ಸಿಂದಗಿ; ಬಡವರಿಗೆ ಸರಕಾರ ಯೋಜನೆಗಳನ್ನು ಮನೆ ಮನೆಗೆ ತಲುಪಿಸಲು ಕ್ರಮ ತೆಗೆದುಕೊಳ್ಳುತ್ತದೆ. ಕಾರಣ ಗ್ರಾಮಸ್ಥರು ಸರಕಾರ ಸೌಲಭ್ಯಗಳನ್ನು ಅಗತ್ಯ ದಾಖಲೆಗಳನ್ನು ನೀಡಿ ನೊಂದಣಿಗೆ ಸಹಕಾರ ನೀಡಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ಇಂಡಿ ಉಪವಿಭಾಗಾಧಿಕಾರಿ ಅನುರಾಧಾ ವಸ್ತ್ರದ ಕರೆ ನೀಡಿದರು.
ತಾಲೂಕಿನ ಚಾಂದಕವಟೆ ಗ್ರಾಮದಲ್ಲಿ ಸರ್ಕಾರದ ವತಿಯಿಂದ ಗ್ರಾಮದ ಬಸವೇಶ್ವರ ದೇವಸ್ತಾನದಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇದೆ ಸಂದರ್ಭದಲ್ಲಿ ಸಿಂದಗಿ ಉಪ ತಹಶಿಲ್ದಾರರಾದ ಶ್ರೀಮತಿ ಇಂದಿರಾಬಾಯಿ ಬಳಗಾನೂರ, ಕಂದಾಯ ನಿರೀಕ್ಷಕ ಐ.ಎಂ. ಮಕಾಂದರ್, ಗ್ರಾಮ ಲೆಕ್ಕಾಧಿಕಾರಿ ಪಿ.ಕೆ.ಹುಡೆದ್ ಗ್ರಾಮದ . ಪರಮಾನಂದ ಕಂಟಿಗೊಂಡ . ಸದಾನಂದ ಹಿರೇಮಠ, ದೀನೆಶ ಸಿಂದಗಿ, ಸಿದ್ದನಗೌಡ ಪಾಟಿಲ್, ಸುಭಾಸ್ ಶಿರಕನಳ್ಳಿ, ಮಡ್ಡಪ್ಪ ಸೊನ್ನದ್, ಚಾಂದಸಾಬ್ ಮುಲ್ಲಾ, ಶೇಖರ ಕಲ್ಲೂರ. ಪತ್ರಕರ್ತರಾದ ನಿಂಗರಾಜ ಅತನೂರ.
ಇದೆ ಸಂದರ್ಭದಲ್ಲಿ ಗ್ರಾಮದ ಸ್ಮಶಾನದ ಜಾಗ ೯ ಎಕರೆ ೯ ಗುಂಟೆ ಗ್ರಾಮದ ಪ್ರಭಾವಿಗಳು ಕಬಳಿಸಿದ್ದು ಈ ಜಾಗ ಖಾಲಿ ಮಾಡಿಸಿ ಶವ ಸಂಸ್ಕಾರಕ್ಕೆ ಅನುಕೂಲ ಮಾಡಿ ಕೊಡಬೇಕು ಇಲ್ಲದಿದ್ದರೆ ಮುಂದಿನ ದಿನದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಇಂಡಿ ಉಪ ವಿಭಾಗಾಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿಕೊಂಡರು.

