Homeಸುದ್ದಿಗಳುಶಿವಭಕ್ತರಾಗಿ ಭಕ್ತಿ ಪಕ್ಷ ಕಟ್ಟಿ-- ಶರಣಬಸವ ಶಾಸ್ತ್ರಿಗಳು

ಶಿವಭಕ್ತರಾಗಿ ಭಕ್ತಿ ಪಕ್ಷ ಕಟ್ಟಿ– ಶರಣಬಸವ ಶಾಸ್ತ್ರಿಗಳು

ಬಾಗಲಕೋಟೆ – ದುಃಖಮಯವಾಗಿರುವ ಸಂಸಾರದಲ್ಲಿ ವ್ಯರ್ಥವಾಗಿ ಬದುಕನ್ನ ಹಾಳು ಮಾಡಿಕೊಳ್ಳದೆ. ಸಜ್ಜನರ ಸಂಗ ಮಾಡಿ ಶಿವಭಕ್ತರಾಗಿ ಭಕ್ತಿ ಪಕ್ಷ ಕಟ್ಟಿ ಎಂದು ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪೂಜ್ಯರಾದ ಶರಣಬಸವ ಶಾಸ್ತ್ರಿಗಳು ಹೇಳಿದರು.

ಅವರು ಮುಧೋಳ ತಾಲೂಕಿನ ಸುಕ್ಷೇತ್ರ ಕುಳಲಿ ಗ್ರಾಮದಲ್ಲಿ ದೇವಿ ಅಚ೯ಕರಾದ ಸದಾಶಿವ ಅಜ್ಜನವರ ಸಾನ್ನಿಧ್ಯದಲ್ಲಿ ಶ್ರೀ ಸಿದ್ಧಲಿಂಗ ಯತಿವಯ೯ರ ಹಾಗೂ ಅಂಬಾ ಮಠದಲ್ಲಿ ನಡೆದ ಜಪಯಜ್ಞ ಕಾರ್ಯಕ್ರಮದ ನಿಮಿತ್ತ ನಡೆದ ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಾ ಸದ್ಗುರು ದೇವನ ಕೃಪೆಗೆ ಪಾತ್ರರಾಗಿ ಭವವನ್ನು ಕಳೆದುಕೊಂಡು ಜನ್ಮದ ಸಾಫಲ್ಯ ಹೊಂದುವುದು ಮಾನವ ಜನ್ಮದ ಕತ೯ವ್ಯವಾಗಿದೆ ಎಂದರು.

ಬಸವರಾಜ ಸ್ವಾಮೀಜಿ ರಬಕವಿ, ಮಧುರಖಂಡಿ ಬಸಯ್ಯ ಮಹಾಸ್ವಾಮಿಗಳು, ನಿಂಗಾಪೂರದ ಬಸವರಾಜ ಸ್ವಾಮಿಗಳು, ಕುಳಲಿಯ ಈರಯ್ಯ ಶ್ರೀಗಳು, ಕಾಡಪ್ಪ ಶರಣರು, ಈರಪ್ಪ ತಳಪಟ್ಟಿ ಶರಣರು, ಬಳ್ಳೂರಿನ ಕ್ಷೀರಮ್ಮತಾಯಿಯವರು ಉಪಸ್ಥಿತರಿದ್ದರು.

ಚಂಪಮ್ಮ ತಾಯಿಯವರ ಹಾಗೂ ನಂಜುಂಡೇಶ್ವರ ಶಿವಾಚಾರ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಜರುಗಿತು. ಮಹಾದೇವ ಮೀಸಿ ಅವರು ಸಂಚಾಲಕರಾಗಿ ಕಾಯ೯ನಿವ೯ಹಿಸಿದರು.

ಸಣ್ಣಪ್ಪ ಮೀಸಿ, ಮಹಾದೇವ ಮುತ್ತಪ್ಪ ಮೀಸಿ, ಕಾಡಪ್ಪ ಮೀಸಿ ಅವರು ನೇತೃತ್ವ ವಹಿಸಿದ್ದರು. ಭೀಮಾವಧೂತ ಭಜನಾ ಮಂಡಳಿಯ ಮುತ್ತಣ್ಣ ಬನಾಜಗೋಳ ತಂಡದಿಂದ ಭಜನಾ ಸೇವೆ ಜರುಗಿತು

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group