ದಿ. ರಾಮಕೃಷ್ಣ ಹೆಗಡೆ ಜನ್ಮ ದಿನ ಆಚರಣೆ

Must Read

ಅಭಿಮಾನ ಸಾಂಸ್ಕೃತಿಕ ವೇದಿಕೆ ಶಿರಸಿ ಉಕ ಜಿಲ್ಲೆ ಇವರು ಇಂದು ದಿನಾಂಕ.29.08.2025 ರಂದು ಯೋಗ ಮಂದಿರ ಶಿರಸಿಯಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆಯವರ ಜನ್ಮ ದಿನ ಕಾರ್ಯಕ್ರಮವನ್ನು ಏರ್ಪಡಿಸಿದ್ದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಎಸ್. ಹೊಸಮನಿ ನಿವೃತ್ತ ಪ್ರಾಚಾರ್ಯರು ಶ್ರೀ ಮಾರಿಕಾಂಬಾ ಪದವಿಪೂರ್ವ ಕಾಲೇಜು ಶಿರಸಿ ಹಾಗೂ ವಿಶೇಷ ಆಹ್ವಾನಿತರಾಗಿ  ಪ್ರಮೋದ ಹೆಗಡೆ ಅಧ್ಯಕ್ಷರು ಸಂಕಲ್ಪ ಯಲ್ಲಾಪುರ ಹಾಗೂ ಜಿಲ್ಲಾ ಪಂಚಾಯತ ಕಾರವಾರ ಮಾಜಿ ಉಪಾಧ್ಯಕ್ಷರು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಡಾ. ಆರ್.ಎನ್.ಹೆಗಡೆ
ಬಂಡೀಮನೆ ನಿವೃತ್ತ ಜನರಲ್ ಮೆನೇಜರ್ ನಬಾರ್ಡ ಮತ್ತು  ಆರ್.ವಿ. ಭಾಗ್ವತ ಶಿರಸಿಮಕ್ಕಿ ನಿವೃತ್ತ ಉಪನ್ಯಾಸಕರು ಯಡಳ್ಳಿಯವರು ವಹಿಸಿದ್ದರು. ಈ ವೇದಿಕೆಯ ಉಸ್ತುವಾರಿಯನ್ನು  ವಿ.ಎನ್. ಬಾಗೋತ ಬರಬಳ್ಳಿ ಯವರು ವಹಿಸಿದ್ದರು. ಇವರ ಮುಂದಾಳತ್ವದಲ್ಲಿ  ಭ್ರಷ್ಟಾಚಾರಕ್ಕೆ ಕೊನೆಯಿಲ್ಲವೇ? ಎಂಬ ಲೇಖನ ಸ್ಪರ್ಧೆಯನ್ನು ಪೂರ್ವಯೋಜಿತವಾಗಿ ಈ ವೇದಿಕೆ ನಡೆಸಿತ್ತು. ಈ ಲೇಖನ ಸ್ಪರ್ಧೆಯಲ್ಲಿ ಶ್ರೀಮತಿ ರಾಜೇಶ್ವರಿ ಹೆಗಡೆಯವರ ಲೇಖನ ಪಂಚಮಸ್ಥಾನ ಬಂದ ಪ್ರಯುಕ್ತ ಅವರಿಗೆ ವೇದಿಕೆಯ ಮೇಲೆ ಉಪಸ್ಥಿತರಿದ್ದ ಗಣ್ಯರುಗಳ ಸಮ್ಮುಖದಲ್ಲಿ ಬಹುಮಾನ ನೀಡಿ ಗೌರವಿಸಿದರು.

ಪ್ರಶಸ್ತಿಪತ್ರ, ಬಹುಮಾನ ರೂಪವಾಗಿ ನಗದು ಹಣ.
ಶ್ರೀರಾಮಚರಿತಾಮೃತಂ ಕೃತಿ. ಜೀವನ ಪ್ರೀತಿ ಕೃತಿ.
ಸಮಾಜಮುಖಿ ಕೃತಿ. ಇವುಗಳನ್ನು ನೀಡಿ ಗೌರವಿಸಿದರು.

Latest News

ಕವನ : ಬೆಳಕಿನ ದೀಪಾವಳಿ

ಬೆಳಕಿನ ದೀಪಾವಳಿ ಬೆಳಕು ಸರಿದು ನೇಸರನ ಅಸ್ತದೊಡನೆ ಜಗಕೆ ಜಗಮಗಿಸುವ ದೀಪಗಳ ದರ್ಶನ ಬಾನಂಚಿನಲಿ ಶಬ್ದಗಳ ನಡುವೆ ಬೆಳಕಿನ ಚಿತ್ತಾರ ಮೂಡಿಸುವ ಹಬ್ಬ ಬೆಳಕಿನ ದೀಪಾವಳಿತಮವ ಕಳೆದು ಜ್ಯೋತಿ ಬೆಳಗುವ ನಾಡಿನಪವಿತ್ರ ಹಬ್ಬ ತಳಿರು ತೋರಣ ಕಟ್ಟಿ ಮನೆಯನು ಸಿಂಗರಿಸಿ ಹಬ್ಬದಡುಗೆಯ ಸವಿಯುಣ್ಣುವ ಮನದ ಖುಷಿಯ...

More Articles Like This

error: Content is protected !!
Join WhatsApp Group