ಬಾಗಲಕೋಟೆ- ತಾಲೂಕಿನ ಸುಕ್ಷೇತ್ರ ಮುಗಳಖೋಡ ಗ್ರಾಮದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ಕಳೆದ ಒಂದು ತಿಂಗಳಿನಿಂದ ನಡೆದು ಬಂದಿರುವ “ಶ್ರಾವಣ ಸಂಭ್ರಮ” 2025 “ಶರಣರ ಚರಿತ್ರಾಮೃತ” ಪುರಾಣದ ಸಮಾರೋಪ ಸಂಪನ್ನ ಕಾರ್ಯಕ್ರಮ ರವಿವಾರ ದಿ.24 ರಂದು ಮುಂಜಾನೆ ಸಮಯ 8.30 ಕ್ಕೆ ಸಮಾರೋಪ ಜರುಗಲಿದೆ ಎಂದು ಆಶ್ರಮದ ಕುಮಾರ ಗುರುಪ್ರಸಾದ ಸ್ವಾಮೀಜಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದೆ ಸಂದರ್ಭ ದಲ್ಲಿ ಆಶ್ರಮದಲ್ಲಿ ನಿರಂತರವಾಗಿ ನಡೆಯುತ್ತಿರುವ ಮನೆಯಂಗಳದಲ್ಲಿ ಶರಣರ ಮನದ ಮಾತು, ತತ್ವದರ್ಶನ 90ನೇ ಮಾಸಿಕ ಕಾರ್ಯಕ್ರಮವು ಹಾಗೂ 111ನೇಯ ರವಿವಾರದ ಸತ್ಸಂಗವು ಜರುಗುವುದು.
ಜಗದ್ಗುರು ಶ್ರೀ ಸಿದ್ಧಾರೂಢರ ಪಂಚಾಮೃತ ಅಭಿಷೇಕ, ಸಹಸ್ರ ಬಿಲ್ವಾರ್ಚನೆ, ಪಾರಾಯಣ, ಭಜನೆ, ಪ್ರವಚನ, ಸಾಧಕರಿಗೆ ಸತ್ಕಾರ ಮುಂತಾದ ಕಾರ್ಯಕ್ರಮಗಳು ಪರಮಪೂಜ್ಯ ಶ್ರೀ ಶರಣಬಸವ ಶಾಸ್ತ್ರಿಗಳ ಸಾನ್ನಿಧ್ಯದಲ್ಲಿ ನಡೆಯಲಿದೆ ಎಂದು ಗುರುಪ್ರಸಾದ ಸ್ವಾಮೀಜಿ ತಿಳಿಸಿದ್ದಾರೆ.