ಸಿಂದಗಿ; ಇದೇ ೦೮ ರಂದು ನಡೆದ ಸಿಂದಗಿ, ಆಲಮೇಲ ಹಾಗೂ ದೇವರ ಹಿಪ್ಪರಗಿ ಪದವಿ ಪೂರ್ವ ಕಾಲೇಜುಗಳ ತಾಲ್ಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ಪಟ್ಟಣದ ಪಿ.ಇ.ಎಸ್. ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದಿದ್ದಾರೆ.
ಬಾಲಕರ ೧೦೦ ಮೀಟರ್ ಓಟದಲ್ಲಿ ಕುಮಾರ ಪರಮಾನಂದ ಬಿಸನಾಳ ಪ್ರಥಮ, ಕುಮಾರ ಯಾಸೀನ ಚಪ್ಪರಬಂದ. ಉದ್ದ ಜಿಗಿತದಲ್ಲಿ ಪ್ರಥಮ ಕುಮಾರ ಸುನೀಲ ಪೂಜಾರಿ ಭರ್ಚಿ ಎಸೆತ ಹಾಗೂ ೬೦೦೦ ಮೀಟರ್ ಓಟದಲ್ಲಿ ದ್ವಿತೀಯ, ಕುಮಾರಿ ದಾನಮ್ಮ ದೇವಣಗಾಂವ ಕ್ರಾಸ್ ಕಂಟ್ರಿ ದ್ವಿತೀಯ ಹಾಗೂ ೪+೧೦೦ ರಿಲೆಯಲ್ಲಿ ದ್ವಿತೀಯ, ಕುಮಾರ ಯಾಸೀನ ಚಪ್ಪರಬಂದ ತ್ರಿವಿಧ ಜಿಗಿತ ತೃತೀಯ ಹಾಗೂ ಆಕಾಶ ಗಡೆದ ಭರ್ಚಿ ಎಸೆತದಲ್ಲಿ ತೃತೀಯ ಸ್ಥಾನ ಪಡೆದು ಜಿಲ್ಲ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಗೌರವ ಕಾರ್ಯದರ್ಶಿ ಬಿ.ಪಿ. ಕರ್ಜಗಿ, ಆಡಳಿತಾಧಿಕಾರಿ ಆಯ್.ಬಿ. ಬಿರಾದಾರ, ಮಾರ್ಗದರ್ಶಕ ಕೆ.ಎಚ್. ಸೋಮಾಪೂರ, ಹಿರಿಯ ಉಪನ್ಯಾಸಕರಾದ ಎಸ್.ವಾಯ್. ಬೀಳಗಿ, ಪಿ.ಎಂ. ಮಡಿವಾಳರ, ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗದವರು ಶುಭಹಾರೈಸಿದ್ದಾರೆ.

