ಮೂಡಲಗಿ: ‘ರೇಬಿಸ್ ಪ್ರಾಣಿಜನ್ಯ ಮಾರಣಾಂತಿಕ ರೋಗವಾಗಿದ್ದು ಸಾಕು ಶ್ವಾನಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಿ ಅಪಾಯದಿಂದ ಮುಕ್ತರಾಗಬೇಕು’ ಎಂದು ಮೂಡಲಗಿ, ಗೋಕಾಕ ತಾಲ್ಲೂಕುಗಳ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಮೂಡಲಗಿ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ. ಮೋಹನ ವಿ. ಕಮತ ಹೇಳಿದರು.
ಲಯನ್ಸ್ ಕ್ಲಬ್ ಮೂಡಲಗಿ ಪರಿವಾರ ಹಾಗೂ ಪಶಾಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಇವರ ಸಹಯೋಗದಲ್ಲಿ ಗುರುವಾರ ಶ್ವಾನಗಳಿಗೆ ರೇಬೀಸ್ ಲಸಿಕೆ ಹಾಕುವ ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ಸಾಕು ಪ್ರಾಣಿಗಳ ಮಾಲೀಕರು ಶ್ವಾನಗಳಿಗೆ ಲಸಿಕೆ ಹಾಕಿಸಿ ಒಂದು ತಿಂಗಳ ನಂತರ ಬೂಸ್ಟರ್ ಡೋಜ್ ಹಾಕಿಸಬೇಕು ಮತ್ತು ಪ್ರತಿ ವರ್ಷ ಲಸಿಕೆ ಹಾಕಿಸಬೇಕು ಎಂದರು.
ಶಾಲಾ ಮಕ್ಕಳಲ್ಲಿಯೂ ನಾಯಿ ಕಡಿತ ಮತ್ತು ರೇಬೀಸ್ ಹರಡುವ ಬಗ್ಗೆ ಜಾಗೃತ ಮೂಡಿಸುತ್ತಿದ್ದು ತಾಲ್ಲೂಕಿನಾದ್ಯಂತ ಶಾಲೆಗಳಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದರು.
ಪಾಲಿಕ್ಲಿನಿಕ್ ಉಪನಿರ್ದೇಶಕ ಡಾ. ಎಂ.ಬಿ. ವಿಭೂತಿ ಮಾತನಾಡಿ ಶ್ವಾನಗಳಿಗೆ ರೇಬೀಸ್ ಲಸಿಕೆ ಹಾಕುವ ವರ್ಷವಿಡಿ ಚಾಲ್ತಿಯಲ್ಲಿರುತ್ತದೆ, ಮೂಡಲಗಿ ಆಸ್ಪತ್ರೆ ಇಲ್ಲವೆ ತಾಲ್ಲೂಕಿನ ಆಯಾ ಗ್ರಾಮಗಳಲ್ಲಿಯ ಪಶು ಚಿಕಿತ್ಸಾ ಕೇಂದ್ರಗಳಲ್ಲಿ ಹಾಕಿಸಬಹುದಾಗಿದೆ ಎಂದರು.
ವಿವಿಧ ತಳಿಯ ಶ್ವಾನಗಳಿಗೆ ರೇಬೀಸ್ ಲಸಿಕೆಯನ್ನು ಹಾಕಿ ಅಭಿಯಾನಕ್ಕೆ ಚಾಲನೆ ನೀಡಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ವಿಶಾಲ ಶೀಲವಂತ, ಕಾರ್ಯದರ್ಶಿ ಗಿರೀಶ ಆಸಂಗಿ, ಖಜಾಂಚಿ ಡಾ. ಪ್ರಶಾಂತ ಬಾಬಣ್ಣವರ, ವೆಂಕಟೇಶ ಸೋನವಾಲಕರ, ಈರಣ್ಣ ಕೊಣ್ಣೂರ, ಬಾಲಶೇಖರ ಬಂದಿ, ಸಂಜಯ ಮೋಕಾಶಿ, ಪ್ರಮೋದ ಪಾಟೀಲ, ಸಂಗಮೇಶ ಕೌಜಲಗಿ, ಡಾ. ಮಹಾದೇವ ಕೌಜಲಗಿ, ಡಾ. ಪಿ.ಕೆ. ಕೋಸ್ಟಿ, ಡಾ. ಸೀಮಾ ತುಂಗಳ, ಡಾ. ಎಸ್.ಎಂ. ಕುಲಗೋಡ, ಸುರೇಶ ಆದಪ್ಪಗೋಳ, ಮಹಾಂತೇಶ ಹೊಸೂರ, ಶಂಕರ ಶಾಬಣ್ಣವರ, ಸರಸ್ವತಿ ಮುನ್ಯಾಳ, ಸತೀಶ ಉಮಾರಾಣಿ, ಎಲ್.ಎಸ್. ಶಾಬಣ್ಣವರ, ಯಮನಪ್ಪ ಭರಮನಿ, ನಿರ್ಮಲಾ, ಲಕ್ಷ್ಮಿ ಪೂಜಾ ಮತ್ತಿತರರು ಇದ್ದರು.

