ಸಿಂದಗಿ; ವಿವಿಧತೆಯಲ್ಲಿ ಏಕತೆ ಹೊಂದಿದ ಈ ಭಾರತ ದೇಶದಲ್ಲಿರುವ ಸಂಸ್ಕೃತಿ ಬೇರಾವ ದೇಶದಲ್ಲಿ ಸಿಗದು. ಧರ್ಮವನ್ನು ನಾವು ರಕ್ಷಣೆ ಮಾಡಿದರೆ ಅದು ನಮನ್ನು ರಕ್ಷಣೆ ಮಾಡುತ್ತದೆ ಸನಾತನ ಧರ್ಮದಲ್ಲಿ ನಮ್ಮ ಪೂರ್ವಜರು ಮಾಡಿದ ಸಹಕಾರಗಳು ನಮಗೆ ದಾರಿ ದೀಪವಾಗಿ ನಮ್ಮ ಧರ್ಮದ ನಡೆ ನುಡಿ ಮುಂದಿನ ಪೀಳಿಗೆಗೆ ವರ್ಗಾಯಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಆರ್‌ಎಸ್‌ಎಸ್‌ನ ಕೇಂದ್ರೀಯ ಸಹ ಕಾರ್ಯದರ್ಶಿ ದೇವಜಿಬಾಯಿ ರಾವತ್ ಹೇಳಿದರು.
ಪಟ್ಟಣದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ವಿಶ್ವ ಹಿಂದೂ ಪರಿಷದ್ ವತಿಯಿಂದ ಸಾಮಾಜಿಕ ಸಾಮರಸ್ಯ ಸಕಲ ಸಮಾಜದ ಪ್ರಮುಖರ ಚಿಂತನ ಸಭೆಯಲ್ಲಿ ಮಾತನಾಡಿ, ಇಂದಿನ ಯುವ ಜನಾಂಗ ಧಾರ್ಮಿಕ ಕಾರ್ಯಕ್ರಮಗಳು ಮರೆತಿದ್ದಾರೆ. ಸಂಸ್ಕಾರ ಎಲ್ಲಿ ದೊರೆಯುತ್ತದೆ ಎಂದರೆ ನಮ್ಮ ಸನಾತನ ಧರ್ಮದಲ್ಲಿ ಸಿಗುತ್ತದೆ. ಸನಾತನ ಧರ್ಮ ಎಂದರೆ ಶಾಶ್ವತ ಧರ್ಮ ಅಥವಾ ಶಾಶ್ವತ ನಿಯಮ. ಇದು ಯಾವುದೇ ನಿರ್ಧಿಷ್ಟ ಪ್ರವಾದಿ ಅಥವಾ ಸಂಸ್ಥಾಪಕರು ಇಲ್ಲದ ಕಾಲಾತೀತ ಸತ್ಯ ಮತ್ತು ಜೀವನ ವಿಧಾನವನ್ನು ಸೂಚಿಸುತ್ತದೆ. ಇದನ್ನು ಹಿಂದೂ ಧರ್ಮದ ಒಂದು ಬಾಗವೆಂದು ಪರಿಗಣಿಸಲಾಗುತ್ತದೆ. ಇದು ಧಾರ್ಮಿಕ ಸಿದ್ಧಾಂತ ಕರ್ಮ ಮತ್ತು ಅಂತಿಮ ವಿಮೋಚನೆ(ಮೋಕ್ಷ) ಅನ್ವೇಷಣೆಯ ಆದಾರದ ಮೇಲೆ ಎಲ್ಲ ಜೀವಿಗಳಲ್ಲಿ ನೆಲೆಸಿರುವ ಸಾರ್ವತ್ರಿಕ ತತ್ವಗಳನನು ಒಳಗೊಂಡಿದೆ ಇದು ಬ್ರಹ್ಮಾಂಡದ ಸೃಷ್ಠಿಯೊಂದಿಗೆ ಹುಟ್ಟಿಕೊಂಡಿದೆ ಮತ್ತು ಯಾವುದೇ ಮಾನವನಿಂದ ಸ್ಥಾಪಿತವಾಗಿಲ್ಲ. ವೇದಗಳು ಇದರ ಮೂಲ ಗ್ರಂಥಗಳಾಗಿವೆ ಮತ್ತು ಅವು ಶಾಶ್ವತ ಹಾಗೂ ಯಾರಿಂದಲೂ ರಚಿಸಲ್ಪಟ್ಟಿಲ್ಲ ಎಂದು ತಿಳಿಸಿದ ಅವರು, ಎಲ್ಲ ಜೀವಿಗಳಲ್ಲಿ ಒಂದೇ ಪರಮ ಸತ್ಯವಿದೆ ಎಂದು ಸಾರುತ್ತದೆ ಮತ್ತು ನಿರ್ಧಿಷ್ಟ ನಂಬಿಕೆಗಳನ್ನು ಮಾತ್ರ ಅನುಸರಿಸಲು ಬಲವಂತ ಮಾಡುವುದಿಲ್ಲ ಎನ್ನುವುದು ಸಾರ್ವತ್ರಿಕ ಸತ್ಯ. ಸನಾತನ ಧರ್ಮವು ಪ್ರಾಮಾಣಿಕತೆ, ಅಹಿಂಸೆ, ಶುದ್ಧತೆ, ಕರುಣೆ, ಸಹನೆ, ಸ್ವಯಂ ಸಂಯಮ ಮತ್ತು ಸದ್ಭಾವನೆ ಯಂತಹ ಗುಣಗಳನ್ನು ಪ್ರೋತ್ಸಾಹಿಸುತ್ತದೆ. ಇದು ಕೆವಲ ಧರ್ಮವಲ್ಲ ಬದಲಿಗೆ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ತತ್ವಗಳನ್ನು ಅನ್ವಯಿಸುವ ಒಂದು ವಿಧಾನವಾಗಿದೆ. ಇದು ವಿಚಾರಣೆ ಮತ್ತು ಚಿಂತನೆಯ ಮೂಲಕ ಹೆಚ್ಚಿನ ಜ್ಞಾನವನ್ನು ಪಡೆಯಲು ಪ್ರೋತ್ಸಾಹಿಸುತ್ತದೆ. ವಿನಃ ಧಾರ್ಮಿಕ ಮತಾಂಧತೆಯನ್ನು ಪ್ರೋತ್ಸಾಹಿಸುದಿಲ್ಲ ಅದನ್ನು ಕೆಲವರು ತಪ್ಪಾಗಿ ಗೃಹಿಸಿ ಗಲಭೆಗಳಿಗೆ ಕಾರಣರಾಗುತ್ತಾರೆ ಇಂತವರ ಮಾತುಗಳಿಗೆ ಯಾರು ಕಿವಿಕೊಡದೇ ನಮ್ಮ ಹಿಂದೂ ಧರ್ಮದ ತತ್ವ ಸಿದ್ದಾಂತಗಳ ಕಡೆ ಗಮನ ಹರಿಸಿ ಅವುಗಳನ್ನು ಅನುಸರಿಸಬೇಕು ಎಂದರು.
ಪತ್ರಕರ್ತ ಪಂಡಿತ ಯಂಪೂರೆ ಮಾತನಾಡಿ, ಸನಾತನ ಧರ್ಮವು ಹಿಂದೂ ಧರ್ಮದ ಶಾಶ್ವತ ತತ್ವಗಳು ಮತ್ತು ಬೋಧೆಗಳಿಗೆ ಸಮಾನಾರ್ಥಕವಾಗಿದೆ ಇದರ ಅನುಯಾಯಿಗಳನ್ನು ಸನಾತನಿಗಳು ಎಂದು ಕರೆಯುತ್ತಾರೆ ಮತ್ತು ಇದು ಹಿಂದೂ ಧರ್ಮದ ವಿಶಾಲವಾದ ಆಧಾರವಾಗಿ ಕೆಲಸ ಮಾಡುತ್ತದೆ. ಸನಾತನ ಧರ್ಮದಲ್ಲಿ ಪುನರ್ಜನ್ಮವಿದೆ ಎನ್ನುವಂತೆ ಸಾವಿನ ನಂತರ ಆತ್ಮವು ಹೊಸ ದೇಹದಲ್ಲಿ ಜನ್ಮ ಪಡೆಯುವ ಮೂಲಕ ಮತ್ತೊಂದು ದೇಹವನ್ನು ಸೇರುತ್ತದೆ. ವೇದಗಳು ಸನಾತನ ಧರ್ಮದ ಅತ್ಯಂತ ಹಳೆಯ ಗ್ರಂಥವಾಗಿದೆ. ಸನಾತನ ಧರ್ಮವೆಂದು ಕರೆಯಲಾಗುವ ಹಿಂದೂ ಧರ್ಮವು ಪವಿತ್ರ ಹಾಗೂ ಪುರಾತನ ಧರ್ಮವಾಗಿದೆ ಈ ಧರ್ಮದಲ್ಲಿ ಓರ್ವ ವ್ಯಕ್ತಿಯ ಜನನದಿಂದ ಮರಣದವರೆಗೆ ಯಾವೆಲ್ಲಾ ನಿಯಮಗಳನ್ನು ಅನುಸರಿಸಬೇಕು ಎಂಬುದನ್ನು ತಿಳಿಸಿಕೊಡುತ್ತದೆ ಎಂದು ವಿವರಿಸಿದರು.
ಆರ್‌ಎಸ್‌ಎಸ್ ಕರ್ನಾಟಕ ಉತ್ತರ ಪ್ರಾಂತ ಸಾಮರಸ್ಯ ಪ್ರಮುಖ ಶ್ರೀಮಂತ ದುದ್ದಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುತ್ತು ಶಾಬಾದಿ ಸ್ವಾಗತಿಸಿ ಪರಿಚಯಿಸಿದರು. ಸಾಯಬಣ್ಣ ದೇವರಮನಿ ನಿರೂಪಿಸಿದರು. ಬಸವರಾಜ ಬಿರಾದಾರ ಶಾಂತಿ ಮಂತ್ರ ದೊಂದಿಗೆ ವಂದಿಸಿದರು.