ಸಿಂದಗಿ : ಸುಪ್ರೀಮ್ ಆದೇಶದಂತೆ ಜಾಗ ತೆರವುಗೊಳಿಸಲು ಮನವಿ ಮಾಡಿದ ಅಧಿಕಾರಿಗಳು

Must Read

ಸಿಂದಗಿ: ಪಟ್ಟಣದಲ್ಲಿನ ಸರ್ವೇ ನಂಬರ್ ೮೪೨/೨*೨ರ ೨ ಎಕರೆ ೧೦ ಗುಂಟೆ ಜಮೀನಿನಲ್ಲಿ ಕಳೇದ ೨೫ ವರ್ಷಗಳ ಹಿಂದೆ ಪುರಸಭೆ ನೀಡಿದ ನಿವೇಶನದಲ್ಲಿ ಇರುವ ೮೦ ಕುಟುಂಬಗಳ ಮನೆಗಳನ್ನು ಎರಡು ದಿನಗಳಲ್ಲಿ ತೆರವುಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಪುರಸಭೆ ವತಿಯಿಂದ ನೋಟೀಸ ನೀಡಿ ೨೩ ರಂದು ರೊಳಗಾಗಿ ಮನೆಗಳನ್ನು ತೆರವುಗೊಳಿಸಬೇಕು ಎಂದು ಗಡುವು ನೀಡಲಾಗಿದೆ
ಇದರ ಹಿನ್ನೆಲೆಯಲ್ಲಿ ಸದರಿ ಸ್ಥಳಕ್ಕೆ ಇಂಡಿ ಉಪವಿಬಾಗಾಧಿಕಾರಿ ಅನುರಾಧ ವಸ್ತ್ರದ, ಡಿವೈಎಸ್ಪಿ ಎಚ್.ಎಸ್ ಜಗದೀಶ, ತಹಶೀಲ್ದಾರ್ ಕರೆಪ್ಪ ಬೆಳ್ಳಿ ಹಾಗೂ ಪುರಸಭೆ ಮುಖ್ಯಾಧಿಕಾರಿ ಅವರ ನೇತೃತ್ವದಲ್ಲಿ ಇಲ್ಲಿನ ನಿವಾಸಿಗಳೊಂದಿಗೆ ಮಾತುಕತೆ ನಡೆಸಿ ಪರಿಸ್ಥಿತಿ ಬಗ್ಗೆ ತಿಳಿಹೇಳಲಾಯಿತು.

ಈ ಜಾಗೆಯಲ್ಲಿ ೧೩ ಪಕ್ಕಾ ಮನೆಗಳಿದ್ದು ೨೦ ಕಚ್ಚಾ ಕಟ್ಟಡಗಳು, ೩೮ ಶೆಡ್ಡುಗಳು, ೯ ಖುಲ್ಲಾ ಪ್ಲಾಟ್‌ಗಳಿವೆ ಎಲ್ಲರಿಗೂ ನೋಟೀಸ್ ನೀಡಲಾಗಿದೆ ಈಗಾಗಲೇ ನ್ಯಾಯಾಧೀಶರ ಬಳಿ ಕಾಲಾವಕಾಶ ಕೇಳಲಾಗಿದೆ ಸುಪ್ರೀಂ ಕೋರ್ಟ್ ಆಗಸ್ಟ್ ೨೩ರೊಳಗೆ ಜಾಗ ತೆರವುಗೊಳಿಸಬೇಕು ಎಂದು ಹೇಳಿದೆ. ನನ್ನ ಮೇಲೆ ಬಂಧನ ವಾರೆಂಟ್ ಜಾರಿ ಮಾಡಲಾಗಿದೆ. ಎಲ್ಲರಿಗೂ ನೋಟಿಸ್ ನೀಡಲಾಗಿದೆ. ಸ್ವಯಂ ಪ್ರೇರಿತರಾಗಿ ತೆರವುಗೊಳಿಸಬೇಕು. ಎಂದು ಮುಖ್ಯಾದಿಕಾರಿ ಎಸ್.ರಾಜಶೇಖರ ಮನವಿ ಮಾಡಿಕೊಂಡರು. ಇಲ್ಲದರೆ ನಾವು ತೆರವುಗೊಳಿಸುವುದು ಅನಿವಾರ್ಯ ಎಂದರು.

ಪುರಸಭೆ ಮಾಜಿ ಅಧ್ಯಕ್ಷ ಶಾಂತವೀರ ಬಿರಾದಾರ ಮಾತನಾಡಿ, ಏಕಾಏಕಿ ಇಲ್ಲಿನ ಜನರು ಖಾಲಿ ಮಾಡಿಕೊಂಡು ಹೋಗಬೇಕು ಎಂದರೆ ಹೇಗೆ, ಅವರಿಗೆ ಸಮಯ ಕೊಡಿ. ಪುರಸಭೆ ಹೆಸರಿನಲ್ಲಿನ ಎರಡ್ಮೂರು ಎಕರೆ ಜಾಗವನ್ನು ಮಾರಾಟ ಮಾಡಿ ಆ ಹಣವನ್ನು ಈ ಜಾಗದ ಮಾಲೀಕರಿಗೆ ಪರಿಹಾರ ನೀಡುವ ಮೂಲಕ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.

ಈ ಜಾಗ ತೆರವುಗೊಳಿಸುವ ಸಂಬಂಧ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ನಾನು ಇಲ್ಲಿಗೆ ಬಂದಿದ್ದು, ಆಗಸ್ಟ್ ೨೩ರೊಳಗೆ ಜಾಗವನ್ನು ತೆರವುಗೊಳಿಸಬೇಕು ಎಂದು ಉಪವಿಭಾಗಾಧಿಕಾರಿ ಅನುರಾಧ ವಸ್ತ್ರದ ಹೇಳಿದರು.

ಕಳೆದ ೨೦ ವರ್ಷಗಳಿಂದ ಇಲ್ಲಿ ವಾಸವಾಗಿದ್ದೇವೆ. ಪುರಸಭೆ ಇಷ್ಟು ವರ್ಷಗಳ ಕಾಲ ತೆರಿಗೆ ಕಟ್ಟಿಕೊಂಡು ಬಂದಿದ್ದೇವೆ. ಲೋನ್ ತೆಗೆದುಕೊಂಡಿದ್ದೇವೆ. ಈಗ ಹೋಗಿ ಎಂದರೆ ಎಲ್ಲಿಗೆ ಹೋಗಬೇಕು ಎಂದು ತಮ್ಮ ಅಳಲು ತೋಡಿಕೊಂಡರು. ಈ ವೇಳೆ ಇಲ್ಲಿನ ನಿವಾಸಿಗಳು ಕಣ್ಣೀರು ಹಾಕಿದರು.

Latest News

ಬೆಳಕಿನ ಹಬ್ಬ ದೀಪಾವಳಿ.

            'ಹಬ್ಬಗಳ ರಾಜ' ಎಂದು ಪ್ರಖ್ಯಾತಿ ಪಡೆದಿರುವ ಪ್ರಮುಖ ರಾಷ್ಟ್ರೀಯ ಹಬ್ಬ' ಬೆಳಕಿನ ಹಬ್ಬ  ದೀಪಾವಳಿ ಹಬ್ಬ'. ದೇಶದಾದ್ಯಂತ...

More Articles Like This

error: Content is protected !!
Join WhatsApp Group