ಹಳ್ಳೂರ ರೇಬಿಸ್ ಲಸಿಕೆ ಹಾಕುವುದರಿಂದ ರೋಗವನ್ನು ನಿಯಂತ್ರಿಸಲು ಸಾಧ್ಯ ಎಂಬುದನ್ನು ವಿದ್ಯಾರ್ಥಿಗಳಿಗೆ ಪಾಠದ ಮೂಲಕ ಅರಿವು ಮೂಡಿಸಿ ರೋಗ ರುಜಿನಗಳು ಬಾರದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪಶು ವೈದ್ಯಾಧಿಕಾರಿ ವಿಶ್ವನಾಥ ಹುಕ್ಕೇರಿ ಹೇಳಿದರು.
ಅವರು ಗ್ರಾಮದ ಶಿವಶಂಕರ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರೇಬಿಸ್ ಜಾಗೃತಿ ಶಿಬಿರದ ಕಾರ್ಯಕ್ರಮದಲ್ಲಿ ಮಾತನಾಡಿ ಪ್ರತಿಯೊಂದು ನಾಯಿಗಳಿಗೆ ರೇಬಿಸ್ ಲಸಿಕೆ ಹಾಕುವುದು ಒಳ್ಳೆಯದು. ಹುಚ್ಚು ನಾಯಿ ಕಂಡುಬಂದರೆ ಜಾಗೃತ ವಹಿಸಿ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಬೇಕು. ರೋಗದ ಬಗ್ಗೆ ರೋಗ ಹರಡುವ ವಿಧಾನ,ಲಕ್ಷಣಗಳು, ತಡೆಗಟ್ಟುವ ಮಾರ್ಗಗಳು ಲಸಿಕೆ ಮಹತ್ವವನ್ನು ಸಂಪೂರ್ಣ ಮಾಹಿತಿ ನೀಡಿದರು.
ಈ ಸಮಯದಲ್ಲಿ ಪ್ರಧಾನ ಗುರುಗಳಾದ ಆರ್ ಕೆ ಮೇಲಗಡೆ, ಮುರಿಗೆಪ್ಪ ಮಾಲಗಾರ, ಬಿ ಜೆ ಪಾರ್ಥನಳ್ಳಿ, ಶೋಭಾ ಮುತಾರಿ, ಆರ್ ಪಿ ಹರಿಜನ ಸೇರಿದಂತೆ ವಿದ್ಯಾರ್ಥಿಗಳಿದ್ದರು.

