ಹೆಡ್ ಕಾನ್ಸ್ಟೇಬಲ್ ಬೋರಗಿಯವರಿಗೆ ಸನ್ಮಾನ

Must Read

ಸಿಂದಗಿ: ಬಿ ಎಲ್ ಡಿ ಸೌಹಾರ್ದ ಬಿಜಾಪುರ ಲಿಂಗಾಯತ ಡೆವಲಪ್ಮೆಂಟ್ ಸೌಹಾರ್ದ ಸಹಕಾರಿ ಸಂಘ ನಿ. ವಿಜಯಪುರ ನೂತನ ಶಾಖೆ ಇದೆ ಆಗಸ್ಟ್ ತಿಂಗಳ ೨೪ ನೇ ತಾರೀಖು ರವಿವಾರ ಬೆಳಿಗ್ಗೆ ೧೦:೩೦ ಕ್ಕೆ ಬೆಂಗಳೂರಿನ ಗಾಂಧಿ ಭವನದಲ್ಲಿ ಆರಂಭವಾಗಲಿದೆ.

ತುಮಕೂರಿನ ಸಿದ್ದಗಂಗಾ ಮಠದ ಮ.ನಿ.ಪ್ರ ಶ್ರೀ ಶ್ರೀ ಸಿದ್ಧಲಿಂಗ ಮಹಾ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ. ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಉದ್ಘಾಟನೆ ಮಾಡಲಿದ್ದಾರೆ. ಅಧ್ಯಕ್ಷತೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು, ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ ಪಾಟೀಲ್ ವಹಿಸಲಿದ್ದಾರೆ.

ಇದೇ ವೇಳೆ ಬೆಂಗಳೂರಿನಲ್ಲಿ ನೆಲೆಸಿರುವ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ೫ ಜನ ಸಾಧಕರಿಗೆ ಗೌರವ ಸನ್ಮಾನ ಹಮ್ಮಿಕೊಂಡಿದ್ದು, ತಾಲೂಕಿನ ಬೋರಗಿ ಗ್ರಾಮದ ಹೆಡ್ ಕಾನ್ಸ್ಟೇಬಲ್ ಮೌಲಾಲಿ ಆಲಗೂರ ಇವರ ಸಾಹಿತ್ಯ ಸೇವೆಯನ್ನು ಗುರುತಿಸಿ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷರಾದ ವಿಧಾನ ಪರಿಷತ್ ಸದಸ್ಯ ಸುನಿಲಗೌಡ ಬ.ಪಾಟೀಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest News

ಲೇಖನ : ಹಟ್ಟಿ ಹಬ್ಬ

ದೀಪಾವಳಿಯು ಭಾರತೀಯರ ಪ್ರಮುಖ ಹಬ್ಬಗಳಲ್ಲಿ ಒಂದು. ದೀಪಾವಳಿ ಎಂದರೆ ದೀಪಗಳ ಹಬ್ಬ, ಮನೆ ಮನೆಗಳ ಮುಂಭಾಗದಲ್ಲೆಲ್ಲ ದೀಪಗಳ ಸಾಲು ಹಾಗೂ ಆಕಾಶಬುಟ್ಟಿ ಹಚ್ಚುವ ಮೂಲಕ ಜನರು...

More Articles Like This

error: Content is protected !!
Join WhatsApp Group