ಜೀವನಕ್ಕೆ ನಗು ಬೇಕು ಇಲ್ಲದಿದ್ದರೆ ಬಾಳು ತಲೆ ಭಾರವಾಗುವುದು – ಪೂಜ್ಯ ವಾಗ್ದೇವಿ ತಾಯಿ

Must Read

ಬೆಳಗಾವಿ – ವಚನ ಪಿತಾಮಹ ಡಾ ಫ ಗು ಹಳಕಟ್ಟಿ ಭವನ ಮಹಾಂತೇಶ ನಗರ ಬೆಳಗಾವಿಯಲ್ಲಿ ದಿ.21.08.2025ರಂದು ಪೂಜ್ಯ ಕುಮದಿನಿ ತಾಯಿಯವರು ಗುರು ಜಗಜ್ಯೋತಿ ಬಸವಣ್ಣವರ ಭಕ್ತಿ ಗೀತೆ ಹಾಡಿದರು.

ಪೂಜ್ಯವಾಗ್ದೇವಿ ತಾಯಿಯವರು ಉಪನ್ಯಾಸ ನಿಡುತ್ತಾ ಶಿವಶರಣ ನಗೆಯ ಮಾರಿತಂದೆ ಜೀವನಕ್ಕೆ ಹಾಸ್ಯಬೇಕು. ನಗೆ ಬೇಕು ಇವಿಲ್ಲದಿದ್ದರೆ ಬಾಳು ತಲೆ ಭಾರವಾಗುವುದು. ಹಾಸ್ಯ ಅಪಹಾಸ್ಯವಾಗ ಬಾರದು.ನಗೆ ಹೊಗೆಯಾಗಬಾರದು. ನಗುವದು ಜೀವನ ಪಾವನ ನಕ್ಕರೆ ಸ್ವಗ೯. ಉರಿ ಬಂದರೂ ಸಿರಿಬಂದರೂ ಇಕ್ಕುವ ಶೂಲ ಪ್ರಾಪ್ತಿಯಾದರೂ ಅದನ್ನು ನಗು ನಗುತ್ತಾ ಎದುರಿಸಿದರು. ನಗೆ ಮಾರಿ ತಂದೆ ತಂದೆಯ ಮಾರಿ ನೋಡಿದರೆ ನಗಬೇಕು ಅಂತಹ ನಗೆ ಮುಖದವರು ಇದ್ದರು.ಕಣ್ಣಲ್ಲಿ ಕಾರುಣ್ಯ ಮುಖವು ಮನಸಿನ ಬಾವನೆಗಳನ್ನು ತಿಳಿಸುತ್ತದೆ ದಿನಕ್ಕೆ ಮಗು ಮೂರುನೂರು ಸಾರೆ ನಗುವುದು.ಮಾನವನಿಗೆ ಬಿಗುಮಾನವಿರಬಾರದು ಅಹಂಕಾರವಿರಬಾರದು.ನಾವು ನಗುನಗುತ್ತಾ ಮಾತನಾಡಿಸುವುದು.ನಗುವುದು ನುಡಿವುದು ಶಿವಭಕ್ತರೊಡನೆ ಸುಮ್ಮಾನ ಹಮ್ಮ ಇರಬಾರದು.ನಗೆಯಲ್ಲಿ ಅನೇಕ ಪ್ರಕಾರ ಇವೆ. ಮಾನವನಿಗೆ ಸಹನೆ ಇರಬೇಕು.ಬೇಕು ಬೇಕು ಇರಬಾರದು. ಆಸೆ ಇರಬೇಕು ದುರಾಸೆ ಇರಬಾರದು ಎಂದು ಉಪನ್ಯಾಸ ನೀಡಿದರು.

ಈರಣ್ಣಾ ದೇಯಣ್ಣವರ ಅಧ್ಯಕ್ಷತೆ ವಹಿಸಿದ್ದರು.  ಮಹಾದೇವಿ ಅರಳಿ ಸಾಮೂಹಿಕ ಪ್ರಾಥ೯ನೆ ನಡೆಸಿಕೊಟ್ಟರು. ಜಯಶ್ರೀ ನಷ್ಟೆ, ಸುಜಾತಾ ಮತ್ತಿಕಟ್ಟಿ, ದೀಪಾ ಪಾಟೀಲ, ಶೋಭಾ ದೇಯಣ್ಣವರ, ಲೀಲಾವತಿ ರಾಚೂಟಿಮಠ,ಶ್ರೀದೇವಿ ಕಾಡಣ್ಣವರ,ಗ೦ಗಾ ಯದ್ದಲಾಪೂರಮಠ,ರಾಜಶ್ರೀ ಖನಗಣಿ,ಶೋಭಾ ಅ೦ಗಡಿ,ರತ್ನಾ ಬೆಣಚನಮರಡಿ,ಸುಶೀಲಾ ವಸ್ತ್ರದ,ಪ್ರೀತಿ ಗುರಯ್ಯ ಮಠದ,ಸುವಣ೯ ತಿಗಡಿ,ಶಾಂತಾ ಮಲಗೌಡ ಪಾಟೀಲ, ರತ್ನಾ ಮು೦ಗರವಾಡಿ, ರೂಪಾ ದಿವಟಗಿ,ಜಯಶ್ರೀ ಚಾವಲಗಿ, ಬಸವರಾಜ ಕರಡಿಮಠ, ಪ.ಬಿ.ಕರಿಕಟ್ಟಿ, ಸತೀಶ ಪಾಟೀಲ,ಶೇಖರ ವಾಲಿ ಇಟಗಿ, ಶ೦ಕರ ಗುಡಗನಟ್ಟಿ, ಶ೦ಕರ ದಳವಾಯಿ, ಶಿವಾನಂದ ನಾಯಕ, ತಿಗಡಿ,ಮಹಾಂತೇಶ ಮೆಣಸಿನಕಾಯಿ, ಶರಣ ಶರಣೆಯರು ಉಪಸ್ಥಿತರಿದ್ದರು.

ಮಂಗಳಾ ಕಾಕತಿಕರ ದಾಸೋಹ ಸೇವೆಗೈದರು.ಸುರೇಶ ನರಗುಂದ ಸ್ವಾಗತಿಸಿ ವಂದಿಸಿದರು.ಸಂಗಮೇಶ ಅರಳಿ ನಿರೂಪಿಸಿದರು .ಮಂಗಲದೊಂದಿಗೆ ಸಂಪನ್ನ ಗೂಂಡಿತು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group