ಸಿಂದಗಿ; ಕಾಯಕ ಮತ್ತು ಶ್ರಮ ಸಂಸ್ಕೃತಿಗೆ ಸಿದ್ಧರಾಮೇಶ್ವರರು ತೋರಿದ ಕಾಳಜಿ ನಮಗೆ ಅನುಕರಣೀಯವಾಗಿದೆ ಎಂದು ಶ್ರೀ ಷ ಬ್ರ ಶಿವಬಸವ ಶಿವಾಚಾರ್ಯರು ನುಡಿದರು.
ತಾಲೂಕಿನ ಕೆರುಟಗಿ ಗ್ರಾಮದ ಶ್ರೀ ಜಗದ್ಗರು ರೇಣುಕಾಚಾರ್ಯರ ಹಾಗೂ ಶ್ರೀ ಸೊನ್ನಲಗಿ ಶಿವಯೋಗಿ ಶ್ರೀ ಸಿದ್ಧರಾಮೇಶ್ವರರ ಪುರಾಣ ಪ್ರವಚನದಲ್ಲಿ ಸಭೆಯ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿ, ಶ್ರೀ ಸೊನ್ನಲಗಿ ಶಿವಯೋಗಿ ಸಿದ್ದರಾಮೇಶ್ವರ೧೨ನೇ ಶತಮಾನದಲ್ಲಿ ತಾಂಡವವಾಡುತ್ತಿದ್ದ ಜಾತೀಯತೆ, ಅಸಮಾನತೆ, ಮೌಢ್ಯವನ್ನು ತಮ್ಮ ವಚನಗಳ ಮೂಲಕ ಹಿಮ್ಮೆಟ್ಟಿಸುವಲ್ಲಿ ಶರಣರು ಮಾಡಿದ ಸಾಮಾಜಿಕ ಕ್ರಾಂತಿ ಹೊಸ ಮನ್ವಂತರಕ್ಕೆ ನಾಂದಿ ಹಾಡಿದೆ ಎಂದರು.
ಪುರಾಣ ಪ್ರವಚನಕಾರರಾದ ಕಿರಸೂರ ಬ್ರಹ್ನಮಠ ಗೌರಿಶಂಕರ ಪೂಜ್ಯ ಶ್ರೀ ರೇವಣಸಿದ್ದ ದೇವರು ಮಾತನಾಡಿ, ಜಗದ್ಗುರು ರೇಣುಕಾಚಾರ್ಯರ ಪುರಾಣ ಹಾಗೂ ಶ್ರೀ ಸೊನ್ನಲಗಿ ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ವಚನಗಳು ಸಮಾಜದಲ್ಲಿ ಅಂಕು ಡೊಂಕುಗಳನ್ನು ತಿದ್ದಿ ತೀಡಿ ಸನ್ಮಾರ್ಗ ತೋರಿದಾರೆ. ಅವರ ತತ್ವ ಆದರ್ಶಗಳು ಜೀವನದಲ್ಲಿ ರೂಡಿಸಿಕೊಂಡು ಭಕ್ತಿಯ ಸನ್ಮಾರ್ಗದಲ್ಲಿ ನಡೆಯಬೇಕು. ಭಗವಂತನ ಕೃಪೆಯಲ್ಲಿ ಸುಂದರ ಬದುಕನ್ನು ಕಟ್ಟಿಕೊಂಡು ಉತ್ತಮ ಸಂಸ್ಕಾರ ಸಂಸ್ಕೃತಿ ಆಚಾರ- ವಿಚಾರ ಜೀವನದಲ್ಲಿ ಅಳವಡಿಸಿಕೊಂಡು ಮೂಢನಂಬಿಕೆ ಬಿಟ್ಟು ಭಕ್ತಿ ಭಾವದಿಂದ ನಿತ್ಯ ದಾಸೋಹ ಕಾರ್ಯದಲ್ಲಿ ತೊಡಗುವ ಮೂಲಕ ಸಾತ್ವಿಕ ಜೀವನ ನಡೆಸಬೇಕು .ಮನೆಯಲ್ಲಿ ಮನೆ ತುಂಬಾ ಮಕ್ಕಳು ಇರಲಿ ಅವರಿಗೆ ಶರಣರ ಸಂತರ ಹೆಸರು ನಾಮಕರಣ ಮಾಡಿ. ಗುರು ಭಕ್ತಿ ವಿಚಾರಗಳು ನಿತ್ಯ ತುಂಬಬೇಕು ಎಂದು ಸಲಹೆ ನೀಡಿದರು.
ಚಿಕ್ಕಸಿಂದಗಿ ಕಾಯಕ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರವಿಸ್ವಾಮಿ ಹತ್ತರಕಿಹಾಳಮಠ ಮಾತನಾಡಿ, ದಾನ ಧರ್ಮ ಪರೋಪಕಾರದಲ್ಲಿ ತನ್ನನ್ನು ತಾನು ಅಳವಡಿಕೊಂಡು ಅಂತಹ ಸತ್ಕಾರ್ಯಗಳಲ್ಲಿ ಭಾಗವಹಿಸಬೇಕು ಎಂದು ವಿವರಿಸಿದರು.
ಕೆರುಟಗಿ ಗ್ರಾಮದ ಶಿಕ್ಷಕ ಖ್ಯಾತ ಗವಾಯಿ ರೇಣುಕಾಚಾರ್ಯ ಹಿರೇಮಠ ಗವಾಯಿಗಳು . ಮಹಾಂತೇಶ ಕಾಳಗಿ ಸಂಗೀತ ಸೇವೆ ನೆರವೇರಿಸಿದರು. ಗ್ರಾಮದ ಭಕ್ತ ಶ್ರೀಶೈಲ ಪಡಶೇಟ್ಟಿ ಬಸವಣ್ಣನವರು ಸ್ಥಾನವಹಿಸಿದರು.
ಸಂಗೀತಾ ಶಿಕ್ಷಕ ರೇಣುಕಾಚಾರ್ಯ ಹಿರೇಮಠ ಸ್ವಾಗತಿಸಿ ವಂದಿಸಿದರು. ಚಿಕ್ಕಸಿಂದಗಿ ಗ್ರಾಮದ ಸರ್ವ ಭಕ್ತರು ಹಾಗೂ ಗ್ರಾಮದ ಭಕ್ತರು ಭಾಗವಹಿಸಿದ್ದರು.

