ್ಕಾರವ೦ತರಾಗಿ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಬೇಕೆಂದು ಎಂದರು.

ಗಚ್ಚಿನಮಠದ ಅಮರೇಶ್ವರ ದೇವರು ಸಾನ್ನಿಧ್ಯವಹಿಸಿ ಮಾತನಾಡುತ್ತ ಪ್ರತಿ ಇಲಾಖೆಯ ಅಧಿಕಾರಿಗಳು ಸಂವಿಧಾನದಡಿ ಸರ್ಕಾರಿ ನಿಯಮದಂತೆ ಸೇವೆ ಸಲ್ಲಿಸುತ್ತಾರೆ. ಮನುಷ್ಯತ್ವದಿಂದ ಕಾರ‍್ಯ ನಿರ್ವಹಿಸಲು ಅಧಿಕಾರಿಗಳ ಹೃದಯ ಮಿಡಿಯುತ್ತಿರುತ್ತದೆ. ಆದರೆ ಒಂದೊಂದು ಸಂದರ್ಭದಲ್ಲಿ ಅವರಿಗೂ ಕಾನೂನಿನ ಅಡತಡೆ ಬಂದಾಗ ಅವರ ಮತ್ತು ಸಾರ್ವಜನಿಕರ ಮಧ್ಯೆ ಭಿನ್ನಾಭಿಪ್ರಾಯ ಸಂಭವಿಸುವದು ಸಹಜ. ಹುನಗುಂದ ರೈತಾಪಿ ವರ್ಗ ಇರುವದರಿಂದ ಅವರ ಕೆಲಸ ಕಾರ‍್ಯಗಳನ್ನು ತೀವ್ರವಾಗಿ ಮಾಡಲು ಪೂಜ್ಯರು ಆಶಿಸಿದರು.

ಗಚ್ಚಿನಮಠದ ವೇಮೂ. ಮಹಾಂತಯ್ಯ ಗಚ್ಚಿನಮಠ ದಿವ್ಯ ಸಾನ್ನಿಧ್ಯಹಿಸಿದ್ದರು. ನಗರದ ಸಂಗಮೇಶ್ವರ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಶೇಖರಪ್ಪ ಬಾದವಾಡಗಿ, ಪಿಡಬ್ಲ್ಯೂ ಡಿ ಅಭಿಯಂತರ ವೀರೇಶ ಹಿರೇಮಠ ಉಪಸ್ಥಿತರಿದ್ದರು.

ಮಠದ ಸದ್ಭಕ್ತರಾದ ಶಾಂತಪ್ಪ ಹೊಸಮನಿ, ನಾಗಪ್ಪ ತ್ಯಾಪಿ, ಗಿರಿಮಲ್ಲಪ್ಪ ಹಳಪೇಟಿ, ಕೃಷ್ಣ ಜಾಲಿಹಾಳ, ಮಲ್ಲು ಲೆಕ್ಕಿಹಾಳ, ಶಿವಪ್ಪ ಯಡಹಳ್ಳಿ, ಮಹಾಂತೇಶ ಚಿತ್ತವಾಡಗಿ, ಮಹೇಶ ಮಹೇಶ, ಸಂಗಮೇಶ ಚೂರಿ, ರಾಜು ಬಯ್ಯಾಪೂರ, ಸುರೇಶ ಹಳಪೇಟಿ, ಸಾಂತಯ್ಯ ಮಠ, ಮಹಾಂತೇಶ ಮಠ ಸ್ವಾಗತಿಸಿದರು. ಅರುಣ ದುದ್ಗಿ ನಿರೂಪಿಸಿದರು. ಶಿಕ್ಷಕ ಪ್ರಭು ಮಾಲಗತ್ತಿಮಠ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group