Homeಸುದ್ದಿಗಳುಹಬ್ಬಗಳ ಆಚರಣೆ ಗದ್ದಲ, ಗಲೀಜು ಮಾಡಲಿಕ್ಕೆ ಅಲ್ಲ - ಡಿವೈಎಸ್ಪಿ ಜಗದೀಶ

ಹಬ್ಬಗಳ ಆಚರಣೆ ಗದ್ದಲ, ಗಲೀಜು ಮಾಡಲಿಕ್ಕೆ ಅಲ್ಲ – ಡಿವೈಎಸ್ಪಿ ಜಗದೀಶ

ಸಿಂದಗಿ; ದೇವನೊಬ್ಬ ನಾಮ ಹಲವು ಎಂಬಂತೆ ಮೊದಲು ನಮ್ಮ ಹಿರಿಯರು ಅನಾದಿಕಾಲದಿಂದಲೂ ಜಾತಿ-ಮತ ಎಣಿಸದೇ ಎಲ್ಲರು ಕಾಕಾ-ಮಾಮಾ ಎನ್ನುತ್ತ ಹಬ್ಬಗಳು ಮನೆ ಎಲ್ಲ ಸದಸ್ಯರು ಒಂದೇಡೆ ಸೇರಿ ಸಂಭ್ರಮ ಸಡಗರದಿಂದ ಆಚರಿಸುವುದು ಆದರೆ ಗದ್ದಲ ಗಲೀಜು ಮಾಡಲಿಕ್ಕಲ್ಲ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ ಸೌಹಾರ್ದಯುತವಾಗಿ ಆಚರಿಸೋಣ ಎಂದು ಇಂಡಿ ಡಿವೈಎಸ್‌ಪಿ ಜಗದೀಶ ಎಸ್‌ಎಚ್ ಹೇಳಿದರು.

ಪಟ್ಟಣದ ಗುಂದಗಿ ಫಂಗಕ್ಷನ್ ಹಾಲ್‌ನಲ್ಲಿ ವಿಜಯಪುರ ಜಿಲ್ಲಾ ಪೊಲೀಸ ಇಂಡಿ ಉಪವಿಭಾಗ ಸಿಂದಗಿ ಪೊಲೀಸ ಠಾಣಾವತಿಯಿಂದ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ ಪ್ರಯಕ್ತ ಹಮ್ಮಿಕೊಂಡ ಶಾಂತಿ ಸಭೆಯಲ್ಲಿ ಮಾತನಾಡಿ, ಕಳೆದ ೨೦೧೨-೧೩ ರಲ್ಲಿ ಇದೇ ಹಬ್ಬದಲ್ಲಿ ಗಲಾಟೆಯಾಗಿ ಅಮಾಯಕ ೯೮ ಜನರ ಮೇಲೆ ಪ್ರಕರಣ ದಾಖಲಾಗಿ ೨೦೨೫ರಲ್ಲಿ ಇತ್ಯರ್ಥವಾಗಿದೆ ಅಂತಹ ಘಟನೆಗಳು ಮರುಕಳಿಸದಂತೆ ಈದ್ ಮಿಲಾದ ಹಾಗೂ ಗಣೇಶ ಚತುರ್ಥಿ ಹಬ್ಬಗಳನ್ನು ಆಚರಿಸಿ ಪಿಓಪಿ ಗಣೇಶನನ್ನು ಸ್ಥಾಪಿಸಿ ಅನೇಕ ರೋಗಗಳಿಗೆ ತುತ್ತಾಗದೇ ಪರಿಸರ ಪ್ರೇಮಿ ಮಣ್ಣಿನ ಗಣೇಶನನ್ನು ಪ್ರತಿಸ್ಥಾಪನೆ ಮಾಡಿ ಪರಿಸರವನ್ನು ರಕ್ಷಣೆ ಮಾಡುವದಲ್ಲದೇ ಯುವಕ ಮಂಡಳಿಯ ಸದಸ್ಯರು ಸಂಪೂರ್ಣ ಉಸ್ತುವಾರಿ ವಹಿಸಿಕೊಳ್ಳಬೇಕು ವಿನಾಕಾರಣ ಗದ್ದಲ ಸೃಷ್ಠಿಸಿದರೆ ಸೂಕ್ತ ಕಾನೂನು ಕ್ರಮಕ್ಕೆ ಗುರಿಯಾಗುವಿರಿ ಎಂದು ಎಚ್ಚರಿಸಿದರು.

ತಹಶೀಲ್ದಾರ ಕರೆಪ್ಪ ಬೆಳ್ಳಿ ಮಾತನಾಡಿ,ಭಾರತ ದೇಶ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸುತ್ತ ಬಂದಿದೆ. ಹಬ್ಬಗಳು ಇನ್ನೊಬ್ಬರ ಸ್ವಾತಂತ್ರ್ಯ ವನ್ನು ಕಸಿದುಕೊಳ್ಳಲು ಆಚರಿಸದೇ ಭಾವೈಕ್ಯ ತೆಯಿಂದ ನಿಯಮಗಳ ಉಲ್ಲಂಘನೆಯಾಗದಂತೆ ಆಚರಿಸುವಂತಾಗಬೇಕು. ಪರವಾನಿಕೆಯಿಲ್ಲ ಗಜಾನನ ಸ್ಥಾಪನೆ ಮಾಡಬೇಡಿ ಎಲ್ಲ ಸರಕಾರಿ ನಿಯಮಗಳನ್ನು ಮುಂಜಾಗರೂಕತೆ ಇಟ್ಟುಕೊಂಡು ಹಬ್ಬಗಳನ್ನು ಆಚರಿಸಿ ಎಂದು ಸಲಹೆ ನೀಡಿದರು.

ಶಿವಾನಂದ ಆಲಮೇಲ, ರಮೇಶ ನಡುವಿನಕೇರಿ, ಕಿರಣ ಸಿವಶಿಂಪಿ, ರಜಾಕ ಮುಜಾವರ, ಮಹ್ಮದ ಅಳ್ಳೋಳ್ಳಿ, ಸಾಹೇಬಪಟೇಲ ಅವಟಿ, ಹರ್ಷವರ್ಧನ ಪೂಜಾರಿ ಮಾತನಾಡಿ, ಹಿಂದೂ-ಮುಸ್ಲೀಂ ಭಾಯಿ ಭಾಯಿ ಅನ್ನುವ ರೀತಿಯಲ್ಲಿ ಭಾವೈಕೈತೆಯಿಂದ ಎಲ್ಲ ಹಬ್ಬಗಳನ್ನು ಆಚರಿಸುತ್ತ ಬರಲಾಗುತ್ತಿದೆ ಆದರೆ ಕೆಲ ಕಿಡಿಗೇಡಿಗಳಿಂದ ಅಂದು ನಡೆದ ಘಟನೆ ನೆಪ ಇಟ್ಟುಕೊಳ್ಳದೇ ಹಿಂದಿನ ಮಾರ್ಗದಿಂದ ಮೆರವಣಿಗೆ ಮಾಡಲು ಅನುಮತಿ ನೀಡುವಂತೆ ವಿನಂತಿಸಿದರು.

ಸಿಪಿಐ ನಾನಾಗೌಡ ಪೊಲೀಸಪಾಟೀಲ ಮಾತನಾಡಿ, ಯುವಕ ಮಂಡಳಿಗಳು ಸ್ವಯಂ ವಿಡಿಯೋ ಚಿತ್ರಿಕರಣ ಮಾಡಿಸಿ ಮೆರವಣಿಗೆಯಲ್ಲಿ ಡಿಜೆ ಅಳವಡಿಸದೇ ಭಾವೈಕೈತೆ ಹಾಡುಗಳನ್ನು ಹಾಕಿ ದುಂದು ವೆಚ್ಚಕ್ಕೆ ಕಡಿವಾಣ ಹಾಕಿ ಹಿಂದಿನ ವರ್ಷದಂತೆ ಮೆರವಣಿಗೆಯ ಮಾರ್ಗ ಬದಲಾವಣೆ ಮಾಡಲು ಸಾದ್ಯವಿಲ್ಲ ಎಂದರು.
ಈ ಸಂದರ್ಭದಲ್ಲಿ ತಾಪಂ ಅಧಿಕಾರಿ ರಾಮು ಅಗ್ನಿ, ಹೆಸ್ಕಾಂ ಅದಿಕಾರಿ ಚಂದ್ರಕಾಂತ ನಾಯಕ, ಅಗ್ನಿಶಾಮಕ ಅದಿಕಾರಿ ಎಂ.ಬಿ.ಪೂಜಾರಿ, ಪುರಸಭೆ ಮುಖ್ಯಾಧಿಕಾರಿ ಎಸ್. ರಾಜಶೇಖರ ಮಾತನಾಡಿದರು.

ಪಿಎಸ್‌ಐ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು. ಶಿಕ್ಷಕ ಎಂ.ಆರ್.ಡೋಣಿ ನಿರೂಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group