Homeಸುದ್ದಿಗಳುಕೊಂಡೆವೂರು ಶಾಲೆಯಲ್ಲಿ ಕನ್ನಡ ಸಾಹಿತ್ಯ ಅಭಿಯಾನ ಆ.23ರಂದು

ಕೊಂಡೆವೂರು ಶಾಲೆಯಲ್ಲಿ ಕನ್ನಡ ಸಾಹಿತ್ಯ ಅಭಿಯಾನ ಆ.23ರಂದು

ಕಾಸರಗೋಡು : ಕಾಸರಗೋಡು ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಮತ್ತು ಗ್ರಂಥಾಲಯದ ಅಂಗ ಸಂಸ್ಥೆಯಾದ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡು ಜಿಲ್ಲಾ ಘಟಕದ ಆಶ್ರಯದಲ್ಲಿ ವಿದ್ಯಾರ್ಥಿಗಳಿಗಾಗಿ ನಡೆಯುವ ಏಕದಿನ ಕನ್ನಡ ಸಾಹಿತ್ಯ ಅಭಿಯಾನವಾದ, ‘ಕನ್ನಡದ ನಡಿಗೆ ಶಾಲೆಯ ಕಡೆಗೆ” ಶೈಕ್ಷಣಿಕ ಶಿಬಿರದ 5ನೇ ಕಾರ್ಯಕ್ರಮವು 2025 ಆಗಸ್ಟ್ 23ರಂದು ಬೆಳಗ್ಗೆ 9.30ರಿಂದ ಕೊಂಡೆವೂರು ಶ್ರೀ ಸದ್ಗುರು ನಿತ್ಯಾನಂದ ವಿದ್ಯಾಪೀಠದಲ್ಲಿ ನಡೆಯಲಿದೆ.

ಕಾರ್ಯಕ್ರಮವನ್ನು ಕಾಸರಗೋಡಿನ ಕನ್ನಡ ಭವನ ಮತ್ತು ಗ್ರಂಥಾಲಯದ ಸ್ಥಾಪಕ ಅಧ್ಯಕ್ಷ ಡಾ. ಕೆ ವಾಮನ್ ರಾವ್ ಬೇಕಲ್ – ಸಂಧ್ಯಾರಾಣಿ ಟೀಚರ್ ಉದ್ಘಾಟಿಸುವರು.

ಶಾಲೆಯ ಆಡಳಿತ ಮಂಡಳಿಯ ಸದಸ್ಯ, ನಿವೃತ್ತ ಶಿಕ್ಷಕ ವಿ. ಬಿ. ಕುಳಮರ್ವ ಸಭೆಯ ಅಧ್ಯಕ್ಷತೆ ವಹಿಸುವರು. ಕೊಂಡೆವೂರು ಶ್ರೀ ಸದ್ಗುರು ನಿತ್ಯಾನಂದ ವಿದ್ಯಾಪೀಠದ ಮುಖ್ಯ ಶಿಕ್ಷಕಿ ರೇಖಾ ಪ್ರದೀಪ್, ಕೊಂಡೆವೂರು ಶ್ರೀ ಸದ್ಗುರು ನಿತ್ಯಾನಂದ ವಿದ್ಯಾಪೀಠದ ಪಿಟಿಎ ಅಧ್ಯಕ್ಷೆ ಆಶಾ ಪ್ರಕಾಶ್ ರೈ ಕಲಾಯಿ ಶುಭ ಹಾರೈಸುವರು.

ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಬಂಧ ರಚನೆಯಲ್ಲಿ ಸಾಹಿತಿಗಳಾದ ಶಿಕ್ಷಣ ತಜ್ಞ ವಿ ಬಿ ಕುಳಮರ್ವ, ಕಥಾ ರಚನೆಯಲ್ಲಿ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ, ಸಾಹಿತಿ ವಿರಾಜ್ ಅಡೂರು ಹಾಗೂ ಚಿತ್ರ ರಚನೆಯಲ್ಲಿ ಚಿತ್ರ ರಚನಾ ಶಿಕ್ಷಕ ಮೋಹನದಾಸ್ ಅನ್ನೆಪಲ್ಲಡ್ಕ ಭಾಗವಹಿಸುವರು.

ಕಾಸರಗೋಡಿನ ಕನ್ನಡ ಭವನದ ಕಾರ್ಯದರ್ಶಿ ವಸಂತ ಕೆರೆಮನೆ, ಪರಿಷತ್ತಿನ ಜಿಲ್ಲಾ ಘಟಕದ ಕಾರ್ಯದರ್ಶಿ ದೇವರಾಜ ಆಚಾರ್ಯ ಸೂರಂಬೈಲ್ ಉಪಸ್ಥಿತರಿರುವರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕಿ ಸುಮಾ ಎನ್, ಶಿಕ್ಷಕಿ ಚಿತ್ರಕಲಾ ದೇವರಾಜ ಆಚಾರ್ಯ ಸೂರಂಬೈಲು, ವಿದ್ಯಾರ್ಥಿನಿಯರಾದ ಪ್ರಾರ್ಥನ, ವೈಷ್ಣವಿ, ಸಂವೃತ ಮೊದಲಾದವರು ಸಹಕರಿಸುವರು.

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group