ಮುಧೋಳ – ಸಕಲ ಜೀವರಾಶಿಗಳಲ್ಲಿ ಮಾನವನೇ ಶ್ರೇಷ್ಠವಾದ ಜೀವಿ. ಪುನರಪಿ ಜನನಂ ಪುನರಪಿ ಮರಣಂ. ಹುಟ್ಟು ಸಾವುಗಳೆಂಬ ಕಾಲ ಚಕ್ರದಲ್ಲಿ ಸಿಲುಕಿದ್ದೇವೆ. ಇವುಗಳ ನಡುವಿನ ಅವಧಿ ಬಹುಪ್ರಮುಖವಾದದ್ದು ಎಂದು ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪ.ಪೂ.ಶರಣಬಸವ ಶಾಸ್ತ್ರಿಗಳು ಹೇಳಿದರು.
ಅವರು ಮುಧೋಳ ತಾಲೂಕಿನ ಸುಕ್ಷೇತ್ರ ಚಿಚಖಂಡಿ ಕೆ.ಡಿ.ಗ್ರಾಮದಲ್ಲಿ ಗಣೇಶ ಚತುರ್ಥಿ ಅಂಗವಾಗಿ 7 ದಿನಗಳ ಕಾಲ ಆಧ್ಯಾತ್ಮಿಕ ಪ್ರವಚನವನ್ನು ನೀಡಿ ಸಮಾರೋಪ ಸಮಾರಂಭದಲ್ಲಿ ಗ್ರಾಮದ ಹಿರಿಯರಿಂದ ಗೌರವವನ್ನು ಸ್ವೀಕರಿಸಿ ಮಾತನಾಡುತ್ತಾ, ನರನಿಗೆ ನಾರಾಯಣನಾಗುವ ಶಕ್ತಿ ಇದೆ .ಇನ್ನುಳಿದ ಯಾವ ಜೀವಿಗಳಿಗೂ ಮೋಕ್ಷ ಸಿಗಲಾರದು .ಒಳಿತು ಮಾಡಿದರೆ ಪುಣ್ಯದ ರಾಶಿ ಕೆಟ್ಟದು ಮಾಡಿದರೆ ಪಾಪದ ಬುತ್ತಿ .ಒಳ್ಳೆಯದನ್ನು ಮಾಡಿ ಜನ್ಮದ ಸಾರ್ಥಕತೆ ಮಾಡಿಕೊಳ್ಳುವುದು ಮನುಷ್ಯ ಜನ್ಮದ ಆದ್ಯ ಕರ್ತವ್ಯ ಎಂದರು.
ಈ ಸಂದರ್ಭದಲ್ಲಿ ದಾನಿಗಳನ್ನು , ಭಜನಾ ಕಲಾವಿದರನ್ನು, ಸೇವಕರನ್ನು. ಗೌರವಿಸಲಾಯಿತು.
ಹಿರಿಯರಾದ ಮಲ್ಲು ಚಂದರಗಿ, ವೀರಣ್ಣ ಘಂಟಿ, ಹಣಮಂತ ಮರೆಗುದ್ದಿ, ಹಣಮಂತ ಪೂಜಾರಿ, ಬಸಪ್ಪ ತೇಲಿ, ಚೇತನ ಘಂಟಿ, ದಿವಾಕರ ಹೊಸಮಠ, ಲಕ್ಷ್ಮಣ ಕಡಕೋಳ, ಕೃಷ್ಣ ಬಡಿಗೇರ ಮುಂತಾದವರು ಉಪಸ್ಥಿತರಿದ್ದರು.
ಬಂದ ಭಕ್ತರಿಗೆ ನಿರಂತರ ಪ್ರಸಾದ ವ್ಯವಸ್ಥೆ ಮಾಡಿದ್ದರು. ಗಿರೀಶ ಸೈಯಪ್ಪಗೋಳ ಸವ೯ರನ್ನು ಸ್ವಾಗತಿಸಿ ವಂದಿಸಿದರು.

