ಗುರ್ಲಾಪೂರದಲ್ಲಿ ಕಳ್ಳರ ಹಾವಳಿ

Must Read

ಗುರ್ಲಾಪೂರ –  ಮೂಡಲಗಿ ಪುರಸಭೆ ವ್ಯಾಪ್ತಿಯಲ್ಲಿರುವ ಗುರ್ಲಾಪೂರದಲ್ಲಿ ಒಂದೇ ದಿನ ಸುಮಾರು (೭) ಎಳು ಮನೆಗಳನ್ನು ಕಳ್ಳರು ಕನ್ನ ಹಾಕಿ ಮನೆಗಳ ಕೀಲಿ ಮುರಿದು ಕಳ್ಳತನ ಮಾಡಿರುವದರಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಗ್ರಾಮದ ಯುವ  ಧುರೀಣ ಅಶೋಕ ಗಾಣಿಗೇರ ಈ ಕುರಿತು ಮೂಡಲಗಿ ಪೂಲೀಸ ಠಾಣೆಗೆ ದೂರು ನೀಡಿದ ನಂತರ ಗ್ರಾಮಕ್ಕೆ ಕ್ರೈಮ್ ವಿಭಾಗದ ಅಧಿಕಾರಿಗಳು ಆಗಮಸಿದಾಗ ಕಳ್ಳತನವಾದ ಮನೆಗಳ ಮಾಲೀಕರಾದ ಶ್ರೀಮತಿ ಮಹಾದೇವಿ ಕೌಜಲಗಿ, ಬಸವರಾಜ ಯರಝರವಿ (ಬಳೆಗಾರ), ಮಹಾಲಿಂಗಯ್ಯಾ ಜಡಿ, ಬದ್ರಿನಾಥ ಕಂಬಾರ, ಶಿವಲಿಂಗಪ್ಪ ಮುಗಳಖೋಡ, ಪ್ರಸನ್ನ ಹಿರೇಮಠ ಇವರನ್ನು ಭೆಟ್ಟಿ ಮಾಡಿ ಕಳುವಾದ ವಸ್ತುಗಳ ಬಗ್ಗೆ ಮಾಹಿತಿ ಪಡೆದು ಮುಂದಿನ ತನಿಖೆ ಮಾಡಲಾಗುವದು ಎಂದು ಹೇಳಿದರು.

ಹಾಗೆಯೇ ಗ್ರಾಮಕ್ಕೆ ಅಪರಿಚಿತರು ಆಗಮಸಿದರೆ ಅವರ ಮಾಹಿತಿಯನ್ನು ನಮ್ಮ ಇಲಾಖೆಗೆ ತಿಳಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಡಾ. ಪಿ ಎಮ್ ಹಿರೇಮಠ, ಅಶೋಕ ಗಾಣಿಗೇರ, ಈರಯ್ಯಾ ಜ,ಡಿ ಬಸವರಾಜ ಬಳೆಗಾರ, ಮಹಾತೆಂಶ ಜಕಾತಿ, ಜಯಪ್ರಕಾಶ ಗಾಣಿಗೇರ, ರಮೇಶ ನೇಮಗೌಡರ, ಶಂಕರ ಮುಗಳಖೊಡ, ಶಿವಾನಂದ ಮರಾಠೆ ಹಾಗೂ ಮಹಿಳೆಯರು ಹಾಜರಿದ್ದರು.

ಗ್ರಾಮದಲ್ಲಿ ರಾತ್ರಿ ವೇಳೆ ಪೋಲಿಸರು ಗಸ್ತು ಹಾಕುವದರಿಂದ ಕಳ್ಳ ಕಾಕರ ಹಾವಳಿ ಆಗುವುದನ್ನು ತಡೆಯಬಹುದು ಎಂದು ಗ್ರಾಮಸ್ಥರು ಪೊಲೀಸ್ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು.

Latest News

ಲೇಖನ : ಹಟ್ಟಿ ಹಬ್ಬ

ದೀಪಾವಳಿಯು ಭಾರತೀಯರ ಪ್ರಮುಖ ಹಬ್ಬಗಳಲ್ಲಿ ಒಂದು. ದೀಪಾವಳಿ ಎಂದರೆ ದೀಪಗಳ ಹಬ್ಬ, ಮನೆ ಮನೆಗಳ ಮುಂಭಾಗದಲ್ಲೆಲ್ಲ ದೀಪಗಳ ಸಾಲು ಹಾಗೂ ಆಕಾಶಬುಟ್ಟಿ ಹಚ್ಚುವ ಮೂಲಕ ಜನರು...

More Articles Like This

error: Content is protected !!
Join WhatsApp Group