ಸಿಂದಗಿ : ಆ. ೨೬, ೨೮ ಹಾಗೂ ೩೦ ಕ್ಕೆ ದಸರಾ ಕ್ರೀಡಾಕೂಟ

Must Read

ಸಿಂದಗಿ; ಇದೇ, ಆ.೨೬, ೨೮ ಹಾಗೂ ೩೦ ರಂದು ಸನ್ ೨೦೨೫-೨೦೨೬ನೇ ಸಾಲಿನ ದೇವರ ಹಿಪ್ಪರಗಿ ತಾಲ್ಲೂಕಿನ ದಸರಾ ಕ್ರೀಡಾಕೂಟವನ್ನು ಆ ೬ ರಂದು ಬಿಎಲ್‌ಡಿಇ ಸಂಸ್ಥೆಯ ಎ.ಬಿ. ಸಾಲಕ್ಕಿ ಕಾಲೇಜಿನಲ್ಲಿ, ಸಿಂದಗಿ ತಾಲೂಕಿನ ಕ್ರೀಡಾಕೂಟವನ್ನು ದಿನಾಂಕ: ೨೮ ರಂದು ತಾಲೂಕ ಕ್ರೀಡಾಂಗಣ ಸಿಂದಗಿಯಲ್ಲಿ ಮತ್ತು ಆಲಮೇಲ ತಾಲೂಕಿನ ದಸರಾ ಕ್ರೀಡಾಕೂಟವನ್ನು ಆ.೩೦ ರಂದು ಕೇದಾರಲಿಂಗೇಶ್ವರ ಪೌಢ ಶಾಲೆ ಬಳಗಾನೂರಲ್ಲಿ ಆಯೋಜಿಸಲಾಗಿದೆ ಎಂದು ದೈಹಿಕ ಶಿಕ್ಷಣ ಪರಿವೀಕ್ಷಕರಾದ ರಮೇಶ, ಎಮ್ ಬಿರಾದಾರ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿದ ಅವರು, ಪುರುಷರಿಗಾಗಿ ೧೦೦ಮೀ, ೨೦೦ಮೀ, ೪೦೦ಮೀ, ೮೦೦ಮೀ, ೧.೫೦೦ಮೀ, ೫.೦೦೦ಮೀ, ೧೦.೦೦೦ಮೀ, ಓಟ. ೧೧೦ಮೀ ಹರ್ಡಲ್ಸ್, ೪x೧೦೦ಮೀ ರಿಲೇ, ೪x೪೦೦ಮೀ ರಿಲೇ, ಗುಂಡು ಎಸೆತ, ಚಕ್ರ ಎಸೆತ, ಭಲ್ಲೆ ಎಸೆತ, ಉದ್ದ ಜಿಗಿತ, ಎತ್ತರ ಜಿಗಿತ, ತ್ರಿವಿಧ ಜಿಗಿತ ಸ್ಪರ್ದೆಗಳನ್ನು ಏರ್ಪಡಿಸಲಾಗಿದೆ.

ಮಹಿಳೆಯರಿಗಾಗಿ ೧೦೦ಮೀ, ೨೦೦ಮೀ, ೪೦೦ಮೀ, ೮೦೦ಮೀ, ೧.೫೦೦ಮೀ, ೩೦೦೦ಮೀ, ೧೦೦ಮೀ ಹರ್ಡಲ್ಸ್, ೪x೧೦೦ಮೀ, ರಿಲೇ,೪x೪೦೦ಮೀ ರಿಲೇ, ಗುಂಡು ಎಸೆತ, ಚಕ್ರ ಎಸೆತ, ಭಲ್ಲೆ ಎಸೆತ, ಉದ್ದ ಜಿಗಿತ, ಎತ್ತರ ಜಿಗಿತ, ತ್ರಿವಿಧ ಜಿಗಿತ ಸ್ಪರ್ದೆಗಳನ್ನು ಏರ್ಪಡಿಸಲಾಗಿದೆ.

ಗುಂಪು ಆಟಗಳು ಪುರುಷರಿಗಾಗಿ ಖೋ ಖೋ, ಕಬಡ್ಡಿ, ವಾಲಿಬಾಲ್ ಮತ್ತು ಪುಟ್ಬಾಲ್, ಮಹಿಳೆಯರಿಗಾಗಿ , ಕಬಡ್ಡಿ, ವಾಲಿಬಾಲ್, ಮತ್ತು ಥ್ರೋಬಾಲ್ ಸ್ಪರ್ದೆಗಳನ್ನು ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ..೮೧೦೫೮೪೯೩೪೭ ಗೆ ಸಂಪರ್ಕಿಸಬಹುದು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group