ಬೆಳಗಾವಿ – ಈ ಸೃಷ್ಟಿಯು ದೇವರು ಕರುಣಿಸಿದ ವರಪ್ರಸಾದವಾಗಿದೆ ನಾವು ಉಣ್ಣುವ ತಿನ್ನುವ ಆಹಾರವಷ್ಟೇ ಪ್ರಸಾದವಲ್ಲ ನಾವು ನೋಡುವ ನೋಟ ಕೇಳುವ ಹೇಳುವ ಮಾಡುವ ಕೆಲಸಗಳು ಕೂಡಾ ಪ್ರಸಾದಮಯವಾಗಿದೆ ನಮ್ಮ ಮನಸ್ಸನ್ನು ಪರಮಾತ್ಮನಿಗೆ ಸಮರ್ಪಿಸುವುದೆ ಪ್ರಸಾದವಾಗಿದೆ. ಅನ್ನ ಪ್ಲಸ್ ಅನುಗ್ರಹ ಅಂದರೆ ಅನ್ನವನ್ನು ನಮಗೆ ದೇವರು ಅನುಗ್ರಹಿಸಿದ ಪ್ರಸಾದವಾಗಿದೆ ಅಲ್ಲದೆ ಪ್ರ ಎಂದರೆ ಪಸರಿಸು ಸಾದ ಎಂದರೆ ಸ್ವಾದ. ಅನ್ನವೇ ಆಗಿರಬಹುದು ನಮ್ಮಲ್ಲಿರುವ ಉತ್ತಮ ವಿಚಾರಗಳೇ ಆಗಿರಬಹುದು ಅದನ್ನು ಪಸರಿಸು ಅಥವಾ ಹಂಚುವಿಕೆಯೇ ಪ್ರಸಾದವಾಗಿದೆ ಮೃಷ್ಟಾನ್ನ ಕಿಂತ ಪ್ರಸಾದ ಶ್ರೇಷ್ಠವಾದುದು ಎಂದು ಶರಣ ಶ್ರೀಕಾಂತ ಶಾನವಾಡ ಹೇಳಿದರು
ರವಿವಾರ ದಿನಾಂಕ ೧೭.೦೮.೨೦೨೫ರಂದು ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದ ಸತ್ಸಂಗದಲ್ಲಿ ಶರಣರಾದ ಶ್ರೀಕಾಂತ ಶಾನವಾಡ ಅವರು ಪ್ರಸಾದ ಕುರಿತು ಮಾತನಾಡಿದರು
ಮೃಷ್ಟಾನ್ನ ವಿವಿಧ ಭಕ್ಷ್ಯಗಳನ್ನು ಒಳಗೊಡಿದ್ದರೆ ಪ್ರಸಾದ ಸತ್ಯ ಶುದ್ಧ ಕಾಯಕದಿಂದ ಶ್ರದ್ದೆಯಿಂದ ಶ್ರಮಿಸಿದ ಫಲದಿಂದ ಬಂದ ಅಂಬಲಿಯೇ ಆಗಿದ್ದರೂ ಕೂಡಾ ಮಹಾ ಪ್ರಸಾದವಾಗಿದೆ ಶ್ರಮದ ಫಲದಿಂದ ಬಂದಿದ್ದನ್ನು ಶಿವನಿಗೆ ಸಮರ್ಪಿಸಿ ಸ್ವಿಕರಿಸುವುದೇ ಪ್ರಸಾದವಾಗಿದೆ ಎಂದಯ ಹೇಳಿ, ನಮ್ಮ ತನು ಮನ ಭಾವನೆಗಳನ್ನು ಸಮರ್ಪಿಸುವುದರ ಜೊತೆಗೆ ಶುದ್ಧ, ಸಿದ್ದ, ಮತ್ತು ಪ್ರಸಿದ್ದ ಪ್ರಸಾದದ ಮಹತ್ವವನ್ನು ಇಂದಿನ ಉಪನ್ಯಾಸದಲ್ಲಿ ಶಾನವಾಡ ಶರಣರು ಹೇಳಿದರು.
ಇಂದಿನ ಷಟಸ್ಥಲ ಧ್ವಜಾರೋಹಣವನ್ನು ಮತ್ತು ಪ್ರಸಾದ ವ್ಯವಸ್ಥೆಯನ್ನು ಶರಣೆ ವಿಜಯ ಲಕ್ಷ್ಮಿ ಅಮ್ಮಣಗಿ ಅವರು ಮಾಡಿದ್ದರು. ಲಲಿತಾ ರುದ್ರಗೌಡರ ಶೈಲೇಜಾ ಮುನವಳ್ಳಿ, ಸುನಿತಾ ನಂದೆಣ್ಣವರ ಪ್ರಾರ್ಥನೆ ನಡೆಸಿಕೊಟ್ಟರು
ಶರಣ ಕಟ್ಟಿಮನಿ ಅವರು ನಿರೂಪಣೆ ಮಾಡಿದರು. ಅಧ್ಯಕ್ಷರು ಎಸ್ ಜೀ ಸಿದ್ನಾಳರು ಕಾರ್ಯದರ್ಶಿ ಶಂಕರ ಶೆಟ್ಟಿ ಅವರು ಹಾಗೂ ಸಂಘದ ಶರಣ ಶರಣೆಯರು ಉಪಸ್ಥಿತರಿದ್ದರು.