ಕರ್ನಾಟಕ ರತ್ನ ಪ್ರಶಸ್ತಿ ; ಕರ್ನಾಟಕ ಸರಕಾರಕ್ಕೆ ಕಲಾವಿದರಿಂದ “ಸಲಾಂ” 

Must Read

ಮುಧೋಳ- ಕರ್ನಾಟಕದ ಹಿರಿಯ ನಟ. ಸಾಹಸಸಿಂಹ ವಿಷ್ಣುವರ್ಧನ್ ಅವರಿಗೆ ಹಾಗೂ ಚತುರ್ಭಾಷಾ ನಟಿ ಬಿ. ಸರೋಜಾ ದೇವಿ ಅವರಿಗೆ ಮರಣೋತ್ತರವಾಗಿ ರಾಜ್ಯದ ಅತ್ಯುನ್ನತ ನಾಗರಿಕ ಗೌರವ ವಾದ ಕರ್ನಾಟಕ ರತ್ನ ಪ್ರಶಸ್ತಿಯನ್ನು ಕನಾ೯ಟಕ ಸರ್ಕಾರ ಘೋಷಿಸಿರುವ ಹಿನ್ನೆಲೆಯಲ್ಲಿ ರಾಜ್ಯದ ಸರ್ವ ಕಲಾವಿದರಿಗೂ ಸಂತಸ ತಂದಿದೆ ಎಂದು ಕರ್ನಾಟಕ ರಾಜ್ಯ ಸರ್ವ ಕಲಾವಿದರು ಒಕ್ಕೂಟದ ಅಧ್ಯಕ್ಷರು ಹಾಗೂ ಬಾಗಲಕೋಟೆಯ ಗಾನಯೋಗಿ ಪಂ. ಪಂಚಾಕ್ಷರಿ ಗವಾಯಿಗಳ ಪ್ರತಿಷ್ಠಾನದ ಉಪಾಧ್ಯಕ್ಷರಾದ ಪ.ಪೂ. ಶರಣಬಸವ ಶಾಸ್ತ್ರಿಗಳು ಸಂತಸವನ್ನು ಹಂಚಿಕೊಂಡರು.

ಅವರು ಮುಧೋಳ ತಾಲೂಕಿನ ಸುಕ್ಷೇತ್ರ ಮುಗಳಖೋಡ ಗ್ರಾಮದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ನಡೆದ “ನಿತ್ಯ ತತ್ವ ಚಿಂತನ” “ಭಕ್ತಿ ಬೆಳಗು” ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಈ ಇಬ್ಬರು ದಿಗ್ಗಜ ನಟರ ಅಮೋಘ ಸೇವೆ ವರ್ಣನೆಗೆ ಮೀರಿದ್ದು. ಇಂತಹ ಕಲಾವಿದರಿಗೆ ಈ ಹಿಂದೆ ಈ ಗೌರವ ಸಿಗಬೇಕಾಗಿತ್ತು ಎಂದ ಅವರು ಕಲಾವಿದರ ಸೇವೆಯನ್ನ ಪರಿಗಣಿಸಿ ವಿಶಿಷ್ಟವಾದ ಗೌರವವನ್ನು ನೀಡಿರುವುದು ಸರ್ಕಾರದ ಕರ್ತವ್ಯ ಪ್ರಜ್ಞೆಗೆ ಸಾಕ್ಷಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ರಂಗನಗೌಡ ಮಂಟೂರ, ಪರಮಾನಂದ ಸುನಗಾರ,  ಶಂಕರಗೌಡ. ಎಸ್.ಪಾಟೀಲ, ಲೋಕನಾಯಕಿ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಎಲ್ ಶ್ಯಾಮಲಾ, ಶ್ರೀಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನದ ಮುಖಂಡರಾದ ಬಿ.ಎಂ.ಹಿಪರಗಿ,  ಶ್ರೀಶೈಲಗೌಡ ಪಾಟೀಲ ಮುಂತಾದವರು ಸರ್ಕಾರಕ್ಕೆ ಸಲಾಂ ಹೇಳಿದರು.

ಆಶ್ರಮದ ಕುಮಾರ ಗುರುಪ್ರಸಾದ ಸ್ವಾಮೀಜಿ ಅವರ ಸಮ್ಮುಖದಲ್ಲಿ ಭಕ್ತಿ ಬೆಳಗು ಕಾರ್ಯಕ್ರಮಗಳು ನಡೆದವು. ಎಲ್ ಶ್ರೀನಿವಾಸ ಪ್ರಸಾದ್ ಸರ್ವರನ್ನು ಸ್ವಾಗತಿಸಿ ವಂದಿಸಿದರು

Latest News

ಶಿರೀಷಗೆ ಗಡಿತಿಲಕ, ಶಶಿಗೆ ಜನ್ನಾ ಪ್ರಶಸ್ತಿ

ಬೆಳಗಾವಿ - ಇಲ್ಲಿಯ ಬಿ ಎ ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಪ್ರತಿವರ್ಷ ಕೊಡಮಾಡುವ ಕನ್ನಡ ಗಡಿತಿಲಕ ಪ್ರಶಸ್ತಿಗೆ ಶಿರೀಷ ಅವರು ಆಯ್ಕೆಯಾಗಿದ್ದಾರೆ...

More Articles Like This

error: Content is protected !!
Join WhatsApp Group