ಹೊಸದೆಹಲಿ – ಕಳೆದ ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿದೆ ಎಂಬ ರಾಹುಲ್ ಗಾಂಧಿಯವರ ಆರೋಪದ ಬಗ್ಗೆ ಕೇಂದ್ರ ಮುಖ್ಯ ಚುನಾವಣಾ ಆಯೋಗದ ಮುಖ್ಯಸ್ಥ ಜ್ಞಾನೇಶ ಕುಮಾರ ತೀವ್ರವಾಗಿ ಪ್ರತಿಕ್ರಿಯೆ ನೀಡಿದ್ದು ಇನ್ನು ಏಳು ದಿನಗಳಲ್ಲಿ ಆರೋಪದ ಅಫಿಡವಿಟ್ ನೀಡಬೇಕು ಇಲ್ಲವಾದರೆ ದೇಶದ ಕ್ಷಮೆ ಕೇಳಬೇಕು ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿಯೇ ಅತಿ ಹೆಚ್ಚು ಮತದಾರರನ್ನು ಹೊಂದಿರುವ ದೇಶ ನಮ್ಮದು ಸುಮಾರು ೯೦ ರಿಂದ ೧೦೦ ಕೋಟಿ ಮತದಾರರನ್ನು ನಮ್ಮ ದೇಶ ಹೊಂದಿದೆ.ಸಾಕ್ಷಿಗಳಿಲ್ಲದೆ ಆಯೋಗ ಯಾರನ್ನೂ ಕೈಬಿಟ್ಟಿಲ್ಲ ಎಂದು ಹೇಳಿ ಬಿಹಾರದ ಮತದಾರರ ಮತದಾರರ ಪಟ್ಟಿ ಪರಿಷ್ಕರಣೆಗೂ ಸ್ಪಷ್ಟೀಕರಣ ಕೊಟ್ಟಿದ್ದಾರೆ.
ಎಲ್ಲಕ್ಕಿಂತ ಹೆಚ್ಚು ಮತದಾರರ ಪಟ್ಟಿ ನಮ್ಮಲ್ಲಿದೆ, ಅತಿ ಹೆಚ್ಚು ಚುನಾವಣಾ ಸಿಬ್ಬಂದಿ, ಅತ ಹೆಚ್ಚು ಮತದಾನ ಮಾಡುವ ಜನ ನಮ್ಮಲ್ಲಿದ್ದಾರೆ ಇದರಲ್ಲಿ ಎರಡು ಸಲ ಮತದಾನ ಆಗಿದೆಯೆಂದು ನೀವು ಹೇಳಿದರೆ ನೀವೇ ಎರಡು ಸಲ ಮತದಾನ ಮಾಡಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.
ಈ ರೀತಿ ಆರೋಪ ಮಾಡುವುದು ಸರಿಯಲ್ಲ ಏಳು ದಿನಗಳಲ್ಲಿ ಅಫಿಡವಿಟ್ ಸಲ್ಲಿಸಬೇಕು ಇಲ್ಲವಾದರೆ ಈ ಎಲ್ಲ ಆರೋಪಗಳು ನಿರಾಧಾರ ಎಂದು ಪರಿಗಣಿಸುತ್ತೇವೆ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.