ಮುಧೋಳ- ತಾಲೂಕಿನ ಸುಕ್ಷೇತ್ರ ಕುಳಲಿ ಗ್ರಾಮದ ಶ್ರೀ ಸಿದ್ದಲಿಂಗ ಯತಿರಾಜರ ಹಾಗೂ ಶಾಂಭವಿ ಅಂಭಾಮಠದಲ್ಲಿ ರವಿವಾರ ದಿ.24ರಂದು ವಿಶ್ವ ಶಾಂತಿಗಾಗಿ ಜಪಯಜ್ಞ ಕಾರ್ಯಕ್ರಮವನ್ನು ಶ್ರೀ ಮಠದ ಪೂಜ್ಯರಾದ ಸದಾಶಿವ ಅಜ್ಜನವರ ಸಾನ್ನಿಧ್ಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯರಾದ ಮಹಾದೇವ ಮೀಸಿ ಅವರು ತಿಳಿಸಿದ್ದಾರೆ.
ಪತ್ರಿಕೆಯೊಂದಿಗೆ ಮಾತನಾಡುತ್ತಾ ಬೆಳಿಗ್ಗೆ 9 ಗಂಟೆಗೆ ಗ್ರಾಮ ದೇವತೆ ದುಗಾ೯ದೇವಿಯ ಪಲ್ಲಕ್ಕಿ ಉತ್ಸವ ಜರುಗುವದು. ಮಧ್ಯಾಹ್ನ 1 ಗಂಟೆಗೆ ಉಡಿ ತುಂಬುವ ಕಾರ್ಯಕ್ರಮ ನಂತರ ಗುರುನಾಥಾರೂಢರ ಮಠದ ಓಂಕಾರ ಸ್ವರೂಪಿ ದಾಸೋಹ ಮೂತಿ೯ ಶಂಕರಾನಂದ ಶ್ರೀಗಳ ಬಳ್ಳೂರಿನ ಮಾತೋಶ್ರೀ ಕ್ಷೀರಮ್ಮ ತಾಯಿಯವರ ಅಮೃತ ಹಸ್ತದಿಂದ ಲಿಂಗಪೂಜೆ, ಮಾತಾಶಾಂಭವಿ ಪೂಜಾ ಕಾರ್ಯಕ್ರಮ ಜರುಗುವುದು.
ಮಧ್ಯಾಹ್ನ 3 ಗಂಟೆಗೆ ಸದ್ಗುರು ಶ್ರೀ ಭೀಮಾವಧೂತರ ಮಠದ ಪೂಜ್ಯರಾದ ಪಂಚಾಕ್ಷರಿ ಶ್ರೀಗಳ ಸಮ್ಮುಖದಲ್ಲಿ ವೀರಭದ್ರೇಶ್ವರ ಮಠದ ಈರಯ್ಯ ಶ್ರೀಗಳು, ರಾಂಪೂರ ನೀಲಕಂಠೇಶ್ವರ ಮಠದ ಬಸವರಾಜ ಮಹಾ ಸ್ವಾಮಿಗಳು, ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಶರಣಬಸವ ಶಾಸ್ತ್ರಿಗಳು, ಮಧುರಖಂಡಿಯ ಬಸಯ್ಯ ಮಹಾಸ್ವಾಮಿಗಳು. ನಿಂಗಾಪೂರದ ಜಡಿಸಿದ್ದೇಶ್ವರ ಮಠದ ಬಸವರಾಜ ಮಹಾಸ್ವಾಮಿಗಳು, ಮಹಾಳಿಂಗೇಶ್ವರ ದೇವರ ಅಚ೯ಕರಾದ ಕಾಡಪ್ಪ ಶರಣರು, ಈರಪ್ಪ ತಳಪಟ್ಟಿ ಶರಣರಿಂದ ಪ್ರವಚನ ನಡೆಯುವದು.
ಲಿಂಗೈಕ್ಯ ಶ್ರೀಗಳಾದ ಚಂಪಮ್ಮ ತಾಯಿಯವರ ಹಾಗೂ ನಂಜುಂಡೇಶ್ವರ ಶಿವಾಚಾರ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ, ಮುತ್ತಪ್ಪ ಬನಾಜಗೋಳ ಸಂಗಡಿಗರು ಮತ್ತು ಭೀಮಾವಧೂತ ಭಜನಾ ಮಂಡಳಿ ಯಿಂದ ಭಜನಾ ಸೇವೆ ಜರುಗುವದು. ನಂತರ ಮಂಗಲ ಮಹಾಪ್ರಸಾದ ಜರುಗುವುದು ಎಂದು ಮಹಾದೇವ ಮೀಸಿ ಅವರು ತಿಳಿಸಿದ್ದಾರೆ