ಮಹಾಸಾಧ್ವಿ ಮಲ್ಲಮ್ಮ ಹಾಗೆ ಪ್ರತಿಯೊಬ್ಬ ಮಹಿಳೆಯರು ಬದುಕಬೇಕು-ಕಳ್ಳಿಗುದ್ದಿ

Must Read

ಮೂಡಲಗಿ -ಕನ್ನಡ ಸಾಹಿತ್ಯ ಪರಿಷತ್ತು ಮೂಡಲಗಿ ಹಾಗೂ ರೆಡ್ಡಿ ಸಮಾಜದವರ ಸಹಯೋಗದಲ್ಲಿ ಮೂಡಲಗಿ ಪಟ್ಟಣದ ಎಮ್.ಇ.ಎಸ್.ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ಶ್ರಾವಣ ಮಾಸದ ನಿಮಿತ್ತ “ಹೇಮರಡ್ಡಿ ಮಲ್ಲಮ್ಮ ”ನ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಜರುಗಿತು.

ಉಪನ್ಯಾಸಕರಾದ ಹಳ್ಳೂರಿನ ಸರಕಾರಿ ಪದವಿಪೂರ್ವ ಕಾಲೇಜು ಪ್ರಭಾರಿ ಪ್ರಾಚಾರ್ಯರಾದ ವಾಯ್. ಬಿ. ಕಳ್ಳಿಗುದ್ದಿಯವರು ಮಾತನಾಡುತ್ತಾ, ಹೇಮರೆಡ್ಡಿ ಮಲ್ಲಮ್ಮಳು ಶ್ರೀಶೈಲದ ಚೆನ್ನಮಲ್ಲಿಕಾರ್ಜುನ ಭಕ್ತೆ ಮತ್ತು ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಿದ ಮಹಿಳೆ. ಅವರ ಜೀವನವು ಆದರ್ಶಮಯವಾಗಿದೆ ಮತ್ತು ಪ್ರತಿಯೊಬ್ಬ ಮಹಿಳೆಯು ಅನುಸರಿಸಬೇಕಾದ ಮಾರ್ಗವಾಗಿದೆ. ಸ್ತ್ರೀ ಕುಲಕ್ಕೆ ಮಾದರಿಯಾಗಿ ಸಮಾಜದ ಉದ್ದಾರಕ್ಕಾಗಿ ಭಕ್ತಿಯ ಸಾಕಾರ ಮೂರ್ತಿಯಾಗಿರುವ ಮಲ್ಲಮ್ಮರಂತೆ ಪ್ರತಿಯೊಬ್ಬ ಮಹಿಳೆಯು ಬದುಕಬೇಕು. ಎಷ್ಟೇ ಕಷ್ಟ ತೊಂದರೆಗಳು ಬಂದರು ಕೂಡ ಅದನ್ನು ಎದುರಿಸಿದ ದಿಟ್ಟ ಮಹಿಳೆಯಾಗಿದ್ದ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ ಮಹಿಳೆಯರ ಕುಲ ತಿಲಕವಾಗಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಿಕ್ಷಣ ಸಂಸ್ಥೆಯ ಚೆರ್ಮನರಾದ  ವೆಂಕಟೇಶ. ಸೋನವಾಲ್ಕರವರು, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಿನಾದ್ಯಂತ ಅನೇಕ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿ ಪರಿಷತ್ತನ್ನು ಜನರ ಬಳಿಗೆ ಕೊಂಡೊಯ್ಯುತ್ತಿರುವುದು ಶ್ಲಾಘನೀಯ. ಪರಿಷತ್ತಿನ ಎಲ್ಲಾ ಕಾರ್ಯಕ್ರಮಗಳಿಗೆ ನಮ್ಮ ರೆಡ್ಡಿ ಸಮಾಜ ಸದಾ ಬೆಂಬಲವಾಗಿರುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕ. ಸಾ. ಪ. ಅಧ್ಯಕ್ಷ ಡಾ. ಸಂಜಯ. ಅ. ಶಿಂಧಿಹಟ್ಟಿ, ಸಂತೋಷ ಸೋನವಾಲ್ಕರ, ಪುಲಕೇಶಿ ಸೋನವಾಲ್ಕರ, ರಂಗಣ್ಣ ಸೋನವಾಲ್ಕರ, ಪ್ರಕಾಶ ಸೋನವಾಲ್ಕರ,ಸುರೇಶ ಚಿಪ್ಪಲಕಟ್ಟಿ, ಬಿ. ವಾಯ್. ಶಿವಾಪುರ, ಆರ್. ಟಿ. ಲಂಕೆಪ್ಪನವರ,ಸುಭಾಷ ಕಮದಾಳ, ಸಮಾಜದ ಎಲ್ಲಾ ಹಿರಿಯರು ಉಪಸ್ಥಿತರಿದ್ದರು.

ಸುರೇಶ ಲಂಕೆಪ್ಪನವರ ಪ್ರಾಸ್ತವಿಕ, ಎ. ಎಚ್. ಒಂಟಗೋಡಿ ಸ್ವಾಗತ, ಅರ್ಜುನ ಕಾಂಬಳೆ ಪ್ರಾರ್ಥನೆ ಹಾಗೂ ಬಿ. ಆರ್. ತರಕಾರ ಕಾರ್ಯಕ್ರಮ ನಿರ್ವಹಣೆ ಮಾಡಿದರು.

Latest News

ಸಿಂದಗಿ : ಆರೆಸ್ಸೆಸ್ ಗಣ ವೇಷಧಾರಿಗಳಿಂದ ಆಕರ್ಷಕ ಪಥ ಸಂಚಲನ

ಸಿಂದಗಿ; ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದ ಹಾಗೂ ದೀಪಾವಳಿ ಉತ್ಸವದ ಅಂಗವಾಗಿ ಸಾವಿರಕ್ಕೂ ಹೆಚ್ಚು ಗಣ ವೇಷಧಾರಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.ಶನಿವಾರ...

More Articles Like This

error: Content is protected !!
Join WhatsApp Group