ಹಳ್ಳೂರ- ಭಗವಂತನ ನಾಮಸ್ಮರಣೆ ಮಾಡುತ್ತಾ ದಾನ ಧರ್ಮ,ದಾಸೋಹ ಮಾಡುತ್ತಾ ಜೀವನ ಸಾಗಿಸಿದರೆ ಕಷ್ಟ ಕಾರ್ಪಣ್ಯಗಳು ಬಯಲಾಗಿ ಜೀವನವು ಸುಖಮಯವಾಗುವುದೆಂದು ಸತ್ಯಪ್ಪ ಕದ್ಧಿ ಹೇಳಿದರು
ಅವರು ಗ್ರಾಮದ ಶ್ರೀ ಮಾಧವಾನಂದ ಆಶ್ರಮದಲ್ಲಿ ನಡೆದ ಸತ್ಸಂಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಭಗವಂತನ ಮೇಲೆ ಪೂರ್ಣ ನಂಬಿಕೆ ಇಡಬೇಕು ನಮ್ಮ ಕಷ್ಟದಲ್ಲಿ ದೇವರು ಬಾಗಿಯಾಗಿರುತ್ತಾನೆ ನಂಬಿದ ಮನುಷ್ಯರು ಕೈ ಬಿಟ್ಟರೂ ದೇವರು ಎಂದಿಗೂ ಕೈ ಬಿಡೋದಿಲ್ಲ ಬುದ್ಧಿವಂತರು ನಾ ಶ್ರೇಷ್ಠ ಎಂದು ಹೇಳಿದಿಲ್ಲ ಗುರುವಿಗಿಂತ ಯಾರು ಶ್ರೇಷ್ಠರಲ್ಲ .ಹೋದ ಸಮಯ ವಯಸ್ಸು ಮರಳಿ ಬರುವುದಿಲ್ಲ ನಾಯಿಯಲ್ಲಿರುವ ನಿಯತ್ತ ಮನುಷ್ಯರಲಿಲ್ಲ ನಾನೆಂಬ ಅಹಂಕಾರ ಒಳ್ಳೆಯದಲ್ಲ ಇನ್ನೊಬ್ಬರಿಗೆ ನಿಂದಾ ಆಡುವುದು ಮೋಸ ವಂಚನೆ ಮಹಾಪಾಪದಾಯಕವಾದದ್ದು ಸಮಾಜಕ್ಕೇ ಒಳ್ಳೆಯದನ್ನು ಮಾಡೋರನ್ನ ಗುರುತಿಸಿ ಸಹಕಾರ ನೀಡಿ ಸನ್ಮಾನಿಸಿದರೆ ಮತ್ತಷ್ಟು ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಹೇಳಿದರು.
ಬೆಂಗಳೂರ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಜಮಖಂಡಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಪಾಲಕರಾಗಿ ಸೇವೆ ಸಲ್ಲಿಸುತ್ತಿರುವ ಹಳ್ಳೂರ ಗ್ರಾಮದ ಮಲ್ಲಿಕಾರ್ಜುನ ಹುಬ್ಬಳ್ಳಿ ಅವರ ಅಪ್ರತಿಮ ಸೇವೆಯನ್ನು ಪರಿಗಣಿಸಿ ಬೆಂಗಳೂರು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಅತ್ತ್ಯುತ್ತಮ ನಿಲಯ ಪಾಲಕರು ಪ್ರಶಸ್ತಿ ನೀಡಿದ್ದಕ್ಕೆ ಶ್ರೀ ಮಾಧವಾನಂದ್ ಕಮಿಟಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಮಯದಲ್ಲಿ ಬಾಳಯ್ಯ ಹಿರೇಮಠ. ಲಕ್ಷ್ಮಣ ಹೊಸಮನಿ, ದುಂಡಪ್ಪ ಕತ್ತಿ, ಮುರಿಗೆಪ್ಪ ಮಾಲಗಾರ, ಅಶೋಕ ಹೆಗ್ಗಾಣಿ, ಸಂಗಪ್ಪ ದುರದುಂಡಿ, ಬಸವರಾಜ ಅರಳಿಮಟ್ಟಿ, ಅಣ್ಣಪ್ಪ ಬಾಗೋಡಿ ಕೆಂಪಣ್ಣ ರುದ್ರಾಪೂರ ಸೇರಿದಂತೆ ಅನೇಕರಿದ್ದರು.