ಬೆಂಗಳೂರು – ರಾಜ್ಯ ಸರ್ಕಾರದ ಅತ್ಯುನ್ನತ ನಾಗರಿಕ ಪ್ರಶಸ್ತಿ ʼಕರ್ನಾಟಕ ರತ್ನʼ ಪ್ರಶಸ್ತಿಯನ್ನು ಸ್ಯಾಂಡಲ್‌ವುಡ್‌ನ ಮೇರು ಕಲಾವಿದರಾದ ಡಾ. ವಿಷ್ಣುವರ್ಧನ್ ಮತ್ತು ಬಿ. ಸರೋಜಾ ದೇವಿ ಅವರಿಗೆ ರಾಜ್ಯ ಸರ್ಕಾರ ಮರಣೋತ್ತರವಾಗಿ ಘೋಷಿಸಿದೆ.
ಈ ಧೀಮಂತ ಕಲಾವಿದರಿಗೆ ಪ್ರಶಸ್ತಿ ಘೋಷಿಸಲಾಗಿದ್ದು, ಅಭಿಮಾನಿಗಳ ಬಹು ದಿನಗಳ ಕನಸು ಈಡೇರಿದಂತಾಗಿದೆ.
ಗುರುವಾರ (ಸೆಪ್ಟೆಂಬರ್ 11) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.
ಈ ಧೀಮಂತ ಕಲಾವಿದರಿಗೆ ಮರಣೋತ್ತರವಾಗಿ ಪ್ರಶಸ್ತಿ ಘೋಷಿಸಲಾಗಿದ್ದು, ಅಭಿಮಾನಿಗಳ ಬಹು ದಿನಗಳ ಕನಸು ಈಡೇರಿದಂತಾಗಿದೆ. ಕರ್ನಾಟಕದಾದ್ಯಂತ ಖುಷಿ ಮನೆ ಮಾಡಿದೆ
ಕರ್ನಾಟಕ ಸರ್ಕಾರ ನೀಡುವ ಅತೀ ದೊಡ್ಡ ನಾಗರಿಕ ಪ್ರಶಸ್ತಿ ಇದಾಗಿದ್ದು, ವಿವಿಧ ರಂಗಗಳಲ್ಲಿ ಗಣನೀಯ ಕೊಡುಗೆ ಸಲ್ಲಿಸಿದ ಸಾಧಕರಿಗೆ ಇದನ್ನು ವಿತರಿಸಲಾಗುತ್ತದೆ. 1992ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಈ ಪ್ರಶಸ್ತಿ ಆರಂಭಿಸಿದರು. 50 ಗ್ರಾಂ ತೂಕದ ಚಿನ್ನದ ಪದಕ, ಸ್ಮರಣಿಕೆ ಮತ್ತು ಶಾಲನ್ನು ಈ ಪ್ರಶಸ್ತಿ ಒಳಗೊಂಡಿದೆ. ಇದುವರೆಗೆ 12 ಸಾಧಕರಿಗೆ ಈ ಪ್ರಶಸ್ತಿ ಸಂದಿದೆ
ಶ್ರೀಮತಿ ಪಾರ್ವತಿ ದೇವಿ ಎಂ ತುಪ್ಪದ ಬೆಳಗಾವಿ

