Homeಸುದ್ದಿಗಳುರಕ್ತದಾನದ ನಂತರ ಹೊಸ ಚೈತನ್ಯ ಹುಟ್ಟುತ್ತದೆ - ಲಯನ್ ಬಿರಾದಾರ

ರಕ್ತದಾನದ ನಂತರ ಹೊಸ ಚೈತನ್ಯ ಹುಟ್ಟುತ್ತದೆ – ಲಯನ್ ಬಿರಾದಾರ

ಸಿಂದಗಿ: ರಕ್ತದಾನ ಎಲ್ಲದಾನಗಳಿಗಿಂತಲೂ ಶ್ರೇಷ್ಠದಾನ. ಒಬ್ಬರ ರಕ್ತದಾನ ಮೂರು ಜನರ ಜೀವ ಉಳಿಸಬಹುದು ಎಂದು ನಿವೃತ್ತ ಪ್ರಾಚಾರ್ಯ ಲಾಯನ್ ಐ.ಬಿ.ಬಿರಾದಾರ ಹೇಳಿದರು.

ಪಟ್ಟಣದ ಪ್ರಜಾಪಿತ ಬ್ರಹ್ಮಾಕುಮಾರೀಸ್ ವಿಶ್ವವಿದ್ಯಾಲಯದಲ್ಲಿ ಲಾಯನ್ಸ್ ಕ್ಲಬ್, ತಾಲೂಕಾ ಯುಥ್ ರೆಡ್‌ಕ್ರಾಸ್ ಸಂಸ್ಥೆ ಸಿ.ಎಂ.ಮನಗೂಳಿ ಮಹಾವಿದ್ಯಾಲಯ, ಸಾರ್ವಜನಿಕ ಆಸ್ಪತ್ರೆ ಇವುಗಳ ಸಹಯೋಗದಲ್ಲಿ ವಿಶ್ವ ಬಂಧುತ್ವ ದಿವಸ ರಾಜಯೋಗಿನಿ ಪ್ರಕಾಶಮಣಿ ದಾದೀಜಿಯವರ ೧೮ನೇ ಪುಣ್ಯತಿಥಿಯ ನಿಮಿತ್ತ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿ, ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ ಆದ್ದರಿಂದ ದಾನದ ಮೂಲಕ ಮಾತ್ರ ರಕ್ತದ ಅಗತ್ಯವನ್ನು ಪೂರೈಸಬಹುದು. ರಕ್ತದಾನದ ನಂತರ ದೇಹವು ಹೊಸ ಕೆಂಪುರಕ್ತ ಕಣಗಳನ್ನು ಉತ್ಪಾದಿಸಲು ಪ್ರಾರಂಭಿಸುತ್ತದೆ. ಇದು ಚೈತನ್ಯವನ್ನು ಹೆಚ್ಚಿಸುತ್ತದೆ ಎಂದರು.

ಸಿಂದಗಿ ತಾಲೂಕಾ ಲಾಯನ್ಸ್ ಕ್ಲಬ್ ಅಧ್ಯಕ್ಷ ಎಸ್.ಎಸ್.ಪಾಟೀಲ ಮಾತನಾಡಿ, ಪ್ರಜಾಪಿತ ಬ್ರಹ್ಮಾಕುಮಾರೀಸ್ ವಿಶ್ವವಿದ್ಯಾಲಯ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಸಂಸ್ಥೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಸೇವಾ ಕಾರ್ಯ ಜರುಗುತ್ತಿರುವುದು ಹೆಮ್ಮೆ ತಂದಿದೆ ಅಲ್ಲದೆ ರಾಜಯೋಗಿನಿ ಪ್ರಕಾಶಮಣಿ ದಾದೀಜಿಯವರ ಜೀವಿತಾವಧಿಯ ಸೇವಾ ಕಾರ್ಯಗಳು ನಮ್ಮೆಲ್ಲರಿಗೂ ಸನ್ಮಾರ್ಗದತ್ತವಾಗಿವೆ ಎಂದು ಅಭಿಮತ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಗಳಾಗಿ ಸಾರ್ವಜನಿಕ ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಶಂಕರರಾವ ದೇಶಮುಖ ಮಾತನಾಡಿದರು. ಸಾನ್ನಿಧ್ಯತೆಯನ್ನು ರಾಜಯೋಗಿನಿ ಪವಿತ್ರಾ ಅಕ್ಕನವರು ವಹಿಸಿದ್ದರು. ಶಿಬಿರದಲ್ಲಿ ಸುಮಾರು ೫೦ ಜನ ಇನ್ನಿತರರು ರಕ್ತದಾನ ಮಾಡಿದರು.

ಇದೇ ಸಂದರ್ಭದಲ್ಲಿ ರಾಜಯೋಗಿ ಡಾ. ಬಿ.ಜಿ.ಪಾಟೀಲ, ಡಾ. ಅಂಬರೀಶ ಬಿರಾದಾರ ಲಾಯನ್ ಕೆ.ಎಚ್.ಸೋಮಾಪುರ, ಎಸ್.ಬಿ.ಚಾಗಶೆಟ್ಟಿ, ಪಿ.ಎಂ.ಮಡಿವಾಳರ, ಶರಣು ಬೂದಿಹಾಳ, ಬಿ.ಎಂ.ಸಿಂಗನಳ್ಳಿ, ಎಸ್.ಎಚ್.ಜಾಧವ, ಶಿವಕುಮಾರ ಶಿವಸಿಂಪಿ, ಉಪಾಸಕರಾದ ಎಸ್.ಎಸ್.ಪತ್ತಾರ, ಪ್ರಮೀಳಾ ಪಾಟೀಲ, ಸಿ.ಎಂ.ಪೂಜಾರ, ಎಸ್.ಬಿ.ಬುಳ್ಳಾ, ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗಳು, ವಿದ್ಯಾರ್ಥಿನಿಯರು ಸೇರಿದಂತೆ ಇನ್ನಿತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group