ಹಳ್ಳೂರ – ಮಸಗುಪ್ಪಿ ಶ್ರೀ ಮಹಾಲಕ್ಷ್ಮಿ ದೇವಾಲಯ ಕಲ್ಯಾಣ ಮಂಟಪದಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾಯೋಜಿತ ಮೂಡಲಗಿಯಿಂದ ಆಯೋಜಿಸಿದ ನವಜೀವನ ಸಮಿತಿ ಸದಸ್ಯರ ಸಮಾವೇಶ ಹಾಗೂ ಸುಜ್ಞಾನ ನಿಧಿ ಶಿಷ್ಯ ವೇತನ ಮಂಜೂರಾತಿ ಪತ್ರ ವಿತರಣಾ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿದ ನಾಗನೂರಿನ ಡಾ. ಮಾತೋಶ್ರೀ ಕಾವ್ಯ ಶ್ರೀ ಅಮ್ಮನವರು ಮಾತನಾಡಿ ತಂದೆ ತಾಯಿ ಋಣ ತೀರಿಸಲು ಸಾಧ್ಯವಿಲ್ಲ, ಜೀವನದಲ್ಲಿ ಸಹಾಯ ಸಹಕಾರ ನೀಡಿದವರನ್ನು ಮರೆಯದೆ ಸ್ಮರಿಸಬೇಕು. ಈ ಕ್ಷೇತ್ರದಿಂದ ಮಂಜೂರಾದ ಶಿಷ್ಯವೇತನವನ್ನು ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಅನುಕೂಲವಾಗಲೆಂದು ನೀಡಿದ್ದು ಇದರ ಸದುಪಯೋಗಪಡಿಸಿಕೊಳ್ಳಿ. ಅವಶ್ಯಕತೆ ಮುಗಿದ ಮೇಲೆ ಎಲ್ಲವೂ ಭಾರವೆಂದು ತಿಳಿದುಕೊಳ್ಳಬಾರದು. ಎಂದು ಕಿವಿ ಮಾತನ್ನು ಹೇಳಿದರು.
ಮನುಷ್ಯ ಜನ್ಮ ಶ್ರೇಷ್ಠ ಹಾನಿಮಾಡಕೊಳ್ಳಬೇಡಿ, ತಿಳಿದ ನಡೆದಾವ ಹೆಚ್ಚು ಬಾಳತಾನು ಮನುಷ್ಯನ ಜೀವನ ಉದ್ದಾರಕ್ಕೆ ಉಪದೇಶ ಹೇಳುವರ ಮಾತುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಿದರೆ ಪುಣ್ಯದ ಫಲ ಕೊಡುತ್ತದೆ ಮನಸ್ಸು ಭಾವನೆ ಶುದ್ಧವಿದ್ದವರಿಗೆ ಯಾವುದಕ್ಕೂ ಕೊರತೆಯಿಲ್ಲ ಕೆಟ್ಟ ಚಟಗಳಿಗೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳಬೇಡಿರಿ ಆರೋಗ್ಯಕ್ಕೆ ಒಳ್ಳೆಯ ಆಹಾರ ಸೇವನೆ ಒಳ್ಳೆಯದು ಮಹಿಳೆಯರು ,ಯುವಕರು ಮೋಬೈಲ್ ಫೋನುಗಳು ಬಳಕೆ ಕಡಿಮೆ ಮಾಡಿ ಕೆಲಸ ಕಾರ್ಯ ಮಾಡಿ ಒಳ್ಳೆಯ ಬದುಕು ಕಟ್ಟಿಕೊಳ್ಳಿರೆಂದು ಹೇಳಿದರು.
ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಶ್ರೀಮತಿ ನಾಗರತ್ನ ಹೆಗಡೆ ರವರು ಮಾತನಾಡಿ ಧರ್ಮಸ್ಥಳದ ಹೆಸರು ಕೆಡಿಸಲು ಸಾಕಷ್ಟು ಷಡ್ಯಂತ್ರ ನಡೆಸಿದ್ದರು ಸತ್ಯಕ್ಕೆ ಜಯ ಸಿಕ್ಕಿದೆ ಎಲ್ಲರ ಜೀವನವು ಸುಖಮಯಾಗಿರಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬಸವರಾಜ ಬುಜನ್ನವರ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಗ್ರಾಮದಲ್ಲಿ ಸಾವಿರಾರು ಕುಟುಂಬಗಳು ಸುಖ ಸಂಸಾರ ಮಾಡುತ್ತಿವೆ ಶಿಷ್ಯ ವೇತನ 40 ಸಾವಿರ ಹಣದಿಂದ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯಲು ಅನುಕೂಲವಾಗಿದೆ .125 ಜನ ಮದ್ಯವರ್ಜನ ಶಿಬಿರದಲ್ಲಿಬಾಗವಸಿ ಸರಾಯಿ ಕುಡಿತದಿಂದ ಮುಕ್ತರಾಗಿದ್ದಾರೆ ಎಂದು ಹೇಳಿದರು.
ಮೂಡಲಗಿ ತಾಲೂಕಿಗೆ ಮಂಜೂರಾದ 116 ಮಂದಿ ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಶಿಷ್ಯವೇತನದ ಮಂಜೂರಾತಿ ಪತ್ರವನ್ನು ವಿತರಿಸಲಾಯಿತು.
ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು
ನಂತರದಲ್ಲಿ ನವ ಜೀವನ ಸಮಿತಿಯ ಸದಸ್ಯರಾದ ಶಿವಾನಂದ ಗೋಟೂರ, ವಕೀಲರಾದ ಆರ್ ಬಿ ಮಮದಾಪುರ, ಪತ್ರಕರ್ತ ಮುರಿಗೆಪ್ಪ ಮಾಲಗಾರ, ತಾಲೂಕಾ ಯೋಜನಾಧಿಕಾರಿ ರಾಜು ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು.
ಹಿರಿಯರಾದ ಸಂಜು ಹೊಸಕೋಟೆ, ಬರಮಣ್ಣ ಗಂಗನ್ನವರ್, ಬರ್ಮಣ್ಣ ಆಶಿರೊಟ್ಟಿ,ಬಾಳಪ್ಪ ಗಂಗಣ್ಣವರ್, ಜನಜಾಗೃತಿ ವೇದಿಕೆಯ ಸದಸ್ಯರಾದ ಉದಯ್ ಗೌಡ, ವಿರೂಪಾಕ್ಷಪ್ಪ ಕೊಳವಿ, ಉಮೇಶ ಹಡಗಲಿ, ಮಂಜುಳಾ ಹಿರೇಮಠ, ಕಾಮಾಕ್ಷಿ ನಾಯಕ್, ಅಶ್ವಿನಿ ಹಿರೇಮಠ, ಸೇವಾ ಪ್ರತಿನಿಧಿಗಳು, ನವ ಜೀವನ ಸಮಿತಿಯ ಸದಸ್ಯರು, ಪೋಷಕರು ಹಾಗೂ ಸುಜ್ಞಾನ ನಿಧಿ ಶಿಷ್ಯ ವೇತನ ಪಡೆದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು, ಕಾರ್ಯಕ್ರಮವನ್ನು ಜ್ಞಾನವಿಕಾಸ ಸಮನ್ವಯಾಧಿಕಾರಿ ವಿಜಯಲಕ್ಷ್ಮಿ ನಿರೂಪಿಸಿ, ವಂದಿಸಿದರು.

